ಬಸ್ಸಿನಲ್ಲಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ಗೆ ಕೈ ಹಾಕಿದ ಮಹಿಳೆಗೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

SHIVAMOGGA LIVE NEWS | 14 MAY 2024 SHIMOGA : ಬಸ್‌ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನ ಒಳಗೆ ಕರ್ಚೀಫ್‌ನಲ್ಲಿ ಕಟ್ಟಿಟ್ಟಿದ್ದ ಚಿನ್ನಭಾರಣ (Jewelry) ಕಳುವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ನಡೆದಿದೆ. ನ್ಯಾಮತಿ ತಾಲೂಕು ಚೀಲೂರು ನಿವಾಸಿ ಫಾಸಿಹಾ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳವು ಮಾಡಲಾಗಿದೆ. ಫಾಸಿಹಾ ಅವರು ಸಂಬಂಧಿಯ ಮದುವೆ ಸಮಾರಂಭ ಮುಗಿಸಿ ಅಕ್ಕ ಮತ್ತು ತಮ್ಮನ ಪತ್ನಿ ಜೊತೆಗೆ ಮನೆಗೆ ಮರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತುವಾಗ … Read more

ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಯಮನಂತೆ ಎದುರಿಗೆ ಬಂತು ಟ್ರಾಕ್ಟರ್‌, ವ್ಯಕ್ತಿ ಸಾವು

ACCIDENT-NEWS-GENERAL-IMAGE.

SHIVAMOGGA LIVE NEWS | 14 MAY 2024 SHIMOGA : ಬೀಡಾ ಅಂಗಡಿಗಳಿಗೆ ಬೀಡಾ ವಸ್ತುಗಳನ್ನು ಸರಬರಾಜು ಮಾಡಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ವ್ಯಕ್ತಿಗೆ ಟ್ರಾಕ್ಟರ್‌ (Tractor) ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಗೋಂದಿ ಚಟ್ನಹಳ್ಳಿ ಸಮೀಪ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಮಾರ್ನಮಿ ಬೈಲು ನಿವಾಸಿ ಕೃಷ್ಣಕುಮಾರ್‌ ಪ್ರಜಾಪತಿ (32) ಮೃತರು. ಶಿವಮೊಗ್ಗ ಬಸ್‌ ನಿಲ್ದಾಣದ ಎದುರಿಗೆ ಕೃಷ್ಣಕುಮಾರ್‌ ಬೀಡಾ ಅಂಗಡಿ ನಡೆಸುತ್ತಿದ್ದರು. ವಿವಿಧ ಬೀಡಾ ಅಂಗಡಿಗಳಿಗೆ ಬೀಡಾ ವಸ್ತುಗಳ ಸರಬರಾಜು ಮಾಡುವ … Read more

‘ಎಣ್ಣೆ ಬೇಡ’ ಅಂತಾ ಬೀದಿಗಿಳಿದ ಗ್ರಾಮಸ್ಥರು, ಶಿವಮೊಗ್ಗ ರಕ್ಷಣಾಧಿಕಾರಿ ಕಚೇರಿಗೆ ತೆರಳಿ ದೂರು

Gondhi-Chantahalli-Villagers-protest-against-liquor

SHIVAMOGGA LIVE NEWS | 14 MAY 2024 SHIMOGA : ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿ ಗೊಂದಿ ಚಟ್ನಹಳ್ಳಿ ಗ್ರಾಮಸ್ಥರು, ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ (Villagers Protest) ನಡೆಸಿದರು. ಬಳಿಕ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಗೊಂದಿ ಚಟ್ನಹಳ್ಳಿಯಲ್ಲಿ ಸುಮಾರು 15 ಕಡೆ ಪರವಾನಗಿ ಇಲ್ಲದೆ ಮದ್ಯದ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಮದ್ಯವೆಸನಿಗಳ ಹೆಚ್ಚಾಗಿದ್ದಾರೆ. ವಿದ್ಯಾರ್ಥಿಗಳು ಕೂಡ ಮದ್ಯಕ್ಕೆ ದಾಸರಾಗಿದ್ದಾರೆ. ಮದ್ಯ ಸೇವಿಸಿ ವಾಹನಗಳನ್ನು … Read more

ಅಡಿಕೆ ಧಾರಣೆ | 14 ಮೇ 2024 | ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 14 MAY 2024 ADIKE RATE : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಚನ್ನಗಿರಿ ಮಾರುಕಟ್ಟೆ ರಾಶಿ 51099 55099 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 38000 ವೋಲ್ಡ್ ವೆರೈಟಿ 38000 46500 ಭದ್ರಾವತಿ ಮಾರುಕಟ್ಟೆ ರಾಶಿ 42666 54201 ಯಲ್ಲಾಪುರ ಮಾರುಕಟ್ಟೆ ಅಪಿ 57095 66699 ಕೆಂಪುಗೋಟು 24099 34989 ಕೋಕ 12099 28612 ತಟ್ಟಿಬೆಟ್ಟೆ 35899 43805 … Read more

ಶಿವಮೊಗ್ಗದಲ್ಲಿ ಡೊನೇಷನ್‌ ಹಾವಳಿ, ತಡೆಯೊಡ್ಡದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

NSUI-memorandum-against-Donation-menace-in-Shimoga.

