ಶಿವಮೊಗ್ಗದ ಲೈವ್.ಕಾಂ | SHIMOGA NEWS | 14 ಜನವರಿ 2022
ಮನೆಯಲ್ಲಿದ್ದ ಮಿಕ್ಸಿಯೊಳಗೆ ಸೇರಿಕೊಂಡಿದ್ದ ನಾಲ್ಕೂವರೆ ಅಡಿ ಉದ್ದದ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗ ತಾಲೂಕು ಹೊಳೆ ಬೆನವಳ್ಳಿಯ (ಹಕ್ಕಿಪಿಕ್ಕಿ ಕ್ಯಾಂಪ್) ಸಂತೋಷ್ ಅವರ ಮನೆಯ ಮಿಕ್ಸಿಯಲ್ಲಿ ಹಾವು ಸೇರಿಕೊಂಡಿತ್ತು. ಮಿಕ್ಸಿ ಒಳಗೆ ಹಾವು ಸೇರುವುದನ್ನು ಸಂತೋಷ್ ಅವರ ಪತ್ನಿ ಗಮನಿಸಿದ್ದರು.
ಹಾವು ಇರುವ ಮಿಕ್ಸಿಯನ್ನು ಚೀಲದಲ್ಲಿ ಹಾಕಿಕೊಂಡ ದಂಪತಿ, ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದರು. ಚೀಲದ ಸಹಿತ ಹೊಳೆ ಬಸ್ ನಿಲ್ದಾಣದ ಬಳಿಗೆ ದಂಪತಿ, ಅದನ್ನು ಸ್ನೇಕ್ ಕಿರಣ್ ಅವರಿಗೆ ಹಸ್ತಾಂತರಿಸಿದ್ದಾರೆ.
ಚೀಲದಿಂದ ಮಿಕ್ಸಿಯನ್ನು ಹೊರಗೆ ತೆಗೆದ ಸ್ನೇಕ್ ಕಿರಣ್, ಒಳಗೆ ಸೇರಿದ್ದ ಹಾವನ್ನ ರಕ್ಷಣೆ ಮಾಡಿದ್ದಾರೆ. ನಾಲ್ಕೂವರೆ ಅಡಿ ಉದ್ದದ ಕೇರೆ ಹಾವು ಸೇರಿತ್ತು. ಇದನ್ನು ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ.