ಶಿವಮೊಗ್ಗ ಲೈವ್.ಕಾಂ | ಸಾಗರ | 20 ಸೆಪ್ಟೆಂಬರ್ 2019

ಹಾಕಿದ್ದ ಬೀಗ ಹಾಗೆ ಇದೆ. ಆದರು ಸಭಾಂಗಣದ ಒಳಗಿದ್ದ ಸ್ಪೀಕರ್’ಗಳು ನಾಪತ್ತೆಯಾಗಿವೆ. ಇದು ಸಾಗರ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ನಡೆದ ವಿಚಿತ್ರ ಕಳ್ಳತನ.

ತಾಲೂಕು ಪಂಚಾಯಿತಿ ಸಭೆ ನಡೆಯುವ ಸಭಾಂಗಣದಲ್ಲಿ ಅಳವಡಿಸಿದ್ದ ಎರಡು ಸ್ಪೀಕರ್’ಗಳು ನಾಪತ್ತೆ ಆಗಿವೆ. ಸಭಾಂಗಣದ ಬಾಗಿಲಿಗೆ ಹಾಕಿದ್ದ ಬೀಗ ಹಾಗೆಯೆ ಇದೆ. ಬೀಗಿ ಒಡೆಯದೆ ಸ್ಪೀಕರ್’ಗಳು ಕಳ್ಳತನವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ದೂರು ನೀಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿರ್ಧರಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]