ಚಿಮುಟದಿಂದ ಚುಚ್ಚಿ ಹೆಂಡತಿಯ ಕೊಲೆ ಮಾಡಿದ ಗಂಡ

Shikaripura-Town-Police-Station

ಶಿಕಾರಿಪುರ: ಕೌಟುಂಬಿಕ ಕಲಹದ ಹಿನ್ನೆಲೆ ಚಿಮುಟ ಬಳಸಿ ಗಂಡನೇ (Husband) ಹೆಂಡತಿಯ ಹತ್ಯೆ ಮಾಡಿದ್ದಾನೆ. ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಘಟನೆ ಸಂಭವಿಸಿದೆ. ಲಾರಿ ಚಾಲಕ ಬಸವರಾಜು ಎಂಬಾತ ತನ್ನ ಪತ್ನಿ ಮಂಜುಳಾ (32) ಎಂಬುವವರ ಹತ್ಯೆ ಮಾಡಿದ್ದಾನೆ. ಚಿಮುಟದಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಸವರಾಜು ಮತ್ತು ಮಂಜುಳಾ ಮದುವೆಯಾಗಿ 15 ವರ್ಷವಾಗಿದೆ. ದಂಪತಿಗೆ ಇಬ್ಬರು ಹೆಣ್ಣು , ಓರ್ವ ಗಂಡು ಮಗ ಇದ್ದಾನೆ. ಮಂಜುಳಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಿಕಾರಿಪುರ ಪೊಲೀಸ್‌ … Read more

ರೆಡ್‌ ಅಲರ್ಟ್‌, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಿಗೆ ನಾಳೆ ಎಚ್ಚರಿಕೆ

rain-in-shimoga-city-near-vidyanagara-flyover

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತಷ್ಟು ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ಶಿವಮೊಗ್ಗ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ (Red Alert) ಘೋಷಿಸಿದೆ. ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ನಾಳೆ ರೆಡ್‌ ಅಲರ್ಟ್‌ ಇರಲಿದೆ. ಈ ಜಿಲ್ಲೆಯಲ್ಲಿ ಜೋರು ಗಾಳಿ ಸಹಿತ ಭಾರಿ ಮಳೆಯಾಗುವ ಸಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಲರ್ಟ್‌ ಘೋಷಿಸಿದೆ. ಇನ್ನು, ರಾಜ್ಯದ ಉಳಿದ ಜಿಲ್ಲೆಗಳಿಗೆ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ, ಅಲ್ಲಲ್ಲಿ ಧರೆಗುರುಳಿದ ಮರ, ರಸ್ತೆ ಮೇಲೆ ಹರಿದ ನೀರು

rainfall-in-Shimoga-and-sagara.

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಇವತ್ತು ಜೋರು ಮಳೆಯಾಗಿದೆ (Rainfall). ಹಲವೆಡೆ ಮರಗಳು ಧರೆಗುರುಳಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ. ಇನ್ನೊಂದೆಡೆ ಗುರುವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹಾಗಾಗಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧೆಡೆ ಇವತ್ತು ಜೋರು ಮಳೆಯಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳಗೆ ನಗರದಲ್ಲಿ ಭಾರಿ ಮಳೆಯಾಯಿತು. ಅಲ್ಲಲ್ಲಿ ರಸ್ತೆಗಳ ಮೇಲೆ ನೀರು ಹರಿದಿತ್ತು. ತಾಲೂಕು ಕಚೇರಿ ಮುಂಭಾಗ ಮರ ಬಿದ್ದು ರಸ್ತೆ ಬದಿಯಲ್ಲಿದ್ದ ಶೆಡ್‌ಗಳಿಗೆ … Read more

ಶಿವಮೊಗ್ಗದಲ್ಲಿ 2 ದಿನ ಕಾರು ಎಕ್ಸ್‌ಚೇಂಜ್‌ ಮೇಳ, ರೈತರು, ಸರ್ಕಾರಿ ನೌಕರರು, ಕಾರ್ಪೊರೇಟ್‌ ಉದ್ಯೋಗಿಗಳಿಗೆ ಭರ್ಜರಿ ಆಫರ್‌

