SHIVAMOGGA LIVE | 27 JUNE 2022 | CREDIT SCORE
ಬ್ಯಾಂಕುಗಳಲ್ಲಿ ಸಾಲ ಬೇಕು ಎಂದರೆ CREDIT SCORE ಚನ್ನಾಗಿರಬೇಕು. ಒಂದು ವೇಳೆ CREDIT SCOREಗಳಲ್ಲಿ ವ್ಯತ್ಯಾಸವಾದರೆ ಸಾಲ ಸಿಗುವ ಸಾದ್ಯತೆ ಇರುವುದಿಲ್ಲ. ಬಡ್ಡಿ ದರದಲ್ಲಿಯು ವ್ಯತ್ಯಾಸವಾಗಲಿದೆ. ಇದೆ ಕಾರಣಕ್ಕೆ ಆಗಿಂದಾಗ್ಗೆ ನಿಮ್ಮ CREDIT SCOREಗಳನ್ನು ತಪ್ಪದೆ ಚೆಕ್ ಮಾಡಿಕೊಳ್ಳುತ್ತಿರಬೇಕಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು CREDIT SCORE?
ಯಾವುದೆ ಗ್ರಾಹಕನಿಗೆ ಸಾಲ ನೀಡುವಾಗ ಆತನ ಕ್ರೆಡಿಟ್ ಹಿಸ್ಟರಿಯನ್ನು ಪರಿಶೀಲನೆ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಬ್ಯಾಂಕುಗಳು ಆತನೊಂದಿಗೆ ವ್ಯವಹಾರ ನಡೆಸುತ್ತವೆ. 300 ರಿಂದ 900 ಪಾಯಿಂಟ್’ವರೆಗೆ CREDIT SCORE ಇರಲಿದೆ. 300 ಪಾಯಿಂಟ್ ಅತ್ಯಂತ ಕನಿಷ್ಠ ಪಾಯಿಂಟ್. 900 ಪಾಯಿಂಟ್ಸ್ ಇದ್ದರೆ ಅತ್ಯುತ್ತಮ.
CREDIT SCORE ನಿರ್ವಹಿಸೋದ್ಯಾರು?
ಭಾರತದಲ್ಲಿ ನಾಲ್ಕು ಪ್ರಮುಖ ಬ್ಯೂರೋಗಳು CREDIT SCOREಗಳನ್ನು ನಿರ್ವವಹಿಸುತ್ತವೆ. ಇವುಗಳ ಮೂಲಕವೆ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ನಮ್ಮ ಕ್ರೆಡಿಟ್ ಹಿಸ್ಟರಿಯನ್ನು ಪರಿಶೀಲಿಸುತ್ತವೆ. ಭಾರತದಲ್ಲಿ EXPERIAN, CIBIL, EQUIFAX, CRIF ಬ್ಯೂರೋಗಳ CREDIT SCOREಗಳನ್ನು ನಿರ್ವಹಿಸುತ್ತವೆ. ಸಾಮಾನ್ಯವಾಗಿ CIBIL ಬ್ಯೂರೋದ CREDIT SCOREಗಳಿಗೆ ಹೆಚ್ಚಿನ ಮಾನ್ಯತೆ ಇದೆ. ಇದೆ ಕಾರಣಕ್ಕೆ CREDIT SCOREಗಳನ್ನು CIBIL SCORE ಅಂತಲೂ ಕರೆಯುತ್ತಾರೆ.
CREDIT SCORE ಎಷ್ಟೆದ್ರೆ ಸಾಲ ಸಿಗುತ್ತೆ?
ಸಾಲ ಸಿಗಲು CREDIT SCORE ಪ್ರಮುಖ ಮಾನದಂಡವಾಗಿದೆ. 300 ರಿಂದ 550 ಪಾಯಿಂಟ್ ವರೆಗೆ POOR ಎಂದು ಪರಿಗಣಿಸಲಾಗುತ್ತದೆ. ಇಷ್ಟು ಪಾಯಿಂಟ್ ಇದ್ದರೆ ಸಾಲ ಸಿಗುವುದೆ ಇಲ್ಲ.
