ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 DECEMBER 2022
ತೀರ್ಥಹಳ್ಳಿ : ತುಂಗಾ ನದಿ ದಂಡೆ ಮೇಲಿರುವ ತೀರ್ಥಹಳ್ಳಿ ಪ್ರಜ್ಞಾವಂತರ ಕ್ಷೇತ್ರ. ರಾಜಕೀಯವಾಗಿ ಹಲವು ಪಕ್ಷಗಳಿಗೆ ಮತ್ತು ನಾಯಕರಿಗೆ ಕ್ಷೇತ್ರದ ಜನ ಅವಕಾಶ ಕಲ್ಪಿಸಿದ್ದಾರೆ. ಇಲ್ಲಿ ಗೆದ್ದವರು ಮುಖ್ಯಮಂತ್ರಿಯಾಗಿದ್ದಾರೆ. ಸಚಿವ ಸಂಪುಟದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದಾರೆ. ಈ ಹಿಂದೆ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾಗಿದ್ದರು. (Tirthahalli Assembly constituency)
1957ರ ಬಳಿಕ ತೀರ್ಥಹಳ್ಳಿ ಕ್ಷೇತ್ರ 14 ವಿಧಾನಸಭೆ ಚುನಾವಣೆಗಳನ್ನು ಕಂಡಿದೆ. ಸಮಾಜವಾದಿ ಪಕ್ಷಗಳು, ಜನತಾ ಪಕ್ಷ, ಕಾಂಗ್ರೆಸ್ ಪಕ್ಷಗಳ ಅಖಾಡವಾಗಿದ್ದ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಅವರು ಬಿಜೆಪಿ ಶಕೆ ಆರಂಭಿಸಿದ್ದಾರೆ.
Tirthahalli Assembly constituency
ಸಿಎಂ ಸ್ಥಾನ ಕಂಡಿದ್ದ ಕ್ಷೇತ್ರ
ಮೈಸೂರು ಸಂಸ್ಥಾನದಲ್ಲಿ ತೀರ್ಥಹಳ್ಳಿ ಕ್ಷೇತ್ರ ಮುಖ್ಯಮಂತ್ರಿ ಹುದ್ದೆಯನ್ನು ಸಮೀಪದಿಂದ ಕಂಡಿತ್ತು. ತೀರ್ಥಹಳ್ಳಿ ಕ್ಷೇತ್ರವನ್ನ ಪ್ರತಿನಿಧಿಸಿದ್ದ ಕಡಿದಾಳು ಮಂಜಪ್ಪ ಅವರು 1956ರ ಆಗಸ್ಟ್ 19ರಂದು ಮುಖ್ಯಮಂತ್ರಿಯಾದರು. 73 ದಿನ ಸಿಎಂ ಆಗಿ ಅಧಿಕಾರ ನಡೆಸಿದ್ದರು.
Tirthahalli Assembly constituency
ಈವರೆಗು ಯಾರೆಲ್ಲ ಗೆದ್ದಿದ್ದಾರೆ?
1957ರ ಮೊದಲ ಚುನಾವಣೆಯಲ್ಲಿ ಎ.ಆರ್.ಭದ್ರಿ ನಾರಾಯಣ (ಕಾಂಗ್ರೆಸ್), 1962 ಮತ್ತು 1967 ಶಾಂತವೇರಿ ಗೋಪಾಲಗೌಡ (ಸೋಷಿಯಲಿಸ್ಟ್ ಪಕ್ಷ), 1972ರಲ್ಲಿ ಕೋಣಂದೂರು ಲಿಂಗಪ್ಪ (ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ), 1978ರಲ್ಲಿ ಕಡಿದಾಳು ದಿವಾಕರ (ಕಾಂಗ್ರೆಸ್), 1983ರಲ್ಲಿ ಡಿ.ಬಿ.ಚಂದ್ರೆಗೌಡ (ಜನತಾ ಪಕ್ಷ), 1985ರಲ್ಲಿ ಪಟ್ಮಕ್ಕಿ ರತ್ನಾಕರ (ಕಾಂಗ್ರೆಸ್), 1989ರಲ್ಲಿ ಡಿ.ಬಿ.ಚಂದ್ರೆಗೌಡ (ಜನತಾ ದಳ) ಆಯ್ಕೆಯಾಗಿದ್ದರು.
