ಶಿವಮೊಗ್ಗ ಲೈವ್.ಕಾಂ | 17 ಮಾರ್ಚ್ 2019
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಗೆಲ್ಲಿಸುವ ಕುರಿತು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಹಸ್ಯ ಸಭೆ ನಡೆಸಿದರು. ಶಿವಮೊಗ್ಗದ ಜ್ಯುಯಲ್ ರಾಕ್ ಹೊಟೇಲ್’ನಲ್ಲಿ ಸಭೆ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪ್ರಮುಖರಿಗಷ್ಟೇ ಪ್ರವೇಶ
ಹೊಟೇಲ್’ನ ಕೊಠಡಿಯೊಂದರಲ್ಲಿ ಸಭೆ ನಡೆಸಿದ ದೇವೇಗೌಡ, ಮಧು ಬಂಗಾರಪ್ಪ ಗೆಲುವಿಗೆ ಅಗತ್ಯವಿರುವ ತಂತ್ರಗಳ ಕುರಿತು ಮಾಹಿತಿ ಪಡೆದರು. ಅಷ್ಟೇ ಅಲ್ಲ, ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಬೇಕು, ಬೂತ್ ಮಟ್ಟದಲ್ಲಿ ಕ್ಯಾಂಪೇನ್’ಗಳಾಗಬೇಕು ಎಂದು ದೇವೇಗೌಡರು ಸಲಹೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]