SHIVAMOGGA LIVE NEWS | 14 MAY 2024 SHIMOGA : ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಡೊನೇಷನ್‌ ಹಾವಳಿಗೆ (Donation Menace) ತಡೆಯೊಡ್ಡಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ವತಿಯಿಂದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸರ್ಕಾರ ಅನೇಕ ಸೌಲಭ್ಯ ಒದಗಿಸುತ್ತದೆ. ಶುಲ್ಕದಲ್ಲಿ ವಿನಾಯಿತಿ ನೀಡಿದರೆ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಬಡವರಿಗೆ … Read more

ಶಿವಮೊಗ್ಗ ಸಿಟಿಯಲ್ಲಿ ದಟ್ಟ ಮೋಡ, ಗುಡುಗು ಸಹಿತ ಮಳೆ, ಜಿಲ್ಲೆಯ ವಿವಿಧೆಡೆ ವರ್ಷಧಾರೆ, ಎಲ್ಲೆಲ್ಲಿ ಮಳೆಯಾಗ್ತಿದೆ?

Rain-in-Shimoga-city-Kuvempu-Road

SHIVAMOGGA LIVE NEWS | 14 MAY 2024 SHIMOGA : ಪೂರ್ವ ಮುಂಗಾರು (Pre Monsoon) ಚುರುಕುಗೊಂಡಿದೆ. ನಿರೀಕ್ಷೆಯಂತೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಸಂಜೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ದಟ್ಟ ಮೋಡ ಆವರಿಸಿದ್ದು ಗಾಳಿ ಸಹಿತ ಮಳೆ ಸುರಿಯುತ್ತಿದೆ. ಇನ್ನು ತೀರ್ಥಹಳ್ಳಿಯ ಬಿದರಗೋಡು, ಅರೇಹಳ್ಳಿ, ಕಮ್ಮರಡಿ, ತೀರ್ಥಮತ್ತೂರು, ಮೇಘರವಳ್ಳಿ, ನೊಣಬೂರು, ಹಾದಿಗಲ್ಲು. ಹೊಸನಗರ ತಾಲೂಕಿನ ಸೊನಲೆ, ಅಮೃತ, ಮೇಲಿನಬೆಸಿಗೆ, ಕೋಡೂರು, ಮಾರುತಿಪುರದಲ್ಲಿ ಮಳೆಯಾಗುತ್ತಿದೆ.   ಸಾಗರ ತಾಲೂಕಿನ ಆಚಾಪುರ, ಹೊಸೂರು, ಹಿರೆಬಿಲಗುಂಜಿ. ಸೊರಬದ ಹೊಸಬಾಳೆ, … Read more

ಇನ್ನೊಂದೇ ತಿಂಗಳು ಬಾಕಿ, ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ಸರ್ಕಾರದಿಂದ ಆಫರ್‌, ಏನದು?

aadhar-card.webp

SHIVAMOGGA LIVE NEWS | 14 MAY 2024 AADHAR NEWS : ಆಧಾರ್‌ ಕಾರ್ಡ್‌ಗೆ ಉಚಿತವಾಗಿ (Free Update) ಅಗತ್ಯ ಮಾಹಿತಿ ಅಪ್‌ಡೇಟ್‌ ಮಾಡಲು ನೀಡಿದ್ದ ಗಡುವು ಜೂ.14ರವರೆಗೆ ವಿಸ್ತರಣೆ ಮಾಡಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಾರ್ವಜನಿಕರು ತಮ್ಮ ಆಧಾರ್‌ ಕಾರ್ಡ್‌ಗೆ ಅಗತ್ಯವಿರುವ ಮಾಹಿತಿ ಅಪ್‌ಡೇಟ್‌ ಮಾಡಬಹುದು. ನಿಯಮದ ಪ್ರಕಾರ ನಾಗರಿಕರು ಪ್ರತಿ ಹತ್ತು ವರ್ಷಕ್ಕೊಮ್ಮೆ ಆಧಾರ್‌ಗೆ ಅಗತ್ಯ ಮಾಹಿತಿ ಅಪ್‌ಡೇಟ್‌ ಮಾಡಬೇಕು. ತಮ್ಮ ಗುರುತು ಮತ್ತು ವಿಳಾಸದ ದಾಖಲೆಗಳನ್ನು ಒದಗಿಸಬೇಕು. ಮಕ್ಕಳ ಬಯೋಮೆಟ್ರಿಕ್‌ ದಾಖಲೆಗಳನ್ನು ನೀಡಬೇಕು. … Read more

ಉಪನ್ಯಾಸಕನಿಗೆ ಸಂಕಷ್ಟ ತಂದೊಡ್ಡಿದ ಪ್ರಿಯಾ, ಲಕ್ಷ ಲಕ್ಷ ಮಂಗಮಾಯ, ಆಗಿದ್ದೇನು?

