ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020
ಶಿವಮೊಗ್ಗದ ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಸುಗಮವಾಗಿ ನಡೆಯಿತು. ಬಿಜೆಪಿಯ ಸುವರ್ಣ ಶಂಕರ್ ನೂತನ ಮೇಯರ್ ಮತ್ತು ಸುರೇಖಾ ಮುರಳೀಧರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ, ಬಿಗಿ ಭದ್ರತೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾಂಗ್ರೆಸ್, ಜೆಡಿಎಸ್ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ವಿಶೇಷವಾಗಿತ್ತು.
ಯಾರಿಗೆಷ್ಟು ಮತ ಸಿಕ್ತು ಗೊತ್ತಾ?
ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಸುವರ್ಣ ಶಂಕರ್ ವಿರುದ್ಧ ಕಾಂಗ್ರೆಸ್ ಪಕ್ಷದ ಯಮುನಾ ರಂಗೇಗೌಡ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಸುವರ್ಣ ಶಂಕರ್ ಅವರಿಗೆ 26 ಮತಗಳು, ಯಮುನಾ ರಂಗೇಗೌಡ ಅವರಿಗೆ 12 ಮತಗಳು ಬಂದವು. ಅಧಿಕ ಮತ ಪಡೆದಿದ್ದ ಸುವರ್ಣ ಶಂಕರ್ ಅವರನ್ನು ಮೇಯರ್ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಇನ್ನು, ಉಪ ಮೇಯರ್ ಸ್ಥಾನದ ಚುನಾವಣೆಗೆ, ಬಿಜೆಪಿ ಅಭ್ಯರ್ಥಿ ಸುರೇಖಾ ಮುರಳೀಧರ್ ವಿರುದ್ಧ ಕಾಂಗ್ರೆಸ್ ಪಕ್ಷದ ಮೆಹಕ್ ಷರೀಫ್ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಸುರೇಖಾ ಮುರಳೀಧರ್ ಅವರಿಗೆ 26 ಮತಗಳು, ಮೆಹಕ್ ಷರೀಫ್ ಅವರಿಗೆ 12 ಮತಗಳು ಬಂದಿದ್ದವು. ಕೊನೆಗೆ ಸುರೇಖಾ ಮುರಳೀಧರ್ ಅವರನ್ನು ಉಪ ಮೇಯರ್ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಸಂಸದ, ವಿಧಾನ ಪರಿಷತ್ ಸದಸ್ಯ ಗೈರು
ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆಯಲ್ಲಿ 40 ಮತಗಳಿರುತ್ತವೆ. ಬಿಜೆಪಿ ಪರವಾಗಿ ಒಟ್ಟು 28 ಮತಗಳಿವೆ. ಇಬ್ಬರು ಗೈರು ಹಾಜರಿಯಿಂದಾಗಿ 26 ಮತಗಳಷ್ಟೇ ಚಲಾವಣೆಯಾಗಿವೆ. ಸಂಸದ ಬಿ.ವೈ.ರಾಘವೇಂದ್ರ ಮತ್ತು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಚುನಾವಣೆಗೆ ಗೈರಾಗಿದ್ದರು. ಉಳಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಶಾಸಕ ಆಶೋಕ್ ನಾಯ್ಕ್ ಅವರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
- ತಡರಾತ್ರಿ ಗೋದಾಮಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಕ್ವಿಂಟಾಲ್ಗಟ್ಟಲೆ ಶುಂಠಿ ಆಹುತಿ
- ತೀರ್ಥಹಳ್ಳಿಯ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಇನ್ನಿಲ್ಲ
- ಶಿವಮೊಗ್ಗ – ಚಿಕ್ಕಮಗಳೂರು ವಿಧಾನ ಪರಿಷತ್ ಮಾಜಿ ಸದಸ್ಯ ನಿಧನ
- ಶಿವಮೊಗ್ಗದಲ್ಲಿ ಚುನಾವಣಾ ಕಚೇರಿ ಶುರು ಮಾಡಿದ ಆಯನೂರು ಮಂಜುನಾಥ್, ಕುತೂಹಲ ಮೂಡಿಸಿದ ನಡೆ
- ಡ್ಯೂಟಿ ಮುಗಿಸಿ ಆಸ್ಪತ್ರೆಯಿಂದ ಹೊರ ಬಂದ ಡಾಕ್ಟರ್ಗೆ ಕಾದಿತ್ತು ಶಾಕ್
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]