ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
NATIONAL UPDATE : ಪಶ್ಚಿಮ ಬಂಗಾಳದಲ್ಲಿನ ರೈಲು ಅಪಘಾತ ಬೆನ್ನಿಗೆ ಶೀಘ್ರ ಮತ್ತು ಯೋಜಿತ ರೂಪದಲ್ಲಿ ಕವಚ (Kavach) ತಂತ್ರಜ್ಞಾನ ಅಳವಡಿಕೆಗೆ ಕೇಂದ್ರ ರೈಲ್ವೆ ಇಲಾಖೆಯು ಅಧಿಕಾರಿಗಳಿಗೆ ಸೂಚನೆ ನೀಡಿದೆ. ದೆಹಲಿಯಲ್ಲಿ ವಿಶೇಷ ಸಭೆ ನಡೆಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕವಚ ತಂತ್ರಜ್ಞಾನವನ್ನು ಶೀಘ್ರ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇನ್ನು ಐದು ವರ್ಷದಲ್ಲಿ 44 ಸಾವಿರ ಕಿ.ಮೀ. ರೈಲ್ವೆ ಮಾರ್ಗವನ್ನು ಕವಚ ವ್ಯಾಪ್ತಿಗೆ ತರಲಾಗುತ್ತದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಮಾರ್ಚ್ 2025ರ ಒಳಗೆ ದೆಹಲಿ – ಮುಂಬೈ ಮತ್ತು ದೆಹಲಿ – ಹೌರಾ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಮತ್ತೆ 6 ಸಾವಿರ ಕಿ.ಮೀ ವ್ಯಾಪ್ತಿಗೆ ತಂತ್ರಜ್ಞಾನ ಅಳವಡಿಕೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್.
ರೈಲುಗಳು ಮುಖಾಮುಖಿ ಡಿಕ್ಕಿ ತಪ್ಪಿಸಲು ಕವಚ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇದನ್ನು ದೇಶಾದ್ಯಂತ ಅಳವಡಿಸುವ ಕೆಲಸ ಆಗಬೇಕಿದೆ. ಇನ್ನು, ಕವಚ ತಂತ್ರಜ್ಞಾನದ ಉಪಕರಣಗಳ ಉತ್ಪಾದನೆ ಪ್ರಕ್ರಿಯೆ ಬಿರುಸಾಗಿದೆ. ಹಂತ ಹಂತವಾಗಿ ಇನ್ನು ಐದು ವರ್ಷದಲ್ಲಿ 44 ಸಾವಿರ ಕಿ.ಮೀ.ಗೆ ಈ ತಂತ್ರಜ್ಞಾನ ಅಳವಡಿಸುವ ಗುರಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.
ನಾನಾ ರಾಷ್ಟ್ರಗಳಲ್ಲಿ 1980ರ ದಶಕದಲ್ಲಿಯೇ ರೈಲ್ವೆ ಡಿಕ್ಕಿ ತಡೆ ತಂತ್ರಜ್ಞಾನ ಅಳವಡಿಸಲಾಗಿತ್ತು. ಭಾರತದಲ್ಲಿ 2016ರ ನಂತರ ಈ ತಂತ್ರಜ್ಞಾನ ಅಳವಡಿಕೆ ಪ್ರಕ್ರಿಯೆ ಆರಂಭವಾಗಿತ್ತು. 2019ರಲ್ಲಿ ಕವಚ ತಂತ್ರಜ್ಞಾನದ ಪರೀಕ್ಷೆ ನಡೆಯಿತು. 2020ರಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಗೆ ಅನುಮತಿ ದೊರೆತಿದೆ.
ಇದನ್ನೂ ಓದಿ – ತೀವ್ರ ಕುತೂಹಲ ಮೂಡಿಸಿದೆ ಡಿಸಿಸಿ ಬ್ಯಾಂಕ್ ಚುನಾವಣೆ, ಕಣದಲ್ಲಿದ್ದಾರೆ 28 ಅಭ್ಯರ್ಥಿಗಳು, ಇಲ್ಲಿದೆ ಲಿಸ್ಟ್