SHIVAMOGGA LIVE NEWS | 14 FEBRUARY 2023
SHIMOGA : ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವವರ ಮೇಲೆ ಪೊಲೀಸರು ದಾಳಿ (special patrol) ಮುಂದುವರೆಸಿದ್ದಾರೆ. 10 ಮಂದಿಯನ್ನು ಠಾಣೆಗೆ ಎಳೆ ತಂದು ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕರ ನೆಮ್ಮದಿ ಕೆಡಿಸುವವರಿಗೆ ಶಾಸ್ತಿ ಮಾಡಲು ಪೊಲೀಸ್ ಇಲಾಖೆ ಏರಿಯಾ ಡಾಮಿನೇಷನ್ ವಿಶೇಷ ಗಸ್ತು (special patrol) ನಡೆಸುತ್ತಿದೆ. ಸೋಮವಾರ ರಾತ್ರಿ ಗಸ್ತು ನಡೆಸಿದ ಪೊಲೀಸರು ನಗರದ ವಿವಿಧೆಡೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ವಿಚಾರಣೆ ನಡೆಸಿ, 5 ಲಘು ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ – ಎರಡ್ಮೂರು ದಿನ ಯಾರೂ ಇಲ್ಲದ ಮನೆಗಳೆ ಟಾರ್ಗೆಟ್, ಶಿವಮೊಗ್ಗದಲ್ಲಿ 2 ಮನೆ ಬಾಗಿಲು ಮುರಿದ ಕಳ್ಳರು
ದೊಡ್ಡಪೇಟೆ ಠಾಣೆ ಪೊಲೀಸರು ನಗರದ ವಿವಿಧೆಡೆ, ಹೊರವಲಯ ಮತ್ತು ಖಾಲಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರು.