SHIVAMOGGA LIVE NEWS | 22 SEPTEMBER 2023
SHIMOGA : ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು (Water) ಹರಿಸುವಂತೆ ಕಾವೇರಿ ನಿಯಂತ್ರಣ ಸಮಿತಿ ಮತ್ತು ಕಾವೇರಿ ನದಿ ನಿರ್ವಾಹಣ ಪ್ರಾಧಿಕಾರ ರಾಜ್ಯಕ್ಕೆ ಆದೇಶ ನೀಡಿದೆ. ಇದು ರಾಜ್ಯದ ಪಾಲಿಗೆ ಮಾರಕವಾಗಿದೆ ಎಂದು ಆರೋಪಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಆಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಟ್ರಸ್ಟ್ನ ಸದಸ್ಯರು, ಮಳೆ ಕಡಿಮೆಯಾಗಿ ಕಾವೇರಿ ಕಣಿವೆಯಲ್ಲಿ ನೀರಿನ (Water) ಕೊರತೆ ಇದೆ. ಇಂತಹ ಸಂದರ್ಭ ತಮಿಳುನಾಡಿಗೆ 15 ದಿನಗಳವರೆಗೆ ಕೆಆರ್ಎಸ್ನಿಂದ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಲಾಗಿದೆ. ರಾಜ್ಯದ ಪಾಲಿಗೆ ಕರಾಳ ಶಾಸನವಾಗಿದೆ ಎಂದು ಆರೋಪಿಸಿದರು.
ಈ ಕೂಡಲೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಎರಡು ರಾಜ್ಯಕ್ಕೆ ತಜ್ಞರ ಸಮಿತಿ ಕಳುಹಿಸಿ ವಾಸ್ತವ ಅರಿತು ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಟ್ರಸ್ಟ್ ಸದಸ್ಯರು ಒತ್ತಾಯಿಸಿದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ವಿಶ್ವ ಹಿಂದೂ ಪರಿಷತ್ನ ಶೌರ್ಯ ಜಾಗರಣ ರಥ, ಯಾವಾಗ ಬರುತ್ತೆ? ಏನೆಲ್ಲ ಕಾರ್ಯಕ್ರಮ ಇರುತ್ತೆ?
ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಎನ್.ನಾಗೇಶ್ ರಾವ್, ಕೆ.ಆರ್.ಶಿವಣ್ಣ, ನರಸಿಂಹಮೂರ್ತಿ, ಸೋಮಶೇಖರಯ್ಯ ಬಿ.ಟಿ, ಜಿ.ವಿ ಮಂಜುಳಾ, ಶಂಕ್ರನಾಯ್ಕ, ಹೆಚ್.ಎಸ್. ಪ್ರಸನ್ನ ಕುಮಾರ್, ಕೊಡ್ಲು ಶ್ರೀಧರ್, ಚಿಕ್ಕಮಟ್ಟಿ ಗೋವಿಂದ ಸ್ವಾಮಿ ಪ್ರತಿಭಟನೆಯಲ್ಲಿದ್ದರು.