SHIVAMOGGA LIVE NEWS
SHIMOGA | ಜಿಲ್ಲೆಯಲ್ಲಿ ಪ್ರಸ್ತುತ 17 ರೈಲುಗಳು (SHIMOGA TRAINS) ಸಂಚರಿಸುತ್ತಿವೆ. ಈ ಪೈಕಿ ಹೆಚ್ಚಿನ ಪ್ರಮಾಣದ ರೈಲು ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುತ್ತವೆ. ಇದರ ಹೊರತು ಶಿವಮೊಗ್ಗ ಜಿಲ್ಲೆಯಿಂದ ಇತರೆ ಜಿಲ್ಲೆಗಳಿಗು ರೈಲ್ವೆ ಸಂಪರ್ಕ ಇದೆ.
ಶಿವಮೊಗ್ಗ – ತಮಕೂರು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16568)
ವಾರದ ಎಲ್ಲಾ ದಿನವು ಈ ರೈಲು ಸಂಚರಿಸಲಿದೆ. ಬೆಳಗ್ಗೆ 4 ಗಂಟೆಗೆ ಈ ರೈಲು ಶಿವಮೊಗ್ಗದಿಂದ ಹೊರಡಲಿದೆ. ಬೆ. 4.25ಕ್ಕೆ ಭದ್ರಾವತಿ, ಬೆ.4.48ಕ್ಕೆ ತರೀಕೆರೆ, ಬೆ. 5.20ಕ್ಕೆ ಬೀರೂರು, ಬೆ. 5.30ಕ್ಕೆ ಕಡೂರು, ಬೆ. 6.30ಕ್ಕೆ ಅರಸೀಕೆರೆ, ಬೆ. 7.05ಕ್ಕೆ ತಿಪಟೂರು, ಬೆ. 9.25ಕ್ಕೆ ತುಮಕೂರು ತಲುಪಲಿದೆ.
ಇದು UN RESERVE ರೈಲು. ಹಾಗಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶವಿಲ್ಲ.
(SHIMOGA TRAINS)
ಶಿವಮೊಗ್ಗ – ತುಮಕೂರು ಡೆಮು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06514)
ಭಾನುವಾರ ಹೊರತು ಉಳಿದ ಎಲ್ಲ ದಿನವು ಈ ರೈಲು ಸಂಚರಿಸಲಿದೆ. ಮಧ್ಯಾಹ್ನ 1.05ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಮಧ್ಯಾಹ್ನ 1.25ಕ್ಕೆ ಭದ್ರಾವತಿ, ಮ. 1.44ಕ್ಕೆ ತರೀಕೆರೆ, ಮ.2.13ಕ್ಕೆ ಬೀರೂರು, ಮ. 2.24ಕ್ಕೆ ಕಡೂರು, ಮ. 3.10ಕ್ಕೆ ಅರಸೀಕೆರೆ, ಮ.3.43ಕ್ಕೆ ತಿಪಟೂರು, ಸಂಜೆ 5.30ಕ್ಕೆ ತುಮಕೂರು ತಲುಪಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಯಾವೆಲ್ಲ ಸಮಯದಲ್ಲಿ ಸಂಚರಿಸುತ್ತವೆ?
(SHIMOGA TRAINS)
ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್ (ರೈಲು ಸಂಖ್ಯೆ 07365)
ವಾರದ ಎಲ್ಲಾ ದಿನಗಳಲ್ಲು ರೈಲು ಸಂಚರಿಸಲಿದೆ. ಸಂಜೆ 6.30ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ಸ. 6.55 ಭದ್ರಾವತಿ, ರಾತ್ರಿ 7.22 ತರೀಕೆರೆ, ರಾತ್ರಿ 8ಕ್ಕೆ ಬೀರೂರು, ರಾತ್ರಿ 8.15ಕ್ಕೆ ಕಡೂರು, ರಾತ್ರಿ 8.41ಕ್ಕೆ ಸಕರಾಯಪಟ್ಟಣ, ರಾತ್ರಿ 9.40ಕ್ಕೆ ಚಿಕ್ಕಮಗಳೂರು ತಲುಪಲಿದೆ.
ಎಲ್ಲವು ಜನರಲ್ ಬೋಗಿಗಳು. ಟಿಕೆಟ್ ಕಾಯ್ದಿರಿಸುವ ಅವಕಾಶವಿಲ್ಲ.
(SHIMOGA TRAINS)
ಶಿವಮೊಗ್ಗ – ಚೆನ್ನೈ ವಿಶೇಷ (ರೈಲು ಸಂಖ್ಯೆ 06223)
ಭಾನುವಾರ ಮತ್ತು ಮಂಗಳವಾರ ಮಾತ್ರ ಶಿವಮೊಗ್ಗದಿಂದ ಈ ರೈಲು ಚೆನ್ನೈಗೆ ತೆರಳಲಿದೆ. ಈ ಎರಡು ದಿನ ರಾತ್ರಿ 7 ಗಂಟೆಗೆ ಶಿವಮೊಗ್ಗದಿಂದ ರೈಲು ಹೊರಡಲಿದೆ. ರಾ. 7.20ಕ್ಕೆ ಭದ್ರಾವತಿ, ರಾ. 7.40ಕ್ಕೆ ತರೀಕೆರೆ, ರಾ. 8.10ಕ್ಕೆ ಬೀರೂರು, ರಾ. 10.18ಕ್ಕೆ ಚಿತ್ರದುರ್ಗ, ರಾ. 1.55ಕ್ಕೆ ಬಳ್ಳಾರಿ ಜಂಕ್ಷನ್, ರಾ. 3.05ಕ್ಕೆ ಗುಂತಕಲ್, ಬೆ. 5.58ಕ್ಕೆ ಕಡಪ, ಬೆ. 8.20ಕ್ಕೆ ರೇಣಿಗುಂಟ, ಬೆ. 11.10ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣ.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.