550 ರಿಂದ 650 ಪಾಯಿಂಟ್ ವರೆಗೆ AVERAGE, 650 ರಿಂದ 750 ಪಾಯಿಂಟ್ ವರೆಗೆ GOOD, 750 ರಿಂದ 900 ಪಾಯಿಂಟ್ ವರೆಗೆ EXCELLENT ಎಂದು ಪರಿಗಣಿಸಲಾಗುತ್ತದೆ. 750 ಪಾಯಿಂಟ್ ಗಿಂತಲೂ ಹೆಚ್ಚಿಗೆ ಇದ್ದರೆ ಸುಲಭವಾಗಿ ಸಾಲ ಸಿಗಲಿದೆ. ಇದಕ್ಕಿಂತ ಕಡಿಮೆ ಇದ್ದರೆ ಬ್ಯಾಂಕಿನವರು ಸಾಲ ನೀಡುವಾಗ ಹತ್ತಾರು ಭಾರಿ ಯೋಚನೆ ಮಾಡುತ್ತಾರೆ. LOAN APPLICATION ರಿಜೆಕ್ಟ್ ಆಗುವ ಸಂಭವವು ಇದೆ.
CREDIT SCORE ಚೆಕ್ ಮಾಡೋದು ಹೇಗೆ?
ಮುನ್ನೆಚ್ಚರಿಕೆ ಕ್ರಮವಾಗಿ ಆಗಾಗ ದೈಹಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅದೆ ರೀತಿಯ ಆರ್ಥಿಕ ಆರೋಗ್ಯದ ತಪಾಸಣೆಯು ಆಗುತ್ತಿರಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಅಂದಹಾಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ವಿವಿಧ ದೈಹಿಕ ಆರೋಗ್ಯ ತಪಾಸಣೆಗೆ ಆಕರ್ಷಕ ಪ್ಯಾಕೇಜುಗಳನ್ನು ಘೋಷಿಸಲಾಗಿದೆ. ಈಗಲೇ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಿಶ್ಚಿಂತೆಯಿಂದ ಇರಬಹುದಾಗಿದೆ. ಅದರ ವಿವರ ಇಲ್ಲಿದೆ.
CREDIT SCOREಗಳು ಚನ್ನಾಗಿದ್ದರೆ ಆರ್ಥಿಕತೆಯು ಆರೋಗ್ಯವಾಗಿರುತ್ತದೆ. ಇದೆ ಕಾರಣಕ್ಕೆ ಆಗಾಗ CREDIT SCOREಗಳನ್ನು ಪರಿಶೀಲಿಸುತ್ತಿರಬೇಕು. ನಿಮ್ಮ CREDIT SCOREಗಳನ್ನು ಉಚಿತವಾಗಿ ಪರಿಶೀಲನೆ ಮಾಡಬಹುದಾಗಿದೆ. GOOGLE ಸರ್ಚ್’ನಲ್ಲಿ CEDIT SCORE CHECK FOR FREE ಎಂದು ಟೈಪ್ ಮಾಡಿ ಪರಿಶೀಲಿಸಿದರೆ ಹತ್ತಾರು ವೆಬ್ ಸೈಟ್’ಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಈ ಲಿಂಕ್ ಕ್ಲಿಕ್ ಮಾಡಿ https://www.paisabazaar.com/cibil-credit-report/ ಅಗತ್ಯ ಮಾಹಿತಿ ಒದಗಿಸಿ ನಿಮ್ಮ CREDIT SCOREಗಳ ಮಾಹಿತಿ ಪಡೆಯಬಹುದಾಗಿದೆ. ಈಗಲೇ ನಿಮ್ಮೆ CREDIT SCORE ಚೆಕ್ ಮಾಡಿಕೊಳ್ಳಿ, ಆರ್ಥಿಕ ಆರೋಗ್ಯವನ್ನು ಕಾಯ್ದುಕೊಳ್ಳಿ.
ALSO READ : ‘ಮನೆಯಲ್ಲಿ ಕೆಲವೇ ಗಂಟೆ ಕೆಲಸ ಮಾಡಿ ಲಕ್ಷ ಲಕ್ಷ ಸಂಪಾದಿಸಿ’, ಸ್ವಲ್ಪ ಯಾಮಾರಿದರೆ ಬೀಳುತ್ತೆ ಟೋಪಿ