SHIVAMOGGA LIVE NEWS | 25 DECEMBER 2022
ಶಿವಮೊಗ್ಗ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (pragya-singh) ಅವರು ಶಿವಮೊಗ್ಗದಲ್ಲಿ ನಡೆಯುತ್ತಿರುವ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಭಾಷಣ ಮಾಡಿದರು. ಅವರ ಭಾಷಣದ ಪ್ರಮುಖ 10 ಪಾಯಿಂಟ್ ಇಲ್ಲಿದೆ.
ಏನೆಲ್ಲ ಹೇಳಿದರು ಪ್ರಜ್ಞಾ ಸಿಂಗ್ ಠಾಕೂರ್?
1 ಜನ್ಮಭೂಮಿ ನಮಗೆ ಸ್ವರ್ಗಕ್ಕಿಂತಲು ಮಿಗಿಲು. ಇದರ ಋಣ ತೀರಿಸದೆ ನಾವು ಸುಮ್ಮನೆ ಕೂರುವಂತಿಲ್ಲ. ಸ್ವಾತಂತ್ರ್ಯದ ಬಳಿಕವು ನಾವುಗಳು ಪ್ರಾಣ ಅರ್ಪಣೆ ಮಾಡುತ್ತಿದ್ದೇವೆ. ಸತ್ಯ, ಧರ್ಮಕ್ಕಾಗಿ ನಮಗೆ ಪ್ರಾಣ ಅರ್ಪಣೆಯು ಗೊತ್ತಿದೆ. ಬಲಿ ಕೊಡಲು ಕೂಡ ತಿಳಿದಿದೆ. ದೇಶ, ಮಾತೃ ಧರ್ಮಕ್ಕೆ ಧಕ್ಕೆಯಾಗುವ ಪರಿಸ್ಥಿತಿ ಎದುರಾದರೆ ನಾವು ಹೇಡಿಗಳಂತೆ ಮನೆಯಲ್ಲಿ ಕೂರುವುದಿಲ್ಲ. (pragya-singh) 2 ಸ್ವಾತಂತ್ರ್ಯದ ಬಳಿಕವು ಹಲವರು ಜನ್ಮಭೂಮಿಗಾಗಿ, ಧರ್ಮಕ್ಕಾಗಿ ಪ್ರಾಣ ಅರ್ಪಣೆ ಮಾಡಿದ್ದಾರೆ. ಹಿಂದೂಗಳ ಕುರಿತು ಸಾಧ್ವಿ ಪ್ರಜ್ಞಾ ಸಿಂಗ್ ಒಬ್ಬರೆ ಸಂಸತ್ತಿನಲ್ಲಿ ಧ್ವನಿ ಎತ್ತುವುದೇಕೆ ಎಂದು ಪ್ರಶ್ನಿಸುತ್ತಾರೆ. ನಾವು ಸಂಸದರಾಗಿರುವುದೆ ಹಿಂದುಗಳ ರಕ್ಷಣೆಗಾಗಿ. ಸಂಸದರಾಗದೆ ಇದ್ದ ಸಂದರ್ಭದಲ್ಲಿಯು ಜೈಲಿಗೆ ಹೋಗಿ, ಕಷ್ಟ ಅನುಭವಿಸಿದ್ದೇನೆ. ಕೊನೆಯುಸಿರು ಇರುವ ತನಕವು ಹಿಂದು ಧರ್ಮದ ಪರವಾಗಿಯೇ ಮಾತನಾಡುತ್ತೇನೆ. (pragya-singh)ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಕುಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಪ್ಲಾನ್, ಹಳ್ಳಿಗಳನ್ನು ಜನರೆ ಸೂಚಿಸಬಹುದು
4 ಇಲ್ಲಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಈಗ ಹಿಂದೂಗಳ ನೆನಪಾಗಿದೆ. ಅವರ ಮತ್ತೊಬ್ಬ ನಾಯಕನಿಗೆ ಈಗಷ್ಟೆ ಹಿಂದು ಧರ್ವ ಅರ್ಥವಾಗುತ್ತಿದೆ. ಈಗ ತಾವುಗಳು ಹಿಂದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಾವುಗಳು ಹುಟ್ಟಿನಿಂದಲೆ ಹಿಂದೂ ಆಗಿದ್ದೇವೆ. ಅವರಂತೆ ಏಕಾಏಕಿ ಹಿಂದೂ ಆದವರಲ್ಲ. ಇನ್ನಾದರು ಕಾಂಗ್ರೆಸ್ ನಾಯಕರು ಹಿಂದೂಗಳ ಜೊತೆಗೆ ಸಮರ ನಡೆಸುವುದನ್ನು ನಿಲ್ಲಿಸಲಿ.