ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018
ಇಂಜಿನಿಯರಿಂಗ್ ಪದವೀಧರೊಬ್ಬರು ಭದ್ರಾವತಿಯಲ್ಲಿ ಜೈನ ದೀಕ್ಷೆ ಪಡೆದು, ಸನ್ಯಾಸಿಯಾಗಿದ್ದಾರೆ. ಮೂರು ದಿನ ನಡೆದ ಕಾರ್ಯಕ್ರಮದ ಕೊನೆಯ ದಿನ, ದೀಕ್ಷೆ ಸ್ವೀಕರಿಸಿದ್ದಾರೆ.

ಭದ್ರಾವತಿಯ ಭೂತನಗುಡಿಯ ದಿನೇಶ್ ಜೈನ್, ರಾಜುಲ್ ದೇವಿ ದಂಪತಿಯ ಮಗ ಜಿನೇಶ್ ಕುಮಾರ್ ಜೈನ್ ಜೈನ ಸನ್ಯಾಸಿಯಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿದ್ದ ಜಿನೇಶ್ ಕುಮಾರ್ ಅವರು, ದೀಕ್ಷೆ ಪಡೆದು ಖೀಮಾ ವಿಜಯ್ ಜೀ ಮಹಾರಾಜ್ ಸಾಹೇಬ್ ಆಗಿದ್ದಾರೆ.
ಜಿನೇಶ್ ಕುಮಾರ್ ಜೈನ್ ಆವರೊಂದಿಗೆ ಆಂಧ್ರದ ಭರತ್ ಕುಮಾರ್, ವಿಜಯಪುರದ ಹಸ್ತಿಮಲ್ ಅವರು ದೀಕ್ಷೆ ಪಡೆದಿದ್ದಾರೆ. ಭದ್ರಾವತಿಯ ಕನಕಮಂಟಪ ಮೈದಾದನಲ್ಲಿ ನಡೆದ ಕಾರ್ಯಕ್ರಮಕ್ಕೆ ಕರ್ನಾಟಕ, ರಾಜಸ್ಥಾನದ ವಿವಿಧೆಡೆಯಿಂದ ಜೈನ ಸಮುದಾಯದವರು ಬಂದಿದ್ದರು. ಜೈನ ಮುನಿಗಳಾದ ಶ್ರೀ ವಿಜಯ್ ಅಭಯಚಂದ್ರ ಸೂರಿಶ್ವರ್, ಹೀರ್ ಚಂದ್ರ ಸೂರಿಶ್ವರ್ ಅವರ ನೇತೃತ್ವದಲ್ಲಿ 15 ಸಂತರು, ಐವರು ಸಾಧ್ವಿಯರು ದೀಕ್ಷೆ ಕಾರ್ಯ ನಡೆಸಿಕೊಟ್ಟರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]