ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
JUST MAHITI : ವಾಟ್ಸಪ್‌ನಲ್ಲಿ ಮತ್ತೊಂದು ವಿಭಿನ್ನ ಅಪ್‌ಡೇಟ್ ಆಗುತ್ತಿದೆ. Instagramನಲ್ಲಿದ್ದ ಫೀಚರ್ ಒಂದನ್ನು ವಾಟ್ಸಪ್‌ನಲ್ಲಿ ಪರಿಚಯಿಸಲು ಸಿದ್ಧತೆಯಾಗುತ್ತಿದೆ. ಇದರಿಂದ ಸ್ಟೇಟಸ್ ಪ್ರಿಯರು ಹೆಚ್ಚು ಖುಷಿಯಾಗಲಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಏನದು ಹೊಸ ಫೀಚರ್?
ವಾಟ್ಸಪ್‌ನ ಸ್ಟೇಟಸ್ ಅಪ್‌ಲೋಡ್ ಫೀಚರ್ ಅತ್ಯಂತ ಜನಪ್ರಿಯ. ಕೆಲವರು ದಿನನಿತ್ಯದ ವಿವರಗಳನ್ನು ಫೋಟೊ, ವಿಡಿಯೋ ಸಹಿತ ಸ್ಟೇಟಸ್‌ಗೆ ಹಾಕುತ್ತಾರೆ. ಪ್ರತಿ ಸ್ಟೇಟಸ್ ಅನ್ನು ಯಾರೆಲ್ಲ ನೋಡಿದರು, ಎಷ್ಟು ಮಂದಿ ವೀಕ್ಷಿಸಿದರು ಎಂದು ಪದೇ ಪದೆ ತಿಳಿಯಲು ಹಂಬಲಿಸುತ್ತಾರೆ. ಇಷ್ಟೆಲ್ಲ ಮಾಡಿಯೂ, ನೋಡಬೇಕಾದವರೆ ಸ್ಟೇಟಸ್ ನೋಡದೆ ಇದ್ದರೆ ಬೇಸರ ಪಟ್ಟುಕೊಳ್ಳುತ್ತಾರೆ. ಈ ಸಮಸ್ಯೆ ದೂರ ಮಾಡುವ ಉದ್ದೇಶದಿಂದಲೇ ಸ್ಟೇಟಸ್‌ಗೆ ಟ್ಯಾಗ್ ಮಾಡುವ ಆಪ್ಷನ್ ಬರುತ್ತಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್‌ಗಳನ್ನು ಟ್ಯಾಗ್ ಮಾಡುವ ಆಪ್ಷನ್ ಇದೆ. ಹಾಗೆಯೇ ಇನ್ಮುಂದೆ ವಾಟ್ಸಪ್‌ನಲ್ಲಿಯು ಸ್ಟೇಟಸ್‌ಗಳಿಗೆ ಟ್ಯಾಗ್ ಮಾಡಬಹುದಾಗಿದೆ. ಹೀಗೆ ಟ್ಯಾಗ್ ಮಾಡಿದಾಗ ಆ ವ್ಯಕ್ತಿಯ ವಾಟ್ಸಪ್‌ಗೆ ನೋಟಿಫಿಕೇಷನ್ ಹೋಗುತ್ತದೆ. ಅವರು ಸ್ಟೇಟಸ್ ನೋಡಬಹುದಾಗಿದೆ.» ಟ್ಯಾಗ್ ಮಾಡೋದು ಹೇಗೆ?
ಟ್ಯಾಗ್ ಮಾಡಿದ್ದು ಯಾರಿಗೂ ಗೊತ್ತಾಗಲ್ಲ
ಇನ್ನು, ಸ್ಟೇಟಸ್‌ನಲ್ಲಿ ಯಾರನ್ನೇ ಟ್ಯಾಗ್ ಮಾಡಿದರೂ ಅದು ಉಳಿದವರಿಗೆ ಗೊತ್ತಾಗುವುದಿಲ್ಲವಂತೆ. ಉಳಿದ ಬಳಕೆದಾರರಿಗೆ ಕೇವಲ ಸ್ಟೇಟಸ್ ಕಾಣಲಿದೆ ಎಂದು ವರದಿಯಾಗಿದೆ. ವಾಟ್ಸಪ್‌ನ ಮುಂದಿನ ಅಪ್‌ಡೇಟ್‌ನಲ್ಲಿ ಈ ಫೀಚರ್ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ » GOOGLE PAY LOAN, ಬ್ಯಾಂಕ್‌ಗೆ ಹೋಗೋದೆ ಬೇಡ, ಸಿಗುತ್ತೆ ಲಕ್ಷ ರೂ. ಸಾಲ