1994, 1999 ಮತ್ತು 2004ರಲ್ಲಿ ಆರಗ ಜ್ಞಾನೇಂದ್ರ (ಬಿಜೆಪಿ), 2008 ಮತ್ತು 2013ರಲ್ಲಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್), 2018ರಲ್ಲಿ ಆರಗ ಜ್ಞಾನೇಂದ್ರ (ಬಿಜೆಪಿ) ಆಯ್ಕೆಯಾಗಿದ್ದಾರೆ.
2018ರ ಚುನಾವಣೆ ಫಲಿತಾಂಶ
ಅಭ್ಯರ್ಥಿ | ಪಡೆದ ಮತ |
ಆರಗ ಜ್ಞಾನೇಂದ್ರ | 67,527 |
ಕಿಮ್ಮನೆ ರತ್ನಾಕರ್ | 45,572 |
ಅಂತರ | 21,955 |
2018 ಮತದಾರರ ವಿವರ
ಒಟ್ಟು ಮತದಾರರು | 1,84,189 |
ಚಲಾವಣೆಯಾದ ಮತ | 1,55,725 |
ಶೇಕಡವಾರು ಮತದಾನ | 85.26 |
ಜಾತಿವಾರು ಬಲಾಬಲ
ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚು. ಈಡಿಗ, ಬ್ರಾಹ್ಮಣ, ಲಿಂಗಾಯತ ಮತ್ತು ಮುಸ್ಲಿಂ ಮತದಾರರು ನಿರ್ಣಾಯಕರಾಗಲಿದ್ದಾರೆ. ಪರಿಶಿಷ್ಟ ಜಾತಿಯ ಮತಗಳು ಗಣನೀಯ ಸಂಖ್ಯೆಯಲ್ಲಿದೆ.
Tirthahalli Assembly constituency
ಈಗ ಹೇಗಿದೆ ಅಖಾಡ?
ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಪುನಃ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಚೆಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಗ ಜ್ಞಾನೇಂದ್ರ ಅವರೆ ಬಿಜೆಪಿ ಅಭ್ಯರ್ಥಿ ಎಂದು ಸೂಚ್ಯವಾಗಿ ಹೇಳಿದ್ದರು.
ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ ಗೌಡ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರು ಒಗ್ಗಟ್ಟಿನಿಂದ ಮುಂದಡಿ ಇಟ್ಟರೆ ಪಕ್ಷಕ್ಕೆ ಅನುಕೂಲ ಎಂಬ ಚರ್ಚೆ ಇದೆ. ಇನ್ನು, ಜೆಡಿಎಸ್ ಪಕ್ಷದಲ್ಲಿ ರಾಜಾರಾಮ್ ಯಡೂರು ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ – ಕ್ಷೇತ್ರ ಪರಿಚಯ | ಭದ್ರಾವತಿ – ಯಾರೆ ಗೆದ್ದರು ಇಲ್ಲಿ ಜನರ ಬೇಡಿಕೆ ಒಂದೇ
ಎಲೆ ಚುಕ್ಕೆ ರೋಗ, ಅಡಕೆ ಬೆಳೆ, ಬೆಳೆಗಾರರಿಗೆ ಸಂಬಂಧಿಸಿದ ವಿಷಯಗಳು, ಶರಾವತಿ ಸಂತ್ರಸ್ತರ ಸಂಕಷ್ಟ, ಅಭಿವೃದ್ಧಿ ಕಾರ್ಯಗಳು ಈ ಬಾರಿ ಚುನಾವಣೆ ವಿಷಯವಾಗುವ ಸಾದ್ಯತೆ ಇದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422