ಶಿವಮೊಗ್ಗ ಲೈವ್.ಕಾಂ | 18 ಮಾರ್ಚ್ 2019
ಪ್ರಚಾರದ ಕಣಕ್ಕೆ ಲೇಟಾಗಿ ಎಂಟ್ರಿ ಕೊಡುತ್ತಿದ್ದರೂ, ಭರ್ಜರಿ ಕ್ಯಾಂಪೇನ್’ಗೆ ಮೈತ್ರಿ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಶತಾಯಗತಾಯ ಸೋಲಿಸಲೇಬೇಕು ಅಂತಾ ಪ್ಲಾನಿಂಗ್ ಮಾಡಿಕೊಳ್ಳಲಾಗಿದೆ. ಇನ್ನು, ಶಿವಮೊಗ್ಗ ಲೋಕಸಭೆ ಚುನಾವಣೆಯ ಉಸ್ತುವಾರಿಯನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಚಾಣಕ್ಯ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಾಗಿದೆ.
ಏನೆಲ್ಲ ಪ್ಲಾನ್ ಮಾಡಲಾಗಿದೆ?
ದೇವೇಗೌಡರಿಂದ ಮತಬೇಟೆ
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಈಗಾಗಲೇ ಮಧು ಬಂಗಾರಪ್ಪ ಪರವಾಗಿ ಕ್ಯಾಂಪೇನ್ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರ ಜೊತೆಗೆ ರಹಸ್ಯ ಸಭೆ ನಡೆಸಿ, ಟಾಸ್ಕ್ ನೀಡಿದ್ದಾರೆ. ಪ್ರತ್ಯೇಕವಾಗಿ ಪ್ರಚಾರ ನಡೆಸುವಂತೆ ಸೂಚನೆ ನೀಡಿದ್ದಾರೆ.

ತಳಮಟ್ಟದವರೆಗೆ ಟಾರ್ಗೆಟ್
ತಳಮಟ್ಟದವರೆಗೂ ಪ್ರಚಾರ ಕೈಗೊಳ್ಳಲು ಪ್ಲಾನಿಂಗ್ ಮಾಡಿಕೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗೂ ಮಧು ಬಂಗಾರಪ್ಪ ಖುದ್ದಾಗಿ ತೆರಳಲಿದ್ದಾರೆ. ಈಗಾಗಲೇ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಗ್ರಾಮ ಪಂಚಾಯಿತಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಯಾವ್ಯಾವ ಪಂಚಾಯಿತಿಗೆ ಯಾವಾಗ ತೆರಳಬೇಕು ಎಂಬ ಪ್ಲಾನ್ ಕೂಡ ಸಿದ್ಧವಾಗಿದೆ.

ಶಿವಮೊಗ್ಗ ಚುನಾವಣಾ ಕಣಕ್ಕೆ ‘ಚಾಣಕ್ಯ’
ಇನ್ನು, ಕಾಂಗ್ರೆಸ್ ಪಕ್ಷದ ಪಾಲಿನ ಚುನಾವಣಾ ಚಾಣಕ್ಯ ಸಚಿವ ಡಿ.ಕೆ.ಶಿವಕುಮಾರ್, ಈ ಬಾರಿ ಮೈತ್ರಿ ಅಭ್ಯರ್ಥಿ ಪರವಾಗಿ ಶಿವಮೊಗ್ಗ ಪ್ರಚಾರ ಕಣಕ್ಕೆ ಧುಮುಖಲಿದ್ದಾರೆ. ಬಿಜೆಪಿಯನ್ನು ಮಣಿಸಲು ಶಿವಮೊಗ್ಗದಲ್ಲಿ ತಂತ್ರ ಹೆಣೆಯಲಿದ್ದಾರೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ.

ವಿದಾನಸಭೆ ಕ್ಷೇತ್ರಗಳಿಗೆ ಉಸ್ತುವಾರಿ
ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ, ವಿಧಾನಸಭೆ ಕ್ಷೇತ್ರಗಳ ಪ್ರಚಾರದ ಜಾವಾಬ್ದಾರಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ವಹಿಸಲಾಗುತ್ತದೆ ಎಂದು ಆರ್.ಎಂ.ಮಂಜುನಾಥಗೌಡ ತಿಳಿಸಿದ್ದಾರೆ. ಇನ್ನು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಶಿವಮೊಗ್ಗ ಕ್ಷೇತ್ರದ ಗೆಲುವಿಗೆ ರಣತಂತ್ರ ರೂಪಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]