ಶಿವಮೊಗ್ಗ ಲೈವ್.ಕಾಂ | 7 ಡಿಸೆಂಬರ್ 2018
ಗಾಂಧಿ ಬಜಾರ್ ಆಯ್ತು. ಈಗ ಅದರ ಪಕ್ಕದ ಕಸ್ತೂರ ಬಾ ರಸ್ತೆಯಲ್ಲಿ ತಳ್ಳುಗಾಡಿ ತೆರವಿಗೆ ಒತ್ತಾಯಿಸಿ ಪ್ರತಿಭಟನೆ ಶುರುವಾಗಿದೆ. ಬೆಳಗ್ಗೆಯಿಂದ ಸ್ಥಳೀಯರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಮುಖಂಡರು, ಬಜರಂಗದಳದ ಕಾರ್ಯಕರ್ತರು, ಮೇಯರ್ ಮತ್ತು ಉಪಮೇಯರ್ ಅವರು ಸ್ಥಳೀಯರೊಂದಿಗೆ ಪ್ರತಿಭಟಿಸಿದರು.
ಇದನ್ನೂ ಓದಿ | ಜೆಸಿಬಿ ಜೊತೆ ಫೀಲ್ಡಿಗಿಳಿದ ಪಾಲಿಕೆ ಅಧಿಕಾರಿಗಳು, ಶಿವಮೊಗ್ಗದ ಕಟ್ಟಡ ಮಾಲೀಕರಿಗೆ ಢವಢವ
ತಳ್ಳುಗಾಡಿ ವ್ಯಾಪಾರಿಗಳನ್ನು ಇಲ್ಲಿಂದ ತೆರವು ಮಾಡಬೇಕು ಎಂದು ಒತ್ತಾಯಿಸಿ ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಯುತ್ತಿದೆ. ಕಸ್ತೂರ ಬಾ ರಸ್ತೆಯ ಹರಳೆಣ್ಣೆ ಕೇರಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತೆ ಚಾರುಲಾತ ಸೋಮಲ್ ಅವರು, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ. ಇನ್ನು, ಪಾಲಿಕೆ ಸದಸ್ಯರ ಅನುಮತಿ ಪಡೆಯದೇ ಏಕಾಏಕಿ ತಳ್ಳುಗಾಡಿ ವ್ಯಾಪಾರಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಿರುವುದಕ್ಕೆ ಅಕ್ಷೇಪ ವ್ಯಕ್ತವಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