hakti-cars-pvt-ltd-shimoga-Toyota-showroom

ಶಿವಮೊಗ್ಗ : ಶಕ್ತಿ ಟೊಯೋಟ ವತಿಯಿಂದ ಜೂನ್ 13 ಮತ್ತು 14ರಂದು ‌ನಗರದ ಬಿ.ಹೆಚ್‌.ರಸ್ತೆಯಲ್ಲಿರುವ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಆವರಣದಲ್ಲಿ ಎಕ್ಸ್‌ಚೇಂಜ್‌ (car exchange) ಮೇಳ ಮತ್ತು ಪೂರ್ವ ಮಾಲಿಕಿತ್ವದ ಕಾರು (Car) ಮೇಳ ಆಯೋಜಿಸಲಾಗಿದೆ. ಎರಡು ದಿನವು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮೇಳ ನಡೆಯಲಿದೆ. ಎಕ್ಸ್‌ಚೇಂಜ್‌ ಮೇಳ ಹೇಗಿರುತ್ತೆ? ಹಳೆಯ ಕಾರುಗಳನ್ನು ಹೊಚ್ಚ ಹೊಸ ಟೊಯೋಟ ಕಾರಿಗೆ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದಾಗಿದೆ. ಕೃಷಿಕರು ಮತ್ತು ಸ್ಪಾಟ್‌ ಬುಕ್ಕಿಂಗ್‌ ಮೇಲೆ ಆಕರ್ಷಕ ಆಫರ್‌ಗಳು, 50 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್‌ ಬೆನಿಫಿಟ್‌, … Read more

ರಾತ್ರೋರಾತ್ರಿ ಕಾರಿನಲ್ಲಿ ಬಂದು ಫುಟ್‌ಪಾತ್‌ ಮೇಲಿದ್ದ ಮರಕ್ಕೆ ಗರಗಸ ಹಾಕಿದ ದುಷ್ಕರ್ಮಿಗಳು, ಒಬ್ಬ ಅರೆಸ್ಟ್‌

Tree-cuttion-row-in-Shimoga-city

ಶಿವಮೊಗ್ಗ: ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಡುರಾತ್ರಿ ರಸ್ತೆ ಬದಿಯ ಎರಡು ಮರಗಳಿಗೆ (Tree) ಗರಗಸ ಹಾಕಿದ್ದಾರೆ. ವಿಚಾರ ತಿಳಿದು ಪರಿಸರವಾದಿಗಳು ಸ್ಥಳದಲ್ಲಿ ಧರಣಿ ನಡೆಸಿದರು. ಇನ್ನೊಂದೆಡೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕೂಡ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದ್ದರು. ಇದರ ಬೆನ್ನಿಗೆ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಶಿವಮೊಗ್ಗ ಬಿ.ಹೆಚ್‌.ರಸ್ತೆಯ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಎದುರುಗಿರುವ ಹೊಟೇಲ್‌ ಮುಂಭಾಗ ಫುಟ್‌ಪಾತ್‌ ಮೇಲಿದ್ದ ಮರಗಳಿಗೆ ಕೊಡಲಿ ಹಾಕಲಾಗಿದೆ. ಒಂದು ಮರ ಧರೆಗುರುಳಿತ್ತು. ಮತ್ತೊಂದು … Read more

ಅಡಿಕೆ ಧಾರಣೆ | 11 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 16158 30129 ಬೆಟ್ಟೆ 48400 59109 ರಾಶಿ 46009 58309 ಸರಕು 50109 88100 ‌ಇದನ್ನೂ ಓದಿ » ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಗೆ ಉರುಳಿದ ಬೃಹತ್ ಆಲದ ಮರ, ವಾಹನ ಸಂಚಾರಕ್ಕೆ ಅಡಚಣೆ

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಗೆ ಉರುಳಿದ ಬೃಹತ್ ಆಲದ ಮರ, ವಾಹನ ಸಂಚಾರಕ್ಕೆ ಅಡಚಣೆ

Tree-falls-to-Shimoga-Thirthahalli-Road-at-gajanuru

ಶಿವಮೊಗ್ಗ: ಜೋರು ಗಾಳಿಗೆ ಸಹಿತ ಮಳೆಯಿಂದಾಗಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಬೃಹತ್‌ ಮರ (Tree) ಧರೆಗುರುಳಿದೆ. ಶಿವಮೊಗ್ಗ ತಾಲೂಕು ಗಾಜನೂರು ಚೆಕ್‌ ಪೋಸ್ಟ್‌ ಸಮೀಪ ಮರ ಬುಡಮೇಲಾಗಿದೆ. ಚೆಕ್‌ ಪೋಸ್ಟ್‌ನ ಸಹಿನದಲ್ಲಿದ್ದ ಬೃಹತ್‌ ಆಲದ ಮರ ಮಧ್ಯಾಹ್ನ ಬೀಸಿದ ಜೋರಿ ಗಾಳಿಗೆ ಧರೆಗುರುಳಿಸಿದೆ. ಇದರಿಂದ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ. ಮರ ಉರುಳುವಾಗ ಅದೃಷ್ಟವಶಾತ್‌ ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಈಗ ಹೆದ್ದಾರಿ ಪಕ್ಕದಲ್ಲಿರುವ … Read more

