ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 NOVEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಗೋವಾ, ಹೈದರಾಬಾದ್ ಮತ್ತು ತಿರುಪತಿಗೆ ಶಿವಮೊಗ್ಗದಿಂದ ನೇರ ಸಂಪರ್ಕ ಕಲ್ಪಿಸಲು ಸಜ್ಜಾಗಿರುವ ಸ್ಟಾರ್ ಏರ್ (Star air) ಸಂಸ್ಥೆ ವೇಳಾಪಟ್ಟಿ ಪ್ರಕಟಿಸಿದೆ. ಅಲ್ಲದೆ ಟಿಕೆಟ್ ದರವನ್ನು ಕೂಡ ಘೋಷಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವೇಳಾಪಟ್ಟಿ ವಿವರ
ಶಿವಮೊಗ್ಗ – ಹೈದರಾಬಾದ್ ಮಾರ್ಗ
ಮಂಗಳವಾರ, ಬುಧವಾರ, ಗುರುವಾರ, ಶನಿವಾರ : ಹೈದರಾಬಾದ್‌ನಿಂದ ಬೆಳಗ್ಗೆ 9.30ಕ್ಕೆ ನಿರ್ಗಮನ, ಬೆಳಗ್ಗೆ 10.35ಕ್ಕೆ ಶಿವಮೊಗ್ಗಕ್ಕೆ ಆಗಮನ.
ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಸಂಜೆ 4.30ಕ್ಕೆ ನಿರ್ಗಮನ, ಸಂಜೆ 5.35ಕ್ಕೆ ಹೈದರಾಬಾದ್ ತಲುಪಲಿದೆ. ಬುಧವಾರ ಸಂಜೆ ಶಿವಮೊಗ್ಗದಿಂದ 4.30ಕ್ಕೆ ನಿರ್ಗಮನ. ಸಂಜೆ 5.25ಕ್ಕೆ ಹೈದರಾಬಾದ್ ತಲುಪಲಿದೆ.
ಶಿವಮೊಗ್ಗ – ಗೋವಾ ಮಾರ್ಗ
ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಮಧ್ಯಾಹ್ನ 1.55ಕ್ಕೆ ನಿರ್ಗಮನ. ಮಧ್ಯಾಹ್ನ 2.45ಕ್ಕೆ ಗೋವಾ. ಬುಧವಾರ ಮಾತ್ರ ಬೆಳಗ್ಗೆ 11.10ಕ್ಕೆ ಶಿವಮೊಗ್ಗದಿಂದ ನಿರ್ಗಮನ. ಬೆಳಗ್ಗೆ 11.50ಕ್ಕೆ ಗೋವಾ.
ಮಂಗಳವಾರ, ಗುರುವಾರ, ಶನಿವಾರ : ಮಧ್ಯಾಹ್ನ 3.15ಕ್ಕೆ ಗೋವಾದಿಂದ ನಿರ್ಗಮನ. ಸಂಜೆ 4.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ. ಬುಧವಾರ ಮಾತ್ರ ಮಧ್ಯಾಹ್ನ 12.20ಕ್ಕೆ ಗೋವಾದಿಂದ ನಿರ್ಗಮನ. ಮಧ್ಯಾಹ್ನ 1.10ಕ್ಕೆ ಶಿವಮೊಗ್ಗಕ್ಕೆ ಆಗಮನ.
ಇದನ್ನೂ ಓದಿ- ಸಾಗರದ ಚಿದಂಬರರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಇಲ್ಲಿದೆ ಇವರ ಬಗ್ಗೆ ಗೊತ್ತಿರಬೇಕಾದ 4 ಸಂಗತಿ
ಶಿವಮೊಗ್ಗ – ತಿರುಪತಿ ಮಾರ್ಗ
ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ನಿರ್ಗಮನ. ಮಧ್ಯಾಹ್ನ 12 ಗಂಟೆಗೆ ತಿರುಪತಿಗೆ ತಲುಪಲಿದೆ. ಬುಧವಾರ ಮಾತ್ರ ಮಧ್ಯಾಹ್ನ 1.40ಕ್ಕೆ ಶಿವಮೊಗ್ಗದಿಂದ ನಿರ್ಗಮನ. ಮಧ್ಯಾಹ್ನ 2.35ಕ್ಕೆ ತಿರುಪತಿಗೆ ತಲುಪಲಿದೆ.
ಮಂಗಳವಾರ, ಗುರುವಾರ, ಶನಿವಾರ : ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಡಲಿದೆ. ಮಧ್ಯಾಹ್ನ 1.40ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ. ಬುಧವಾರ ಮಾತ್ರ ಮಧ್ಯಾಹ್ನ 3.05ಕ್ಕೆ ತಿರುಪತಿಯಿಂದ ಹೊರಡಲಿದೆ. ಮಧಾಹ್ನ 3.55ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ.
ಟಿಕೆಟ್ ದರ ಪ್ರಕಟ
ನವೆಂಬರ್ 21ರಿಂದ ಶಿವಮೊಗ್ಗದಿಂದ ಹೈದರಾಬಾದ್, ಗೋವಾ, ತಿರುಪತಿ ಮಾರ್ಗದಲ್ಲಿ ಸ್ಟಾರ್ ಏರ್ (Star air) ವಿಮಾನ ಹಾರಾಟ ಆರಂಭಿಸಲಿದೆ. ಈ ಮೂರು ಮಾರ್ಗಕ್ಕು ಒಂದೇ ಪ್ರಯಾಣ ದರ ಪ್ರಕಟಿಸಲಾಗಿದೆ. ಎಲ್ಲಾ ತೆರಿಗೆ ಸಹಿತ ಟಿಕೆಟ್ ದರ 1999 ರೂ. ನಿಂದ ಪ್ರಾರಂಭವಾಗಲಿದೆ ಎಂದು ಸ್ಟಾರ್ ಏರ್ ಪ್ರಕಟಿಸಿದೆ.
ಶಿವಮೊಗ್ಗದಲ್ಲಿ ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ಬುಕಿಂಗ್‌ಗೆ ಮೊ . 8123002917, 9449502917