ನಗರದಲ್ಲಿ ಪಾರ್ಕಿಂಗ್ ಸುಗಮಗೊಳಿಸಲು ಮಹಾನಗರ ಪಾಲಿಕೆ ಕೈಗೊಂಡಿರುವ ಸೆಲ್ಲರ್ ತೆರವು ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಇವತ್ತು ನಗರದ ಸವಳಂಗ ರಸ್ತೆಯಲ್ಲಿ ಆಪರೇಷನ್ ಶುರುವಾಗಿದೆ.
ನಿಯಮ ಉಲ್ಲಂಘಿಸಿದ ಕಟ್ಟಡಗಳ ಮುಂದೆ ಬೆಳಂಬೆಳಗ್ಗೆಯೇ ಪಾಲಿಕೆಯ ಜೆಸಿಬಿಗಳು ಬಂದು ನಿಂತಿವೆ. ಕಟ್ಟಡ ಮಾಲೀಕರು ತಾವೇ ಸೆಲ್ಲರ್ ತೆರವು ಮಾಡುವುದಾದರೆ, ಡೆಡ್’ಲೈನ್ ನೀಡಿಲಾಗುತ್ತದೆ. ಇಲ್ಲವಾದಲ್ಲಿ ಪಾಲಿಕೆಯ ಜೆಸಿಬಿಗಳೇ ಒಳಗೆ ನುಗ್ಗುತ್ತಿವೆ.
‘ಚುನಾಯಿತ ಪ್ರತಿನಿಧಿಗಳಿಗೇಕೆ ಮಾಹಿತಿ ಕೊಟ್ಟಿಲ್ಲ?’
ಸೆಲ್ಲರ್ ತೆರವು ಕಾರ್ಯಾಚರಣೆ ಪಾಲಿಕೆಯಲ್ಲಿಅಧಿಕಾರಿಗಳು ವರ್ಸಸ್ ಚುನಾಯಿತ ಪ್ರತಿನಿಧಿಗಳು ಎಂಬಂತಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿಯನ್ನೇಕೊಡದ, ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.



ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494