SHIVAMOGGA LIVE NEWS
ಶಿವಮೊಗ್ಗ | ನಗರದ ವಿವಿಧೆಡೆ ಸಂಜೆ ವೇಳೆಗೆ ಭಾರಿ ಮಳೆ ಸುರಿಯುತ್ತಿದೆ. ಜೋರು ಮಳೆಯಿಂದಾಗಿ ಹಲವು ಕಡೆ ಕಟ್ಟಡಗಳಿಗೆ ನೀರು ನುಗ್ಗಿದೆ.
ಶಿವಮೊಗ್ಗದ ಬೈಪಾಸ್ ರಸ್ತೆ, ಊರುಗಡೂರು, ಸೂಳೆಬೈಲು ಸುತ್ತಮುತ್ತ ಭಾರಿ ಮಳೆಯಾಗಿದೆ. ಜೋರು ಮಳೆಗೆ ಚರಂಡಿಗಳು ತುಂಬಿ ಹೋಗಿವೆ. ಆದ್ದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ಮನೆಗಳು, ಕಟ್ಟಡಗಳಿಗೂ ಮಳೆ ನೀರು ನುಗ್ಗಿದೆ.
ಆರ್.ಎಂ.ಎಲ್ ನಗರದಲ್ಲೂ ವಿವಿಧೆಡೆ ಮಳೆ ನೀರು ಮನೆ, ಮಳಿಗೆಗಳಿಗೆ ನುಗ್ಗಿದೆ. ಜನರು ಮಳೆ ನೀರನ್ನು ಹೊರಗೆ ಹಾಕಲು ಹರಸಾಹಸ ಪಡುತ್ತಿದ್ದಾರೆ.
ಇನ್ನು, ಎನ್.ಟಿ.ರಸ್ತೆಯಲ್ಲಿಯು ವಿವಿಧೆಡೆ ಮಳಿಗೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಕಟ್ಟಡವೊಂದರ ನೆಲ ಅಂತಸ್ತಿನ ಅಂಗಡಿಗಳಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ನುಗ್ಗಿದೆ.
ಭಾರಿ ಮಳೆಯಿಂದಾಗಿ ಶಿವಮೊಗ್ಗ ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿನ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.
ಇದನ್ನೂ ಓದಿ – ನೆಟ್ ವರ್ಕ್ ಸಮಸ್ಯೆ, ಕೇಂದ್ರ ಸಚಿವರಿಗೆ ಹಳ್ಳಿಗಳ ಹೆಸರಿನ ಪಟ್ಟಿ ಸಹಿತ ಮನವಿ, ಯಾವೆಲ್ಲ ಊರಿನ ಹೆಸರಿದೆ?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.