SHIVAMOGGA LIVE NEWS | 1 APRIL 2023
SHIMOGA : ಪಿಳ್ಳಂಗಿರಿ ಗ್ರಾಮದಲ್ಲಿ ಈ ಹಿಂದೆ ಇದ್ದ ಮತಗಟ್ಟೆಯನ್ನು (Polling Booth) ಬದಲಾವಣೆ ಮಾಡಲಾಗಿದೆ ಎಂದು ಶಿವಮೊಗ್ಗ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.
ಹಿಂದೆ ಎಲ್ಲಿತ್ತು ಮತಗಟ್ಟೆ?
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ (Polling Booth) ಸಂಖ್ಯೆ 155 ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಳ್ಳಂಗಿರಿಯಲ್ಲಿ ಇತ್ತು. ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಶಾಲೆ ಕಟ್ಟಡ ತೆರವುಗೊಳಿಸಲಾಗಿದೆ. ಹಾಗಾಗಿ ಆ ಶಾಲಾ ಕಟ್ಟಡದಲ್ಲಿದ್ದ ಮತಗಟ್ಟೆಗಳನ್ನು ಬದಲಾವಣೆ ಮಾಡಿ ಚುನಾವಣಾ ಆಯೋಗ ಅನುಮೋದಿಸಿದೆ.
ಹೊಸ ಮತಗಟ್ಟೆ ಎಲ್ಲಿ?
ಮತಗಟ್ಟೆ ಸಂಖ್ಯೆ 155 ಹಾಗೂ 156, ಸರ್ಕಾರಿ ಪ್ರೌಢ ಶಾಲೆ ಪಿಳ್ಳಂಗಿರಿಯಲ್ಲಿ ಮುಂದುವರೆಯುತ್ತದೆ ಎಂದು ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೋಟಿ ಕೋಟಿ ಮೌಲ್ಯದ ಸೀರೆಗಳು ಸೀಜ್, ಕ್ವಿಂಟಾಲ್ ಗಟ್ಟಲೆ ಅಕ್ಕಿ, ನಗದು ವಶಕ್ಕೆ, ಎಲ್ಲೆಲ್ಲಿ ಏನೇನು ಸಿಕ್ತು?