ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 MAY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
KSRTC NEWS : ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. 40 ಹೊಸ ಐರಾವತ ಕ್ಲಬ್ ಕ್ಲಾಸ್ (Club Class) ಮತ್ತು ಸ್ಲೀಪರ್ ಬಸ್ಸುಗಳ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಿದೆ. ಹಳೆಯ ಐರಾವತ ಬಸ್ಸುಗಳ ಬದಲಿಸಲು ಯೋಜಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಐದು ವರ್ಷದ ನಂತರ ಐರಾವತ ಬಸ್ಸುಗಳನ್ನು ಖರೀದಿಸಲಾಗುತ್ತಿದೆ. ಹೊಸ ಬಸ್ಸುಗಳು 15 ಮೀಟರ್ ಉದ್ದವಿದೆ. ಬಿಎಸ್ 6 ಇಂಜಿನ್, 40 ಸೀಟುಗಳನ್ನು ಹೊಂದಿವೆ. ಸ್ಲೀಪರ್ ಬಸ್ಸುಗಳಲ್ಲಿ ಪಿಯು ಕುಷನ್, ಗ್ರೇಡ್ 1 ಕ್ವಾಲಿಟಿಯ ರೆಗ್ಸಿನ್ ಬಳಸಲಾಗಿದೆ. ಪ್ರತಿ ಸೀಟ್‌ಗು ಒಂದು ದಿಂಬು ಮತ್ತು ಬ್ಯಾಕ್ ರೆಸ್ಟ್ ಇರಲಿದೆ.
ನಿಗಮದಲ್ಲಿ 13 ಲಕ್ಷ ಕಿ.ಮೀ ಕ್ರಮಿಸಿದ ಬಳಿಕ ಬಸ್ಸುಗಳನ್ನು ಬದಲಿಸುವ ನಿಯಮವಿದೆ. ಈ ಹಿನ್ನೆಲೆ ಹಳೆಯ ಬಸ್ಸುಗಳನ್ನು ಬದಲಿಸಲಾಗುತ್ತಿದೆ. ಪ್ರಸ್ತುತ ಕೆಎಸ್‌ಆರ್‌ಟಿಸಿಯಲ್ಲಿ 8,234 ಬಸ್ಸುಗಳಿವೆ. ಈ ಪೈಕಿ 475 ಪ್ರೀಮಿಯಮ್ ಬಸ್ಸುಗಳು.
ಇದನ್ನೂ ಓದಿ – ಮೊಬೈಲ್‌ಗೆ ಬಂತು 12 SMS, ಓಪನ್ ಮಾಡಿದಾಗ ಬಿಗ್ ಶಾಕ್, ಬ್ಯಾಂಕಿಗೆ ಹೋದಾಗ ಮತ್ತೊಂದು ಆಘಾತ