ಶಿವಮೊಗ್ಗ ಲೈವ್.ಕಾಂ | 23 ಮೇ 2019
ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಕಾರ್ಯಕರ್ತರೊಂದಿಗೆ ಡಾನ್ಸ್ ಮಾಡಿದರು. ವಿನೋಬನಗರದ ತಮ್ಮ ಮನೆ ಬಳಿ ಚಂಡೆ, ತಾಳಕ್ಕೆ ಹೆಜ್ಜೆ ಹಾಕಿದರು.
ಕಾರ್ಯಕರ್ತರೊಂದಿಗೆ ಕೆಲ ಕ್ಷಣ ಡಾನ್ಸ್ ಮಾಡಿದ ರಾಘವೇಂದ್ರ, ಬಳಿಕ ಚಂಡೆ ಬಾರಿ ಸಂಭ್ರಮಿಸಿದರು.
ಇನ್ನು, ಗೆಲುವಿನ ಸಂಭ್ರಮದೊಂದಿಗೆ ಮನೆಗೆ ಬಂದ ರಾಘವೇಂದ್ರ ಅವರನ್ನು ಸಹೋದರಿಯರು, ಅರತಿ ಬೆಳಗಿದರು. ಈ ವೇಳೆ, ಗೆಲುವಿನ ಲೆಕ್ಕಚಾರವೆಲ್ಲ ಇವರ ಬಳಿಯಿದೆ ಎಂದು ಶಾಸಕ ಹಾಲಪ್ಪ ಅವರತ್ತ ಕೈ ತೋರಿಸಿದ ರಾಘವೇಂದ್ರ, ಅವರಿಗೂ ಆರತಿ ಬೆಳಗುವಂತೆ ಸಹೋದರಿಯರಿಗೆ ತಿಳಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