SMS-Fraud-Shimoga-CEN-Police-Station.

SHIVAMOGGA LIVE NEWS | 14 MAY 2024 CYBER CRIME : ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು (Online task fraud) ನಂಬಿ ಉಪನ್ಯಾಸಕರೊಬ್ಬರು 13.33 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಜಾಹೀರಾತಿನ ಕೆಳಗಿದ್ದ ADD ಬಟನ್‌ ಕ್ಲಿಕ್‌ ಮಾಡಿದ ಭದ್ರಾವತಿಯ ಉಪನ್ಯಾಸಕರೊಬ್ಬರು (ಹೆಸರು ಗೌಪ್ಯ) ಪ್ರಿಯಾ ಎಂಬ ಟೆಲಿಗ್ರಾಂ ಅಕೌಂಟ್‌ಗೆ ಜಾಯಿನ್‌ ಆಗಿದ್ದರು. ಆರಂಭದಲ್ಲಿ ವಿಡಿಯೋ ರಿವ್ಯೂಗೆ 120 ರೂ. ಹಣ ಕೊಡುವುದಾಗಿ ನಂಬಿಸಿದ್ದ ಪ್ರಿಯಾ, ಹಣ ಕಳುಹಿಸಿದ್ದರು. ನಂತರ ವಿವಿಧ ಟಾಸ್ಕ್‌ ಪೂರೈಸಿದರೆ ಹಣ … Read more

ತೀರ್ಥಹಳ್ಳಿಯಲ್ಲಿ ಡಿಕೆಶಿ ರಾಜೀನಾಮೆಗೆ ಪಟ್ಟು, ಸಿಬಿಐ ತನಿಖೆಗೆ ಆಗ್ರಹ

JDS-protest-in-Thirthahalli-submit-memorandum

SHIVAMOGGA LIVE NEWS | 14 MAY 2024 THIRTHAHALLI : ಹಾಸನ ಪೆನ್‌ಡ್ರೈವ್‌ ಪ್ರಕರಣದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೆಸರು ಕೇಳಿ ಬಂದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆ ಬದಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ತೀರ್ಥಹಳ್ಳಿ ತಾಲೂಕು ಜೆಡಿಎಸ್‌ ವತಿಯಿಂದ ಆಗ್ರಹಿಸಿಲಾಯಿತು. ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರ ಜೆಡಿಎಸ್‌ ಕಾರ್ಯಕರ್ತರು, ಪೆನ್‌ ಡ್ರೈವ್‌ ವಿಚಾರದಲ್ಲಿ ಜೆಡಿಎಸ್‌ ಪಕ್ಷದ ನಾಯಕರ ವಿರುದ್ಧ ಅಪವಾದ ಹೊರಿಸಿ ಪಕ್ಷವನ್ನು ದರ್ಬಲಗೊಳಿಸುವ … Read more

ಶಿವಮೊಗ್ಗದಲ್ಲಿ ಕದ್ದು ಲಕ್ಕಿನಕೊಪ್ಪ ಬಳಿ ಮುಚ್ಚಿಡುತ್ತಿದ್ದಾಗ ಪೊಲೀಸರ ದಾಳಿ, ಮುಂದೇನಾಯ್ತು?

Police-Jeep-With-Light-New.

SHIVAMOGGA LIVE NEWS | 14 MAY 2024 SHIMOGA : ನೀರಿನ ಪೈಪ್‌ಲೈನ್‌ ಕೆಲಸಕ್ಕೆ ಬಳಸುತ್ತಿದ್ದ ಪೈಪ್‌ಗಳನ್ನು ಕಳವು ಮಾಡಿ ಲಕ್ಕಿನಕೊಪ್ಪದ ಜಮೀನು ಒಂದರ ಪಕ್ಕದ ಹಳ್ಳದಲ್ಲಿ ಮುಚ್ಚಿಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಪೈಪ್‌ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪವನ್‌, ಮಾಲತೇಶ, ರಮೇಶ, ವಸೀಂ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರು 1.50 ಲಕ್ಷ ರೂ. ಮೌಲ್ಯದ … Read more