ಶಿವಮೊಗ್ಗದಲ್ಲೇ ಇದ್ದರು, ಒಂದೇ ಕಾರ್ಯಕ್ರಮಕ್ಕೆ ಬಂದಿದ್ದರು, ಮುಖಾಮುಖಿ ಆಗಲಿಲ್ಲ ಇಬ್ಬರು ನಾಯಕರು

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | SHIMOGA | 15 ಏಪ್ರಿಲ್ 2022

ಶಿವಮೊಗ್ಗದಲ್ಲಿಯೆ ಇದ್ದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಖಾಮುಖಿಯಾಗಲಿಲ್ಲ. ಇದು ಕಾರ್ಯಕರ್ತರ ಮಧ್ಯೆ ಚರ್ಚೆಗೆ ಕಾರಣವಾಯಿತು.

ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಇವತ್ತು ಶಿವಮೊಗ್ಗ ನಗರದಲ್ಲಿಯೆ ಇದ್ದರು. ಇಬ್ಬರು ಒಂದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೂ ಮುಖಾಮುಖಿಯಾಗಲಿಲ್ಲ.

ಬಿಜೆಪಿ ಕಚೇರಿಗೆ ಭೇಟಿ

ಬಿಜೆಪಿ ಜಿಲ್ಲಾ ಕಚೇರಿ ಹಿಂಭಾಗ ನಗರ ಮತ್ತು ಗ್ರಾಮಾಂತರ ಬಿಜೆಪಿಯ ಪ್ರತ್ಯೇಕ ಕಚೇರಿಗಳನ್ನು ಆರಂಭಿಸಲಾಗಿದೆ. ಇವತ್ತು ಇವೆರಡು ಕಚೇರಿಗಳ ಉದ್ಘಾಟನೆ ಇತ್ತು. ಈ ಕಾರ್ಯಕ್ರಮಕ್ಕೆ ಸಚಿವ ಈಶ್ವರಪ್ಪ ಅವರು ಆಗಮಿಸಿ, ಕೆಲವು ನಿಮಿಷದ ಬಳಿಕ ಮರಳಿದರು. ಇದಾಗಿ ಕೆಲವೆ ಹೊತ್ತಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಕಚೇರಿಗೆ ಆಗಮಿಸಿ, ನೂತನ ಕಚೇರಿ ಉದ್ಘಾಟಿಸಿದರು.

ಖಾಸಗಿ ಕಾರ್ಯಕ್ರಮದಲ್ಲೂ ಭೇಟಿ ಇಲ್ಲ

ಖಾಸಗಿ ಶಾಲೆಯೊಂದರ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅತಿಥಿಗಳಾಗಿದ್ದರು. ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಈಶ್ವರಪ್ಪ ಅವರು ಕಾರ್ಯಕರ್ತರ ಭೇಟಿ, ಬೆಂಗಳೂರಿಗೆ ತೆರಳಬೇಕಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುಬೇಕಾದ ಸಂಕಷ್ಟದ ಪರಿಸ್ಥಿತಿ. ಇಂತಹ ಸಂದರ್ಭ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಬಹುದು ಎಂದು ಕಾರ್ಯಕರ್ತರು ನಿರೀಕ್ಷಿಸಿದ್ದರು. ಆದರೆ ಇಬ್ಬರು ಮುಖಾಮುಖಿ ಆಗದಿರುವುದು ಭೇಟಿಯಾಗದಿರುವುದು ಚರ್ಚೆಗೆ ಕಾರಣವಾಗಿದೆ.

Shimoga Nanjappa Hospital

ಇದನ್ನೂ ಓದಿ | ರಾಜೀನಾಮೆ ಬಳಿಕ ಮುಂದೇನು, ಕಾರ್ಯಕರ್ತರ ಸಭೆಯಲ್ಲಿ ಪ್ಲಾನ್ ಬಿಚ್ಚಿಟ್ಟ ಈಶ್ವರಪ್ಪ

ಈ ಮೇಲ್ – shivamoggalive@gmail.com

WhatsApp Number – 7411700200

Leave a Comment