ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAILWAY : ದೇಶಾದ್ಯಂತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಿಗೆ ರೈಲ್ವೆ ಇಲಾಖೆ ವಂದೇ ಮೆಟ್ರೋ ರೈಲುಗಳನ್ನು ಹಳಿಗಿಳಿಸಲು ನಿರ್ಧರಿಸಿದೆ. 2024ರ ಜನವರಿ ಹೊತ್ತಿಗೆ ವಂದೇ ಮೆಟ್ರೋ ರೈಲುಗಳು ಸಂಚಾರ ಆರಂಭಿಸಲಿವೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
250 ರಿಂದ 300 ಕಿ.ಮೀ.ವರೆಗಿನ ದೂರ ಪ್ರಯಾಣಕ್ಕೆ ವಂದೆ ಮೆಟ್ರೋ ರೈಲುಗಳನ್ನು ಓಡಿಸಲು ಯೋಜಿಸಲಾಗಿದೆ. ಪ್ರತಿ ಗಂಟೆಗೆ ಈ ರೈಲು 130 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. ಈಗಾಗಲೆ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಇವುಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಇದರ ಜನರಲ್ ಮ್ಯಾನೇಜರ್ ಮಲ್ಯಾ ತಿಳಿಸಿದ್ದಾರೆ.
ನಿಂತು ಪ್ರಯಾಣಕ್ಕು ಇದೆ ಅವಕಾಶ
ವಂದೇ ಭಾರತ್ ರೈಲುಗಳಲ್ಲಿ ಇರುವ ಎಲ್ಲ ವಿಶೇಷತೆಯು ವಂದೇ ಮೆಟ್ರೋದಲ್ಲಿ ಇರಲಿದೆ. ಆದರೆ ವಂದೇ ಭಾರತ್ ರೈಲು ಬೋಗಿಗಳಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸಲು ಅವಕಾಶವಿಲ್ಲ. ವಂದೇ ಮೆಟ್ರೋದ ಪ್ರತಿ ಬೋಗಿಯಲ್ಲಿ 100 ಪ್ರಯಾಣಿಕರು ಕುಳಿತು, ಸುಮಾರು 200 ಪ್ರಯಾಣಿಕರು ನಿಂತು ಪ್ರಯಾಣಿಸಲು ಸ್ಥಳಾವಕಾಶ ಇರಲಿದೆ.
ಇದನ್ನೂ ಓದಿ – ದಸರಾ ಹಿನ್ನೆಲೆ, ಮೈಸೂರು–ಶಿವಮೊಗ್ಗದ 4 ರೈಲುಗಳಿಗೆ ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ ಸ್ಟಾಪ್?
ಸಂಪೂರ್ಣ ಎಸಿ, ಕುಷನ್ ಸೀಟುಗಳು, ನಾಲ್ಕು ಆಟೋಮೆಟಿಕ್ ಬಂದ್ ಆಗುವ ಬಾಗಿಲುಗಳು, ಸಿಸಿಟಿವಿ ಕ್ಯಾಮರಾ, ಸಾರ್ವಜನಿಕ ಮಾಹಿತಿ ಡಿಸ್ಪ್ಲೇ, ಫೈರ್ ಡಿಟೆಕ್ಷನ್ ಅಲರಾಂ ವ್ಯವಸ್ಥೆ, ದೊಡ್ಡ ಕಿಟಕಿಗಳು, ಮೊಬೈಲ್ ಚಾರ್ಜರ್ ಸಾಕೆಟ್ ಸೇರಿದಂತೆ ಹೈಟೆಕ್ ವ್ಯವಸ್ಥೆಗಳು ವಂದೇ ಮೆಟ್ರೋ ರೈಲಿನಲ್ಲಿ ಇರಲಿದೆ.