ಶಿವಮೊಗ್ಗ ಲೈವ್.ಕಾಂ | SAGARA | 14 ಫೆಬ್ರವರಿ 2020

ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬ ದೇವಿ ಜಾತ್ರೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಜಾತ್ರೆಯ ಅಂಗವಾಗಿ 16 ಅಡಿ ಎತ್ತರದ ಆಕರ್ಷಕ ಮೂರ್ತಿ ಸಿದ್ಧಪಡಿಸಲಾಗುತ್ತಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಸಾಗರ ಪಟ್ಟಣದ ಜಡೆ ಮಂಜಪ್ಪ ಗುಡಿಗಾರ್ ಕುಟುಂಬದವರು, ಮೂರ್ತಿ ಸಿದ್ಧತೆಯ ಕಾರ್ಯದಲ್ಲಿ ತೊಡಿದ್ದಾರೆ. ಮೂರ್ತಿ ಸಿದ್ಧವಾಗಿದ್ದು, ಅಲಂಕಾರ ಮಾಡಲಾಗುತ್ತಿದೆ. ಸಾಗರ ಮಾರಿಕಾಂಬ ದೇವಿ ಜಾತ್ರೆಗೆ ಇದೇ ಮನೆತನದವರು ಮುಂಚಿನಿಂದಲೂ ಮೂರ್ತಿ ಸಿದ್ಧಪಡಿಸುತ್ತಿದ್ದಾರೆ.
ಫೆಬ್ರವರಿ 16ರಿಂದ ಒಂಭತ್ತು ದಿನ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾಗರ ಪಟ್ಟಣದಾದ್ಯಂತ ಅಲಂಕಾರ ಮಾಡಲಾಗುತ್ತಿದೆ. ಸ್ವಗತ ಕಮಾನು, ಅಗತ್ಯವಿರುವ ಕಡೆಗೆ ಪೆಂಡಾಲ್ ಹಾಕಲಾಗುತ್ತಿದೆ.
ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರ ಮಾರಿಕಾಂಬ ಜಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ದೇವಿಯ ದರ್ಶನ ಮತ್ತು ಪೂಜೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]