ಶಿವಮೊಗ್ಗ ಲೈವ್.ಕಾಂ | 23 ಮಾರ್ಚ್ 2019
ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕಿನ ಐಗಿನಬೈಲು ಬಳಿ ಘಟನೆ ನಡೆದಿದೆ. ಅಡುಗೆ ಅನಿಲ ಸಿಲಿಂಡರ್ ತುಂಬಿದ್ದ ಲಾರಿ ಮತ್ತು ಡಾಂಬರ್ ಸಾಗಿಸುತ್ತಿದ್ದ ಲಾರಿಗಳು ಡಿಕ್ಕಿಯಾಗಿವೆ.

ಅಡುಗೆ ಅನಿಲ ಸಿಲಿಂಡರ್ ಲಾರಿ ಚಾಲಕ ಲೋಕೇಶ್, ಡಾಂಬರ್ ಲಾರಿ ಚಾಲಕ ಸಚಿನ್, ಕ್ಲೀನರ್ ಮಾಲಕಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಲಿಂಡರ್ ಲಾರಿ ಕ್ಲೀನರ್ ಉಮೇಶ್, ಗಂಭೀರ ಗಾಯಗೊಂಡಿದ್ದು, ಸಾಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದಿಂದಾಗಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಲಾರಿಯಲ್ಲಿ ಸಿಲಿಂಡರ್’ಗಳಿದ್ದಿದ್ದರಿಂದ ಸ್ಥಳೀಯರು ಆತಂಕ್ಕಕೀಡಾಗಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸಿಲಿಂಡರ್ ಲಾರಿಯ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]