ಶಿವಮೊಗ್ಗ ಲೈವ್.ಕಾಂ | SAGARA | 26 ಫೆಬ್ರವರಿ 2020
ಸಾಗರದ ಐತಿಹಾಸಿಕ ಶ್ರೀ ಮಾರಿಕಾಂಬ ಜಾತ್ರೆಗೆ ತೆರೆಬಿದ್ದಿದೆ. 9 ದಿನ ನಡೆದ ಅದ್ಧೂರಿ ಜಾತ್ರೆಯಲ್ಲಿ ಲಕ್ಷಾಂತರ ಜನರು ಶ್ರೀದೇವಿಯ ದರ್ಶನ ಪಡೆದರು.

ನಿತ್ಯ ಸಾವಿರಾರು ಜನರು ಸರತಿ ಸಾಲಿನಲ್ಲಿ ದೇವಿಗೆ ಉಡಿ ಸಮರ್ಪಿಸುವ ಮೂಲಕ ಹರಕೆ ತೀರಿಸಿದರು. ಶ್ರೀದೇವಿಗೆ ಕುಂಕುಮಾರ್ಚನೆ, ತುಲಾಭಾರ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಸಾಗರದ ಜನರು ಹಬ್ಬಕ್ಕಾಗಿಯೇ ಆಗಮಿಸಿ ದರ್ಶನ ಪಡೆದರು.
ದಾಸೋಹಕ್ಕೆ ಒಂದು ಲಕ್ಷ ಜನ
ಮಾರಿಕಾಂಬ ಜಾತ್ರೆಯಲ್ಲಿ ಪ್ರತಿದಿನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ವೇಳೆ 1 ಲಕ್ಷಕ್ಕೂ ಅಧಿಕ ಜನರು ದಾಸೋಹದಲ್ಲಿ ಊಟ ಮಾಡಿದ್ದಾರೆ. ಅಲ್ಲದೇ ಸಾಗರ ಹೊಟೇಲ್ ವೃತ್ತದ ನಗರಸಭೆ ಸಂಕೀರ್ಣದಲ್ಲಿ ಸ್ನೇಹಿತರು ಸಾಗರ ವತಿಯಿಂದ ಪ್ರತಿದಿನ ಮಧ್ಯಾಹ್ನ ಉಚಿತ ಊಟ ನೀಡಲಾಗುತ್ತಿತ್ತು. ಸ್ವಯಂಸೇವಾ ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಸಹ ವಿವಿಧೆಡೆ ಅನ್ನ ಸಂತರ್ಪಣೆ ಮಾಡಿದರು.

ಪ್ರತಿ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ನಮ್ಮೂರಿನ ಶ್ರೀ ಮಾರಿಕಾಂಬ ಜಾತ್ರೆಯಲ್ಲಿ ತಪ್ಪದೇ ಭಾಗವಹಿಸುತ್ತಿದ್ದೇನೆ. ಜಾತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಜನತೆ ತೋರಿಸುತ್ತಿರುವ ಪ್ರೀತಿಗೆ ಚಿರಋಣಿಯಾಗಿದ್ದೇನೆ. ಗಟ್ಟಿಮೇಳ ಧಾರವಾಹಿಯ ಆದ್ಯಾ ಪಾತ್ರ ಹೆಚ್ಚು ಇಷ್ಟವಾಗಿರುವ ಬಗ್ಗೆ ಜನರು ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಕಿರುತೆರೆ ನಟಿ ಪಾರ್ವತಿ ತಿಳಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
