ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 4 JANUARY 2024
RAILWAY NEWS : ರೈಲು ಎಲ್ಲಿದೆ ಅಂತಾ ತಿಳಿಯೋದು ಈಗ ಇನ್ನೂ ಸುಲಭ. ಪ್ರಯಾಣಿಕರ ಅನುಕೂಲಕ್ಕಾಗಿ ಗೂಗಲ್ ಸಂಸ್ಥೆಯೇ ಮೊಬೈಲ್ ಆಪ್ ಬಿಡುಗೆಡ ಮಾಡಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ WHERE IS MY TRAIN ಆಪ್ ಡೌನ್ ಲೋಡ್ ಮಾಡಿಕೊಂಡು ರೈಲುಗಳ ಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಈ ಆಪ್‌ನಲ್ಲಿ ಏನೇನೆಲ್ಲ ಇದೆ?
ಆಪ್‌ನ ಹೆಸರೆ ಹೇಳುವಂತೆ ರೈಲುಗಳ ಲೊಕೇಷನ್ ತಿಳಿಸುತ್ತದೆ. 8 ಭಾಷೆಗಳಲ್ಲಿ ಮಾಹಿತಿ ದೊರೆಯಲಿದೆ. ಟಿಕೆಟ್ ಮುಂಗಡ ಬುಕಿಂಗ್‌ನ ಪಿಎನ್‌ಆರ್ ಚೆಕ್ ಮಾಡಬಹುದಾಗಿದೆ. ರೈಲಿನ ಕೋಚ್ ಮತ್ತು ಒಳಗಿನ ಸೀಟ್ ವ್ಯವಸ್ಥೆ ಗಮನಿಸಬಹುದಾಗಿದೆ.
ಲೊಕೇಷನ್ ಅಲಾರಾಂ ವ್ಯವಸ್ಥೆ ಇದೆ. ಪ್ರಯಾಣಿಕರು ತಾವು ಇಳಿಯಬೇಕಿರುವ ನಿಲ್ದಾಣದ ಕುರಿತು ಲೊಕೇಷನ್ ಅಲಾರಾಂ ಫಿಕ್ಸ್ ಮಾಡಿಕೊಂಡರೆ ಸಾಕು. ರೈಲು ಆ ನಿಲ್ದಾಣಕ್ಕೆ ತಲುಪುವ ಮುನ್ನ ಪ್ರಯಾಣಿಕರಿಗೆ ಅಲಾರಾಂ ಮೂಲಕ ಎಚ್ಚರಿಸಲಿದೆ. ಇನ್ನು, ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿರುವ ರೈಲುಗಳು, ನಿರ್ಗಮಿಸುವ ರೈಲುಗಳ ಮಾಹಿತಿಯು ಸಿಗಲಿದೆ.
ಈ ಆಪ್‌ಗೆ 4.4 ರೇಟಿಂಗ್ ಇದೆ. 100 ಮಿಲಿಯನ್‌ಗೂ ಹೆಚ್ಚು ಭಾರಿ ಡೌನ್‌ಲೋಡ್ ಆಗಿದೆ. ಗೂಗಲ್ ಸಂಸ್ಥೆಯೇ ಈ ಆಪ್‌ನ ನಿರ್ವಹಣೆ ಮಾಡುತ್ತಿದೆ.
ಇದನ್ನೂ ಓದಿ – ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲುಗಳು, ಯಾವ್ಯಾವ ರೈಲಿನ ಟೈಮಿಂಗ್ ಏನು? ಇಲ್ಲಿದೆ ಲಿಸ್ಟ್
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





