ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RESULT NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜೊಮಾಟೋ ಡಿಲೆವರಿ ಬಾಯ್ (Zomato) ಬಂಡಿ ರಂಗನಾಥ ಅಚ್ಚರಿ ಪ್ರಮಾಣದ ಮತ ಗಳಿಸಿದ್ದಾರೆ. ಇನ್ನೊಂದೆಡೆ ಅಖಾಡಕ್ಕಿಳಿದಿದ್ದ ಮತ್ತೊಬ್ಬ ಈಶ್ವರಪ್ಪ ಸಾವಿರ ಮತ ಪಡೆಯಲು ಸಾಧ್ಯವಾಗಿಲ್ಲ. ಈ ಮೂಲಕ ಶಿವಮೊಗ್ಗ ಲೋಕಸಭೆ ಚುನಾವಣೆ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ.
ಜೊಮಾಟೊ ಡಿಲೆವರಿ ಬಾಯ್ ಕಮಾಲ್
ಜೊಮಾಟೊ ಡಿಲೆವರಿ ಬಾಯ್ ಕೆಲಸ ಮಾಡುತ್ತಿರುವ ಬಂಡಿ ರಂಗನಾಥ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಇವರು ತುಮಕೂರು ಜಿಲ್ಲೆಯ ಕಲ್ಲಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಮದ ನಿವಾಸಿ. ಚುನಾವಣೆಯಲ್ಲಿ ಬಂಡಿ ರಂಗನಾಥ ಹೆಚ್ಚು ಮತ ಪಡೆದ ನಾಲ್ಕನೆಯವರಾಗಿದ್ದಾರೆ. ಒಟ್ಟು 7266 ಮತ ಗಳಿಸಿದ್ದಾರೆ.
ಇಂಜಿನಿಯರಿಂಗ್ ಪದವೀಧರೆಗೆ ಸಾವಿರ ಸಾವಿರ ಮತ
ವ್ಯವಸಾಯ ಮಾಡಿ ಜೀವ ಕಟ್ಟುಕೊಂಡಿರುವ ತ್ಯಾಗರ್ತಿಯ ಬೆಳಂದೂರು ನಿವಾಸಿ ರವಿಕುಮಾರ್ 4552 ಮತ ಗಳಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರೆ, ಬೆಂಗಳೂರು ನಾಗರಬಾವಿ ನಿವಾಸಿ ಪೂಜಾ ಅಣ್ಣಯ್ಯ 3457 ಮತ, ಬಿಎಸ್‌ಪಿಯ ಎ.ಡಿ.ಶಿವಪ್ಪ 2779 ಮತ, ಶಿವಮೊಗ್ಗ ವಿನೋಬನಗರ ನಿವಾಸಿ ಎನ್.ವಿ.ನವೀನ್ ಕುಮಾರ್ 1993 ಮತ ಗಳಿಸಿದ್ದಾರೆ. ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದ ಅರುಣ ಕಾನಹಳ್ಳಿ 1478 ಮತ ಪಡೆದಿದ್ದಾರೆ.
ಮತ್ತೊಬ್ಬ ಈಶ್ವರಪ್ಪ ಗಳಿಸಿದ್ದೆಷ್ಟು?
ಚುನಾವಣೆಯಲ್ಲಿ ಈಶ್ವರಪ್ಪ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಿಸಿದ್ದು ಕುತೂಹಲ ಮೂಡಿಸಿತ್ತು. ಆದರೆ ಶಿಕಾರಿಪುರದ ಡಿ.ಎಸ್.ಈಶ್ವರಪ್ಪ 695 ಮತ ಗಳಿಸಲು ಮಾತ್ರ ಸಾಧ್ಯವಾಯಿತು. ಪಕ್ಷೇತರ ಅಭ್ಯರ್ಥಿಗಳಾದ ಈ.ಹೆಚ್.ನಾಯಕ 954, ಜಾನ್ ಬೆನ್ನಿ 867, ಗಣೇಶ.ಬಿ (ಬೆಳ್ಳಿ ) 747, ಕುಣಜೆ ಮಂಜುನಾಥ ಗೌಡ 683, ಕೆಆರ್‌ಎಸ್ ಪಕ್ಷದ ಎಸ್.ಕೆ.ಪ್ರಭು 617, ಶಿವರುದ್ರಯ್ಯ ಸ್ವಾಮಿ 599, ಇಮ್ತಿಯಾಜ್ ಅತ್ತಾರ್ 442, ಮೊಹಮ್ಮದ್ ಯುಸುಫ್ ಖಾನ್ 404, ಜಿ.ಜಯದೇವ 368, ಚಂದ್ರೇಖರ್.ಹೆಚ್.ಸಿ 357, ಶ್ರೀಪತಿ ಭಟ್ 344, ಸಂದೇಶ ಶೆಟ್ಟಿ 293, ಸುರೇಶ್ ಪೂಜಾರಿ 220 ಮತ ಪಡೆದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಠೇವಣಿ ಕಳೆದುಕೊಂಡ ಈಶ್ವರಪ್ಪ, ಏನಿದು ಠೇವಣಿ?