ಶಿವಮೊಗ್ಗ ಲೈವ್.ಕಾಂ | SHANKARAGHATTA | 4 ಅಕ್ಟೋಬರ್ 2019
ಟಗರು ಹೀರೋಯಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು. ಗೌರವ ಧನವನ್ನು ನೆರೆ ಸಂತ್ರಸ್ತರಿಗೆ ನೀಡಿದ ನಟಿ. ಭರ್ಜರಿ ಸ್ಟೆಪ್ಸ್ ಹಾಕಿ ವಿದ್ಯಾರ್ಥಿಗಳನ್ನು ರಂಜಿಸಿದ ಮಾನ್ಯತಾ.
ಕುವೆಂಪು ವಿಶ್ವವಿದ್ಯಾಲದಯ ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ನಟಿ ಮಾನ್ವಿತಾ ಹರೀಶ್ ಚಾಲನೆ ನೀಡಿದ್ದಾರೆ. ಜ್ಞಾನ ಸಹ್ಯಾದ್ರಿ ಕ್ಯಾಂಪಸ್’ನಲ್ಲಿರುವ ಕುವೆಂಪು ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸಿದರು. ಬಳಿಕ ಮರವಣಿಗೆಗೆ ಚಾಲನೆ ನೀಡಿದರು.
ಸೆಲ್ಫಿ.. ಸೆಲ್ಫಿ.. ಸೆಲ್ಫಿ..
ಉದ್ಘಾಟನೆಗೆ ನಟಿ ಮಾನ್ವಿತಾ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಮುಗಿಬಿದ್ದು ಸೆಲ್ಫಿ ತೆಗೆಸಿಕೊಂಡರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಪೊಲೀಸರು ಮತ್ತು ವಿವಿ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಇನ್ನು, ಕುವೆಂಪು ಪ್ರತಿಮೆ ಬಳಿಕ ಲಿಫ್ಟ್’ನಲ್ಲಿ ಮೇಲೆ ಹತ್ತಿದ್ದ ನಟಿ ಮಾನ್ವಿತಾ, ತಮ್ಮ ಮೊಬೈಲ್’ನಲ್ಲಿ ವಿದ್ಯಾರ್ಥಿಗಳ ಸೆಲ್ಫೀ ಕ್ಲಿಕ್ಕಿಸಿ ಕ್ರೇಜ್ ಹೆಚ್ಚಿಸಿದರು. ಇನ್ನು, ಗೆಸ್ಟ್ ಹೌಸ್ ಬಳಿ ಮಾನ್ವಿತಾಗಾಗಿ ಕಾದು ಕೂತಿದ್ದ ವಿದ್ಯಾರ್ಥಿಗಳ ಜೊತೆಗೆ ತಾವೆ ಸೆಲ್ಫಿ ತೆಗೆದು ಖುಷಿಪಡಿಸಿದರು.

ಗೌರವಧನ ನೆರೆ ಸಂತ್ರಸ್ತರಿಗೆ ಮೀಸಲು
ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದ ನಟಿ ಮಾನ್ವಿತಾ, ಕುವೆಂಪು ವಿಶ್ವವಿದ್ಯಾಲಯ ನೀಡುವ ಗೌರವಧನವನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸಾ ಭಾಗದ ನೆರೆ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದರು. ಬಳಿಕ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಟಗರು ಸಿನಿಮಾದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದರು.

ಉತ್ಸವದಲ್ಲಿ 60 ಕಾಲೇಜುಗಳು
ಸಹ್ಯಾದ್ರಿ ಉತ್ಸವದಲ್ಲಿ 60 ಕಾಲೇಜುಗಳ ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 23 ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಸಚಿವ ಎಸ್.ಎಸ್.ಪಾಟೀಲ್, ಪ್ರೊ.ವೆಂಕಟೇಶ್ವರುಲು, ಪ್ರೊ.ಹಿರೇಮಣಿನಾಯ್ಕ್, ಡಾ.ಮಂಜುನಾಥ್ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]