ಶಿವಮೊಗ್ಗ ಲೈವ್.ಕಾಂ | ಸೊರಬ | 15 ಜುಲೈ 2019
ಸೊರಬ ಪಟ್ಟಣದ ಕಾನಕೇರಿಯಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಈ ಯುವತಿ, ಹಾಸ್ಟೆಲ್ ಒಂದರಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು.
ಅಶ್ವಿನಿ ಕಲ್ಲಹಳ್ಳಿ (21) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಇವತ್ತು ಬೆಳಗ್ಗೆ ಕಾನಕೇರಿಯಲ್ಲಿ, ಅಶ್ವಿನಿ ಮೃತದೇಹ ಪತ್ತೆಯಾಗಿದೆ. ಈಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮಹಳ್ಳಿಯ ಅಶ್ವಿನಿ ಕಲ್ಲಹಳ್ಳಿ, ಒಂದೂವರೆ ವರ್ಷದಿಂದ ಶ್ರೀ ರಂಗನಾಥ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್’ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]