KSRTC | ದೀಪಾವಳಿ ಹಬ್ಬಕ್ಕೆ 2 ಸಾವಿರ ವಿಶೇಷ ಬಸ್‌ಗಳು, ಯಾವ್ಯಾವ ಊರಿಗೆ ಸಂಚರಿಸಲಿವೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 NOVEMBER 2023

KSRTC NEWS | ದೀಪಾವಳಿ ಹಬ್ಬಕ್ಕೆ ತಮ್ಮೂರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ 2 ಸಾವಿರ ಹೆಚ್ಚುವರಿ ಬಸ್ಸುಗಳನ್ನು ರಸ್ತೆಗಿಳಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ನವೆಂಬರ್‌ 10 ರಿಂದ 12ರವರೆಗೆ ವಿಶೇಷ ಬಸ್ಸುಗಳು ರಾಜ್ಯ ಮತ್ತು ಹೊರ ರಾಜ್ಯಕ್ಕೆ ಸಂಚರಿಸಲಿವೆ. ನವೆಂಬರ್‌ 14 ರಿಂದ 15ರವರೆಗೆ ವಿವಿಧೆಡೆಯಿಂದ ಬೆಂಗಳೂರಿಗೆ ಬಸ್ಸುಗಳ ಸಂಚರಿಸಲಿವೆ ಎಂದು ಸಾರಿಗೆ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌ ಸೇರಿದಂತೆ ವಿವಿಧೆಡೆಗೆ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ – ಸಾಗರ – ಸೊರಬ – ಶಿಕಾರಿಪುರದಿಂದ ಬೆಂಗಳೂರಿಗೆ ಎರಡು KSRTC ಪಲ್ಲಕ್ಕಿ ಬಸ್‌, ಟೈಮಿಂಗ್‌ ಪ್ರಕಟ

ಮೈಸೂರು ರಸ್ತೆಯಲ್ಲಿರುವ ಬಸ್‌ ನಿ‍ಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿಗೆ ಸಂಚರಿಸಲಿವೆ.

ಶಾಂತಿನಗರದಲ್ಲಿರುವ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು ಸೇರಿದಂತೆ ತಮಿಳುನಾಡಿನ ವಿವಿಧೆಡೆಗೆ ಬಸ್‌ ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಮತ್ತೊಂದು ಹೈಟೆಕ್‌ ಬಸ್‌ ಪರಿಚಯಿಸುತ್ತಿದೆ KSRTC, ಸದ್ಯದಲ್ಲೇ ರಸ್ತೆಗಿಳಿಯಲಿದೆ ‘ಪಲ್ಲಕ್ಕಿ’

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment