ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ನವೆಂಬರ್ 2021
ಸಂಸದರ ನಿಧಿಯಡಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು ಸಂಸದರ ನಿಧಿ ಬಳಕೆಯಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ದೇಶಕ್ಕೆ ಎರಡನೇ ಸ್ಥಾನದಲ್ಲಿದ್ದಾರೆ.
2019-20ರ ಸಾಲಿಗೆ ಸಂಬಂಧಿಸಿದಂತೆ 5 ಕೋಟಿ ರೂ. ಅನುದಾನ ಹಾಗೂ 10 ರಿಂದ 15ನೇ ಲೋಕಸಭೆವರೆಗೆ ಬಳಕೆಯಾಗದೆ ಇದ್ದ 4.40 ಕೋಟಿ ರೂ. ಅನುದಾನವೂ ಸೇರಿದಂತೆ 9.40 ಕೋಟಿ ರೂ.ದಲ್ಲಿ ಈಗಾಗಲೇ 9 ಕೋಟಿ ರೂ. ಬಳಕೆ ಮಾಡಿದ್ದಾರೆ.
ಯಾವುದಕ್ಕೆ ಎಷ್ಟೆಷ್ಟು ಬಳಕೆಯಾಗಿದೆ?
ಸಾರ್ವಜನಿಕ ಬಸ್ ಶೆಲ್ಟರ್, ಹೈಮಾಸ್ಟ್ ಲೈಟ್, ಶಾಲಾ ಕೊಠಡಿ ಮತ್ತು ಸಾರ್ವಜನಿಕ ಸಮುದಾಯ ಭವನಕ್ಕೆ 4.70 ಕೋಟಿ ರೂ., ರಸ್ತೆ ನಿರ್ಮಾಣಕ್ಕೆ 2.93 ಕೋಟಿ ರೂ., ಕರೋನಾ ನಿರ್ವಹಣೆಗೆ ಆರೋಗ್ಯ ಇಲಾಖೆಗೆ ಆಂಬುಲೆನ್ಸ್ ಮತ್ತು ಡಯಾಲಿಸಿಸ್ ಯಂತ್ರ ಅಳವಡಿಕೆಗೆ 82.50 ಲಕ್ಷ ರೂ., ಕುಡಿಯುವ ನೀರಿನ ಘಟಕಕ್ಕೆ 42 ಲಕ್ಷ ರೂ. ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ, ಇತ್ಯಾದಿ ಅನೇಕ ಉಪಯುಕ್ತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉಳಿದ ಅನುದಾನ ಬಳಕೆ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೂ ಕಾರಣರಾಗಿದ್ದಾರೆ.
ಎರಡು ಕೋಟಿ ರೂ. ಅನುದಾನ
ಕರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020-21 ಹಾಗೂ 2021-22ರ ಎರಡು ವರ್ಷಗಳ ಸಂಸದರ ನಿಧಿಯನ್ನು ಕರೊನಾ ಸಂಕಷ್ಟದ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ನೀಡಲಾಗಿತ್ತು.
ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈ ಗೊಂಡಿದ್ದು 2021-22ನೇ ಸಾಲಿಗೆ ಸ್ಥಗಿತಗೊಂಡಿದ್ದ ಸಂಸದರ ನಿಧಿಯಲ್ಲಿ 2 ಕೋಟಿ ರೂ. ಬಿಡುಗಡೆ ಮಾಡಿರುವುದಕ್ಕೆ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಶ್ಲಾಘಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200