ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಶ್ರೀ ಕ್ಷೇತ್ರ ಕೂಡಲಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಕೂಡಲಿ ಗ್ರಾಮಸ್ಥರು ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೂಡಲಿ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಗ್ರಾಮವಾಗಿದ್ದು ಇತ್ತೀಚೆಗೆ ಮರಳುಗಾರಿಕೆಯಿಂದ ಈ ಗ್ರಾಮ ಅಳಿವಿನ ಅಂಚಿಗೆ ಸಾಗುತ್ತಿದೆ ಎಂದು ಆರೋಪಿಸಿದರು.

ಮರಳು ಗಣಿಗಾರಿಕೆಯಿಂದ ಇಡೀ ಗ್ರಾಮವೇ ನಶಿಸಿ ಹೋಗುವಂತಹ ಸ್ಥಿತಿಗೆ ತಲುಪಿದೆ. ಕೂಡಲಿ ಶ್ರೀ ಕ್ಷೇತ್ರ ಶಂಕರಾಚಾರ್ಯರ ಸ್ಥಾಪಿತ ಮೂಲ ಶಾರದಾಂಬೆಯ ಮಹಾಸಂಸ್ಥಾನ, ಆರ್ಯ ಆರೋಭ್ಯ ತೀರ್ಥ ಮಹಾಸಂಸ್ಥಾನಗಳು ಇಲ್ಲಿದ್ದು, ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಹತ್ತಾರು ದೇವಸ್ಥಾನಗಳಿವೆ. ಅಂದಾಜು 2,500 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಪವಿತ್ರ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಇದಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಅಕ್ರಮವಾಗಲಿ ಸಕ್ರಮವಾಗಲಿ ಮರಳು ಗಣಿಗಾರಿಕೆ ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮರಳು ಗಣಿಗಾರಿಕೆಯಿಂದ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಜನತೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ದನ ಕರುಗಳು ನೀರು ಕುಡಿಯಲು ಹೋಗಿ ಮಣ್ಣು ಕುಸಿದು ಪ್ರಾಣ ಕಳೆದುಕೊಂಡಿವೆ ಎಂದು ದೂರಿದರು. ಮರಳು ಗಣಿಗಾರಿಕೆ ನಿಲ್ಲಿಸಬೇಕು ಮತ್ತು ಕೂಡಲಿ ಗ್ರಾಮವನ್ನು ಉಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಗ್ರಾಮಸ್ಥರಾದ ನಿಂಗಪ್ಪ, ಶೇಖರಪ್ಪ, ಕೃಷ್ಣಪ್ಪ, ರಂಗನಾಥ, ಶ್ರೀನಿವಾಸ, ಹರೀಶ್ ಇದ್ದರು.
- ಅಡಿಕೆ ಧಾರಣೆ | 30 ಸೆಪ್ಟೆಂಬರ್ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?
- ಅಮೀರ್ ಅಹಮದ್ ಸರ್ಕಲ್ನಲ್ಲಿ ಅಲಂಕಾರದ ವಿಚಾರದಲ್ಲಿ ಗೊಂದಲ, ಜಮಾವಣೆಯಾದ ಜನ, ಸದ್ಯ ಪರಿಸ್ಥಿತಿ ಶಾಂತ
- 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ ರೈಲುಗಳ ಸಮಯ ಬದಲು?
- JOBS – ಶಿವಮೊಗ್ಗದ ಎರಡು ಕಡೆ ಕೆಲಸ ಖಾಲಿ ಇದೆ
- ಶಿವಮೊಗ್ಗದಲ್ಲಿ ಪ್ರತಿಭಟನೆಗಷ್ಟೆ ಸೀಮಿತವಾಯ್ತು ಬಂದ್, ನೆಹರು ರಸ್ತೆಯಲ್ಲಿ ಮಾತಿನ ಚಕಮಕಿ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]