ಶಿವಮೊಗ್ಗ ಸಿಟಿಯಲ್ಲಿ ಗಾಳಿ ಸಹಿತ ಜೋರು ಮಳೆ

Rain-in-Shimoga-city-today

ಶಿವಮೊಗ್ಗ: ಸಿಟಿಯಲ್ಲಿ ಮಧ್ಯಾಹ್ನದ ಹೊತ್ತಿಗೆ ಜೋರು ಮಳೆ (Rain) ಆರಂಭವಾಗಿದೆ. ವಿವಿಧೆಡೆ ಜೋರು ಗಾಳಿ ಸಹಿತ ವರ್ಷಧಾರೆಯಾಗುತ್ತಿದೆ. ಇವತ್ತು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಹೊತ್ತಿಗೆ ತುಸು ಬಿಸಿಲು ಕಾಣಿಸಿತ್ತು. ಆ ಬಳಿಕ ದಟ್ಟ ಮೋಡ ಕವಿದು, ಗಾಳಿ ಸಹಿತ ಮಳೆ ಆರಂಭಾಗಿದೆ. ಶಿವಮೊಗ್ಗ ನಗರ, ಶಿವಮೊಗ್ಗ ತಾಲೂಕಿನ ಕೂಡ್ಲಿ, ಬಿದರೆ, ಹಸೂಡಿ, ಅಬ್ಬಲಗೆರೆ, ಕುಂಚೇನಹಳ್ಳಿ, ರಾಮನಗರ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಆಯನೂರು, ಸಂತೆ ಕಡೂರು ಸುತ್ತಮುತ್ತ ಪ್ರಸ್ತುತ ಸಾಧಾರಣೆ ಮಳೆಯಾಗುತ್ತಿರುವ ವರದಿಯಾಗಿದೆ. ಉಳಿದಂತೆ … Read more

ಶಿವಮೊಗ್ಗದಲ್ಲಿ ಯುವತಿಯ ಮೊಬೈಲ್‌ ಕದ್ದ ಮಂಗ, ಒಂದು ಗಂಟೆ ಮರವೇರಿ ಕುಳಿತು ಪ್ರಹಸನ

-Monkey-catches-mobile-phone-at-Nanjappa-Hospital

ಶಿವಮೊಗ್ಗ: ನಂಜಪ್ಪ ಆಸ್ಪತ್ರೆ ಸಿಬ್ಬಂದಿಯೊಬ್ಬರ ಮೊಬೈಲ್‌ (Mobile) ಕಸಿದುಕೊಂಡ ಮಂಗವೊಂದು ಮರ ಹತ್ತಿ ಕುಳಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತ್ತು. ಸುಮಾರು ಒಂದು ಗಂಟೆಯ ಪ್ರಹಸನದ ಬಳಿಕ ಮಂಗ ಮೊಬೈಲ್‌ ಬಿಟ್ಟು ಪರಾರಿಯಾಗಿದೆ. ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿದ ಮಂಗ, ಆಸ್ಪತ್ರೆ ಸಿಬ್ಬಂದಿ ರೇಷ್ಮಾ ಎಂಬುವವರಿಗೆ ಸೇರಿದ ಮೊಬೈಲ್‌ ಎತ್ತಿಕೊಂಡು ಪರಾರಿಯಾಗಿತ್ತು. ಮೊಬೈಲ್‌ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿದ್ದ ಮಂಗ ಜನರ ಕುತೂಹಲ ಮೂಡಿಸಿತ್ತು. ಮರದ ತುದಿಗೆ ಏರಿ ರೆಂಬೆಯೊಂದರ ಮೇಲೆ ಬಹು … Read more

ಚಂದ್ರಗುತ್ತಿ ಹೋಬಳಿ, ಶ್ವಾನಗಳ ದಾಳಿಗೆ ಜಿಂಕೆ ಬಲಿ

SORABA-NEWS-UPDATE

ಸೊರಬ: ಶ್ವಾನಗಳ ದಾಳಿಗೆ ಜಿಂಕೆಯೊಂದು (Deer) ಮೃತಪಟ್ಟಿದೆ. ಆಹಾರ ಅರಸಿ ಕಾಡಿನಿಂದ ಬಂದ ಗಂಡು ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಚಂದ್ರಗುತ್ತಿ ಹೋಬಳಿಯಲ್ಲಿ ಶಿವಪುರ ಗ್ರಾಮದಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ನಾಯಿಗಳು ದಾಳಿ ನಡೆಸಿದಾಗ ಗ್ರಾಪಂ ಸದಸ್ಯ ಸಲೀಂ ಮತ್ತಿತರರು ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಜಿಂಕೆಗೆ ಪಶುವೈದ್ಯರು ಚಿಕಿತ್ಸೆ ನೀಡಿದರೂ ಸಾವಿಗೀಡಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜಿಂಕೆಯ ಕಳೇಬರ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ » ಸಿಗಂದೂರು ಸೇತುವೆ … Read more