ಶಿವಮೊಗ್ಗ ಲೈವ್.ಕಾಂ | SAGARA | 15 ಜನವರಿ 2020

ತಾಳಗುಪ್ಪಕ್ಕೆ ಮಂಜೂರಾಗಿರುವ ರೈಲ್ವೆ ಟರ್ಮಿನಲ್ ಅನ್ನು ಏಕಾಏಕಿ ಶಿವಮೊಗ್ಗದ ಕೋಟೆಗಂಗೂರಿಗೆ ಸ್ಥಳಾಂತರಿಸಿರುವ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಕಚೇರಿ ಆವರಣದಲ್ಲಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿದರು.
ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ರೈಲ್ವೆ ಕೋಚಿಂಗ್ ಟರ್ಮಿನಲ್ ಅನ್ನು ಕೋಟಿಗಂಗೂರಿಗೆ ಸ್ಥಳಾಂತರಗೊಳ್ಳಲು ಕಾರಣ ಏನು? ಈ ಬಗ್ಗೆ ಸಾರ್ವಜನಿಕರೆದುರು ಸಾಗರ ಹಾಗೂ ಸೊರಬ ಶಾಸಕರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಯೋಜನೆಯೊಂದನ್ನು ಮಂಜೂರು ಮಾಡಿ ಅದನ್ನು ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ. ಯಾವುದೇ ಕಾರಣಕ್ಕೂ ಟರ್ಮಿನಲ್ ಕೋಟಿಗಂದೂರಿಗೆ ಸ್ಥಳಾಂತರಿಸಬಾರದು. ತಾಳಗುಪ್ಪದಲ್ಲಿಯೇ ಸ್ಥಾಪಿಸುವಂತೆ ಎರಡೂ ಕ್ಷೇತ್ರದ ಶಾಸಕರು ಸಿಎಂ ಹಾಗೂ ಸಂಸದರ ಮೇಲೆ ಒತ್ತಡ ತರಬೇಕು ಎಂದು ಸಾಹಿತಿ ನಾ.ಡಿಸೋಜ ಅವರು ಒತ್ತಾಯಿಸಿದರು.
ಎಚ್.ಬಿ.ರಾಘವೇಂದ್ರ ಮಾತನಾಡಿ, ಶಾಸಕರಾದ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರು ಮತ ನೀಡಿದ ಜನರಿಗೆ ಅನ್ಯಾಯ ಮಾಡುತ್ತಿರುವುದು ದುರಾದೃಷ್ಟಕರ. ಎರಡೂ ಕ್ಷೇತ್ರದ ಮತದಾರರು ನಿಮಗೆ ಮತ ನೀಡದಿದ್ದರೆ ನೀವು ಹೇಗೆ ಶಾಸಕರಾಗುತ್ತಿದ್ದೀರಿ? ಜನರ ಋಣ ತೀರಿಸುವ ಹೊಣೆ ನಿಮ್ಮ ಮೇಲಿದೆ ಎಂಬುದನ್ನು ಮರೆಯಬೇಡಿ ಎಂದರು.
ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತಿ.ನ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ರವಿ ಕುಗ್ವೆ, ಲೇಖಕ ವಿಲಿಯಂ, ಸುಧಾಕರ ಕುಗ್ವೆ, ಶಿವಾನಂದ ಕುಗ್ವೆ, ವಾಮದೇವ ಗೌಡ, ಕನ್ನಪ್ಪ ಬೆಳಲಮಕ್ಕಿ, ಆ.ರಾ.ಶ್ರೀನಿವಾಸ್, ಕನ್ನಪ್ಪ ಮುಳಕೇರಿ, ತುಕಾರಾಮ್ ಸೇರಿದಂತೆ ಹಲವರಿದ್ದರು.
RECENT NEWS | CLICK HERE
- BREAKING NEWS | ಭದ್ರಾವತಿಯಲ್ಲೂ ನಿಷೇಧಾಜ್ಞೆ ಜಾರಿ
- BREAKING NEWS | ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ
- BREAKING NEWS | ಮತ್ತೆ ಭುಗಿಲೆದ್ದ ಸಾವರ್ಕರ್ ಫೋಟೊ ವಿವಾದ, ಶಿವಮೊಗ್ಗದಲ್ಲಿ ಲಘು ಲಾಠಿ ಪ್ರಹಾರ
- ಶಿವಮೊಗ್ಗ ಸಿಟಿ ಸೆಂಟರ್ ಮಾಲ್’ನಲ್ಲಿ ಭಾವಚಿತ್ರ ಪ್ರದರ್ಶನ ವಿವಾದ, ಬಿಗುವಿನ ವಾತಾವರಣ
- ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಇಬ್ಬರು ಸವಾರರು ಸ್ಥಳದಲ್ಲೇ ಸಾವು
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]