SHIVAMOGGA LIVE NEWS
SHIMOGA | ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆ ಮಧ್ಯೆ ನಾಲ್ಕು ರೈಲುಗಳು (MYSORE – SHIMOGA – TALAGUPPA) ಸಂಚರಿಸುತ್ತಿವೆ. ಎಲ್ಲಾ ರೈಲುಗಳು ಪ್ರತಿದಿನ ಸಂಚಾರ ಮಾಡುತ್ತಿವೆ. ಈ ಪೈಕಿ ಎರಡು ರೈಲುಗಳಲ್ಲಿ ಸೀಟು ಕಾಯ್ದಿರಿಸಲು (RESERVATION) ಅವಕಾಶವಿದೆ. ಉಳಿದೆರಡು ರೈಲುಗಳು ಜನರಲ್ ಟಿಕೆಟ್ ನೊಂದಿಗೆ ಪ್ರಯಾಣಿಸುವಂತವು.
ಯಾವ್ಯಾವ ರೈಲುಗಳು? ಟೈಮಿಂಗ್ ಏನು?
ಮೈಸೂರು – ತಾಳಗುಪ್ಪ (RESERVATION ರೈಲು) – ರೈಲು ಸಂಖ್ಯೆ 16206
ಈ ರೈಲು ವಾರದ ಎಲ್ಲಾ ದಿನವು ಸಂಚರಿಸಲಿದೆ. ಬೆಳಗ್ಗೆ 6 ಗಂಟೆಗೆ ಮೈಸೂರು ರೈಲ್ವೆ ನಿಲ್ದಾಣದಿಂದ ಹೊರಡಲಿದೆ. ಬೆ.7.58ಕ್ಕೆ ಹಾಸನ, ಬೆ. 10.07ಕ್ಕೆ ತರೀಕೆರೆ ತಲುಪಲಿದೆ. ಬೆ.10.28ಕ್ಕೆ ಭದ್ರಾವತಿ, 11 ಗಂಟೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 12.34ಕ್ಕೆ ಸಾಗರ ಜಂಬಗಾರು, ಮಧ್ಯಾಹ್ನ 1.15ಕ್ಕೆ ತಾಳಗುಪ್ಪ ತಲುಪಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಐದು ನಿಮಿಷದ ನಿಲುಗಡೆ ಇರಲಿದೆ. ಇದರ ಹೊರತು ಉಳಿದೆಲ್ಲ ನಿಲ್ದಾಣಗಳಲ್ಲಿ ಈ ರೈಲು ಒಂದು ಅಥವಾ ಎರಡು ನಿಮಿಷದ ನಿಲುಗಡೆ ಇರಲಿದೆ. ಇದು ಕುಳಿತು ಪ್ರಯಾಣಿಸುವ ರೈಲು. ಎಸಿ ಮತ್ತು ಎಸಿ ರಹಿತ ಬೋಗಿಗಳಿವೆ.
(MYSORE – SHIMOGA – TALAGUPPA)
ಮೈಸೂರು – ತಾಳಗುಪ್ಪ (RESERVATION ರೈಲು) – ರೈಲು ಸಂಖ್ಯೆ 16227
ರಾತ್ರಿ ಪ್ರಯಾಣದ ರೈಲು. ವಾರದ ಎಲ್ಲಾ ದಿನವು ಸಂಚರಿಸಲಿದೆ. ರಾತ್ರಿ 7.30ಕ್ಕೆ ಮೈಸೂರು ರೈಲ್ವೆ ನಿಲ್ದಾಣದಿಂದ ಹೊರಡಲಿದೆ. ರಾತ್ರಿ 10.55ಕ್ಕೆ ಬೆಂಗಳೂರು ತಲುಪಲಿದೆ. 11.15ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ. ತರೀಕೆರೆಗೆ ಬೆಳಗಿನ ಜಾವ 3.43ಕ್ಕೆ ತಲುಪಲಿದೆ. ಭದ್ರಾವತಿಗೆ ಬೆಳಗ್ಗೆ 4.28ಕ್ಕೆ ತಲುಪಲಿದೆ. ಬೆಳಗ್ಗೆ 5ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಬೆಳಗ್ಗೆ 5.05ಕ್ಕೆ ಹೊರಡಲಿದ್ದು, 6.27ಕ್ಕೆ ಸಾಗರ ಜಂಬಗಾರು ನಿಲ್ದಾಣ ತಲುಪಲಿದೆ. 6.32ಕ್ಕೆ ಅಲ್ಲಿಂದ ಹೊರಟು ಬೆಳಗ್ಗೆ 7.10ಕ್ಕೆ ತಾಳಗುಪ್ಪ ತಲುಪಲಿದೆ.
