ಶಿವಮೊಗ್ಗ ಲೈವ್.ಕಾಂ | ಸೊರಬ | 10 ಜುಲೈ 2019
ಶರಾವತಿ ನದಿಗಾಗಿ ನಡೆದ ಹೋರಾಟಕ್ಕೆ ಸೊರಬ ತಾಲೂಕಿನಲ್ಲೂ ಭಾರೀ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಸೊರಬ ಪಟ್ಟಣ ಬಂದ್ ಆಗಿತ್ತು.
ಮೆಡಿಕಲ್ ಶಾಪ್, ಅಸ್ಪತ್ರೆ ಹೊರತು ಮತ್ತಿನ್ಯಾವ ಅಂಗಡಿಗಳು ಸೊರಬದಲ್ಲಿ ಬಾಗಿಲು ತೆಗೆದಿರಲಿಲ್ಲ. ವ್ಯಾಪಾರ ವಹಿವಾಟು ಸ್ಥಬ್ಧವಾಗಿತ್ತು. ಖಾಸಗಿ ಬಸ್’ಗಳು ರಸ್ತೆಗಿಳಿದಿರಲಿಲ್ಲ. ವಾಹನ ಸಂಚಾರವೂ ಕಡಿಮೆಯಾಗಿತ್ತು.
ಇನ್ನು, ಸೊರಬದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣದ ಸರ್ಕಲ್’ವರೆಗೆ ಬಂದು ಅಲ್ಲಿಂದ ಪುನಃ ಶ್ರೀ ರಂಗನಾಥಸ್ವಾಮ ದೇವಸ್ಥಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]