ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮುಸ್ಲಿಂ ಸಮುದಾಯದ ವಿರುದ್ಧ ಬಹಿರಂಗ ಸಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಟಿಜನ್ಸ್ ಯುನೈಟೆಡ್ ಮೂವ್ಮೆಂಟ್ ಸಂಘಟನೆ ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು.

ಜ.21ರಂದು ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮುಸ್ಲಿ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮತ್ತು ಪ್ರಚೋದನಾಕಾರಿಯಾಗಿ ರೇಣುಕಾಚಾರ್ಯ ಮಾತನಾಡಿದ್ದಾರೆ. ಕೋಮು ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ರೇಣುಕಾಚಾರ್ಯ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಶಾಸಕ ರೇಣುಕಾಚಾರ್ಯ ಅವರ ಪ್ರತಿಕೃತಿಯನ್ನು ದಹಿಸಿದರು. ಸಿಟಿಜನ್ಸ್ ಯುನೈಟೆಡ್ ಮೂವ್ಮೆಂಟ್ ಷಹರಾಜ್, ನಿಸಾರ್ ಅಹಮದ್, ಯಾಹ್ಯಾಖಾನ್, ಮಹಮದ್ ರಫೀ, ಜಾವೀದ್, ಫಕ್ರುದ್ದೀನ್ ಫಸೀವುಲ್ಲಾ, ಜಫುಲ್ಲಾ ಸತ್ತಾರ್ ಖಾನ್, ಮಹಮದ್ ಆರೀಫ್ ಉಲ್ಲಾ ಇದ್ದರು.
- BREAKING NEWS | ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆ, ಎಲ್ಲಿಗೆ?
- ಶಿವಮೊಗ್ಗ ಸೇರಿ ನಾಲ್ಕು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ
- ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ತಪ್ಪಿದ ದುರಂತ, ವಾಹನಗಳಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್
- ಅಡಕೆ ಧಾರಣೆ | 10 ಆಗಸ್ಟ್ 2022 | ಎಲ್ಲೆಲ್ಲಿ ಎಷ್ಟಿದೆ ಧಾರಣೆ?
- ಲಿಂಗನಮಕ್ಕಿ ಜಲಾಶಯದಲ್ಲಿ ಗಂಗೆ ಪೂಜೆ, ಒಂದು ಗೇಟ್ ಮೇಲೆತ್ತಿ ನೀರು ಹೊರಕ್ಕೆ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
A Protest was held at Shimoga Mahaveera Circle Against MLA Renukacharya over his remark on Muslim Community