ಶಿವಮೊಗ್ಗ ಲೈವ್.ಕಾಂ | SHIMOGA | 4 ಫೆಬ್ರವರಿ 2020
ಶಿವಮೊಗ್ಗದ MRS ಸರ್ಕಲ್’ನಲ್ಲಿ ಡಬಲ್ ಟ್ಯಾಂಕ್’ನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ಟ್ಯಾಂಕ್ ಕೆಳಗಿನ ಮರದ ರೆಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಗಣೇಶಪ್ಪ (58) ಎಂದು ಗುರುತಿಸಲಾಗಿದೆ. ಕುಡಿಯುವ ನೀರು ಮತ್ತು ಒಳಚರಂಡಿ ಅಭಿವೃದ್ಧಿ ನಿಗಮದ ಗುತ್ತಿಗೆ ನೌಕರನಾಗಿದ್ದ ಗಣೇಶಪ್ಪ, ಎಂದಿನಂತೆ ಇವತ್ತು ಕೆಲಸಕ್ಕೆ ಆಗಮಿಸಿದ್ದರು. ಬೆಳಗ್ಗೆ ಟ್ಯಾಂಕ್’ನಿಂದ ನೀರಿ ಬಿಟ್ಟು, ಅಲ್ಲಿಯೇ ಇದ್ದರು.
ಮಧ್ಯಾಹ್ನದ ವೇಳೆಗೆ ಅತ್ಯಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