509 ಕಿ.ಮೀ ಪ್ರಯಾಣಿಸುವ ಈ ರೈಲಿನಲ್ಲಿ ಆರು ಬಗೆಯ ಬೋಗಿಗಳಿವೆ. ಎಸಿ, ನಾನ್ ಎಸಿ ಸ್ಲೀಪರ್ ಮತ್ತು ಕುಳಿತು ಪ್ರಯಾಣಿಸುವ ಮಾದರಿಯ ಬೋಗಿಗಳಿವೆ.
(MYSORE – SHIMOGA – TALAGUPPA)
ಮೈಸೂರು ಶಿವಮೊಗ್ಗ ಇಂಟರ್ ಸಿಟಿ ಎಕ್ಸ್ ಪ್ರೆಸ್ – ರೈಲು ಸಂಖ್ಯೆ (16206)
ಬೆಳಗ್ಗೆ ಮೈಸೂರಿನಿಂದ ಹೊರಟು ಮಧ್ಯಾಹ್ನ ಶಿವಮೊಗ್ಗ ತಲುಪಲಿದೆ. ಬೆಳಗ್ಗೆ 10.15ಕ್ಕೆ ಮೈಸೂರಿನಿಂದ ಹೊರಡಲಿದೆ. ಮದ್ಯಾಹ್ನ 12.23ಕ್ಕೆ ಹಾಸನ, ಮಧ್ಯಾಹ್ನ 1.30ಕ್ಕೆ ಅರಸೀಕೆರೆ, ಮಧ್ಯಾಹ್ನ 2.09ಕ್ಕೆ ಕಡೂರು, ಮಧ್ಯಾಹ್ನ, 2.18ಕ್ಕೆ ಬೀರೂರು, ಮಧ್ಯಾಹ್ನ 2.43ಕ್ಕೆ ತರೀಕೆರೆ, ಮಧ್ಯಾಹ್ನ 3.01ಕ್ಕೆ ಭದ್ರಾವತಿ, ಮಧ್ಯಾಹ್ನ 4.25ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ.
ಈ ರೈಲಿನಲ್ಲಿ 17 ಬೋಗಿಗಳಿವೆ. ಎಲ್ಲವು ಜನರಲ್ ಕಂಪಾರ್ಟ್ ಮೆಂಟ್ ಆಗಿದ್ದು, ಟಿಕೆಟ್ ಕಾಯ್ದಿರಿಸುವ ಅವಕಾಶ ಇಲ್ಲ.
(MYSORE – SHIMOGA – TALAGUPPA)
ತಾಳಗುಪ್ಪ ಮೈಸೂರು ಕುವೆಂಪು ಎಕ್ಸ್ ಪ್ರೆಸ್ – ರೈಲು ಸಂಖ್ಯೆ (16222)
ಮಧ್ಯಾಹ್ನ ಮೈಸೂರಿನಿಂದ ಹೊರಟು ಶಿವಮೊಗ್ಗದ ಮೂಲಕ ರಾತ್ರಿ ತಾಳಗುಪ್ಪ ತುಲುಪಲಿದೆ. ಮಧ್ಯಾಹ್ನ 2 ಗಂಟೆ ಮೈಸೂರು ನಿಲ್ದಾಣದಿಂದ ಹೊರಡಲಿದೆ. ಮಧ್ಯಾಹ್ನ 4.28ಕ್ಕೆ ಹಾಸನ ತಲುಪಲಿದೆ. ಸಂಜೆ 6 ಗಂಟೆಗೆ ಅರಸೀಕೆರೆ, ಸಂಜೆ 6.50ಕ್ಕೆ ಕಡೂರು, ರಾತ್ರಿ 7ಕ್ಕೆ ಬೀರೂರು, ರಾತ್ರಿ 7.38ಕ್ಕೆ ತರೀಕೆರೆ, ರಾತ್ರಿ 8.03ಕ್ಕೆ ಭದ್ರಾವತಿ ತಲುಪಲಿದೆ. ರಾತ್ರಿ 8.35ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ತಲುಪಲಿದೆ. ರಾತ್ರಿ 10.23ಕ್ಕೆ ಸಾಗರ ಜಂಬಗಾರು ನಿಲ್ದಾಣ, ರಾತ್ರಿ 11 ಗಂಟೆಗೆ ತಾಳಗುಪ್ಪ ತಲುಪಲಿದೆ.
12 ಬೋಗಿಗಳು ಇರಲಿವೆ. ಈ ರೈಲಿನಲ್ಲಿ ಸೀಟ್ ಕಾಯ್ದಿರಿಸಲು ಅವಕಾಶವಿಲ್ಲ. ಆದ್ದರಿಂದ ರೈಲು ಹೊರಡುವ ಮೊದಲು ಟಿಕೆಟ್ ಖರೀದಿಸಬೇಕು.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ , ವಿಶೇಷತೆ ಏನು? ಮೊದಲ ದಿನ ಎಷ್ಟು ಜನ ಪ್ರಯಾಣಿಸಿದರು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.