ಶಿವಮೊಗ್ಗ ಲೈವ್.ಕಾಂ | SAGARA | 15 ಮಾರ್ಚ್ 2020
ಕಾರು ಚಾಲಕ ಹರ್ಷಕುಮಾರ್ ಮತ್ತು ಪತ್ನಿ ಅನಿತಾ ಅವರ ಸಾವಿನ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಸಾಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಾಗರ ಪಟ್ಟಣ ಠಾಣೆ ಎದುರು ಪ್ರತಿಭಟನೆ ನಡೆಸಿ, ಸರ್ಕಲ್ ಇನ್ಸ್’ಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಗಿದೆ.

ಏನಿದು ಪ್ರಕರಣ?
ಹುಟ್ಟುಹಬ್ಬದ ದಿನವೇ ಸಾಗರದ ಬಸವನಹೊಳೆ ಡ್ಯಾಂ ಬಳಿ ಕಾರು ಚಾಲಕ ಹರ್ಷಕುಮಾರ್ ಮತ್ತು ಪತ್ನಿ ಅನಿತಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೇಕ್ ಕತ್ತರಿಸಿ, ವಿಷ ಸೇವಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರತಿಭಟನಾಕಾರರ ಆರೋಪ, ಆಗ್ರಹವೇನು?
ಹರ್ಷಕುಮಾರ್ ಮತ್ತು ಅವರ ಪತ್ನಿ ಅನಿತಾ ಆತ್ಮಹತ್ಯೆ ಮಾಡಿಕೊಳ್ಳಲು ಬಲವಾದ ಕಾರಣವಿದೆ. ಇದರ ಹಿಂದೆ ಬಿಜೆಪಿ ಮುಖಂಡರೊಬರ ಕೈವಾಡ ಇರುವ ಕುರಿತು ಹರ್ಷಕುಮಾರ್ ಅವರ ಸಹೋದರಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕೂಲಂಕಷ ತನಿಖೆಯಾಗಬೇಕು. ಹರ್ಷಕುಮಾರ್ ಮತ್ತು ಅವರ ಪತ್ನಿಯ ಮೊಬೈಲ್ ಫೋನ್, ಡೈರಿ, ಕರೆ ದಾಖಲೆಗಳನ್ನು ಪರಿಶೀಲಿಸಿ, ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್.ಎಲ್.ಮಂಜುನಾಥ್, ಉಮೇಶ್ ಸೂರನಗದ್ದೆ, ಗಿರೀಶ್ ಕೋವಿ, ಅರುಣ್ ಕುಮಾರ್, ಆಶಾರಾಣಿ, ಪ್ರವೀಣ್, ದೇವರಾಜ್, ಸತೀಶ್, ರವಿ, ಕಾರ್ತಿಕ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]