ಪೆಟ್ರೋಲ್‌ ದರ ಇಳಿಸುವ ತನಕ ಹೋರಾಟ, ಶಿವಮೊಗ್ಗದಲ್ಲಿ ಪ್ರತಿಭಟನೆ ಸ್ವರೂಪ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ

-BY-Vijayendra-in-Mattur-Village-in-Shimoga.

SHIVAMOGGA LIVE NEWS | 18 JUNE 2024 SHIMOGA : ರಾಜ್ಯ ಸರ್ಕಾರ ಪೆಟ್ರೋಲ್‌, ಡಿಸೇಲ್‌ ದರ ಇಳಿಸುವವರೆಗೂ ಹೋರಾಟ (Protest) ನಡೆಸುತ್ತೇವೆ. ರಾಜ್ಯಾದ್ಯಂತ ಗುರುವಾರ ರಸ್ತೆ ತಡೆ ನಡೆಸುತ್ತೇವೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಶಿವಮೊಗ್ಗದ ಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಪ್ರತಿ ವಸ್ತುವಿನ ದರ ಏರಿಕೆಯಾಗಿದೆ. ಈ ಹಿಂದೆ ಮದ್ಯದ ದರ ಹೆಚ್ಚಳ ಮಾಡಿದ್ದರು. ಪಟ್ರೋಲ್‌, ಡಿಸೇಲ್‌ ದರ ಏರಿಸಿದ್ದಾರೆ. … Read more

ಸಿಗಂದೂರು ಲಾಂಚ್‌, ಸ್ಥಳ ಪರಿಶೀಲನೆ ಬಳಿಕ ಕಡವು ನಿರೀಕ್ಷಕರಿಂದ ಮಹತ್ವದ ಪತ್ರ

Sigandur-Launch-in-sharavathi-back-water.

SHIVAMOGGA LIVE NEWS | 18 JUNE 2024 SAGARA : ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ತಗ್ಗಿದೆ. ಈ ಹಿನ್ನೆಲೆ ಜೂನ್‌ 19ರಿಂದ ಸಿಗಂದೂರು ಲಾಂಚ್‌ನಲ್ಲಿ (Launch) ವಾಹನಗಳ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಲಸಾರಿಗೆ ಮಂಡಳಿಯ ಶಿವಮೊಗ್ಗ ವಲಯದ ಕಡವು ನಿರೀಕ್ಷಕ ಸಾಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಅಂಬರಗೋಡ್ಲು ಕಳಸವಳ್ಳಿ ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಕಡಿಮೆಯಾಗಿದೆ. ಸ್ಥಳ ಪರಿಶೀಲನೆ ವೇಳೆ, ಬಸ್ಸು ಸೇರಿದಂತೆ ಯಾವುದೇ ವಾಹನಗಳನ್ನು … Read more

ರೈಲು ಅಪಘಾತ, ಕೇಂದ್ರ ಸಚಿವರ ರಾಜೀನಾಮೆಗೆ ಶಿವಮೊಗ್ಗದಲ್ಲಿ ಒತ್ತಾಯ

North-Block-cogress-memorandum-about-railway-in-Shimoga

SHIVAMOGGA LIVE NEWS | 18 JUNE 2024 SHIMOGA : ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ರೈಲು (Railway) ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ದೇಶಕ್ಕೆ ಬುಲೆಟ್ ರೈಲು ಕೊಡುತ್ತೇವೆ … Read more

ಶಿವಮೊಗ್ಗದಲ್ಲಿ ಪೊಲೀಸರೆ ಮುಂದೆ ನಿಂತು ಕನ್ಸರ್‌ವೆನ್ಸಿ ಕ್ಲೀನ್‌ ಮಾಡಿಸಿದರು, ಯಾಕೆ?

Traffic-Police-Clear-the-conservency-in-Savarline-road

SHIVAMOGGA LIVE NEWS | 18 JUNE 2024 SHIMOGA : ರಾಶಿ ರಾಶಿ ಕಸ. ಎಲ್ಲೆಂದರಲ್ಲಿ ಬೆಳದ ಗಿಡ. ಹತ್ತರ ಹೋದರೆ ಸಾಕು ಕಾನ್ಸರ್‌ವೆನ್ಸಿಯಿಂದ ಮೂಗಿಗೆ ರಾಚುತ್ತಿತ್ತು ದುರ್ನಾಥ. ಇಂತಹ ಕನ್ಸರ್‌ವೆನ್ಸಿಯನ್ನು (conservancy) ಶಿವಮೊಗ್ಗದ ಟ್ರಾಫಿಕ್‌ ಪೊಲೀಸರೆ ಮುಂದೆ ನಿಂತು ಇಂತಹ ಕ್ಲೀನ್‌ ಮಾಡಿಸಿದ್ದಾರೆ. ಅಲ್ಲಿ ಈಗ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿದ್ದಾರೆ. ಸವಾರ್‌ ಲೈನ್‌ ರಸ್ತೆಯ ಮಲ್ನಾಡ್‌ ಕೆಫೆ ಪಕ್ಕದ ಕನ್ಸರ್‌ವೆನ್ಸಿ ಕಸದ ತೊಟ್ಟಿಯಂತಾಗಿತ್ತು. ಇವತ್ತು ಸಂಚಾರಿ ಪೊಲೀಸರೆ ಮುಂದೆ ನಿಂತು ಕನ್ಸರ್‌ವೆನ್ಸಿಯನ್ನು ಸ್ವಚ್ಛಗೊಳಿಸಿದ್ದಾರೆ. … Read more

ಖಚಿತ ಮಾಹಿತಿ ಮೇರೆಗೆ ಸಾಗರದಲ್ಲಿ ಪೊಲೀಸರ ದಾಳಿ, ಮಾಲು ಸಹಿತ ಮೂವರು ಅರೆಸ್ಟ್‌

Police-raid-at-sagara-three-arrested.

SHIVAMOGGA LIVE NEWS | 18 JUNE 2024 SAGARA : ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಾಗರ ಪೊಲೀಸರು ದಾಳಿ (Raid) ನಡೆಸಿ ಮಾಲು ಸಹಿತ ಮೂವರನ್ನು ಬಂಧಿಸಿದ್ದಾರೆ. ಸಾಗರ ಪಟ್ಟಣದ ಎಳ್ಳಾರೆ ಕ್ರಾಸ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ರಾಘವೇಂದ್ರ, ಹೊಸೂರು ಮರಾಠಿ ಗ್ರಾಮದ ರಮೇಶ್‌, ಕದರೂರು ಗ್ರಾಮದ ಪ್ರವೀಣ್‌ ಬಂಧಿತರು. ಇವರಿಂದ 23 ಸಾವಿರ ರೂ. … Read more

ಶಿವಮೊಗ್ಗದ ಮತ್ತೂರಿಗೆ ವಿಜಯೇಂದ್ರ ಭೇಟಿ, ಭಾನುಪ್ರಕಾಶ್‌ ಕುಟುಂಬಕ್ಕೆ ಸಾಂತ್ವನ

BJP-President-BY-Vijayendra-visit-to-Bhanuprakash-house-at-Mattur.

SHIVAMOGGA LIVE NEWS | 18 JUNE 2024 SHIMOGA : ಹೃದಯಾಘಾತದಿಂದ ನಿಧನರಾದ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ (President) ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದರು. ಮತ್ತೂರು ಗ್ರಾಮದ ನಿವಾಸಕ್ಕೆ ಭೇಟಿ ನೀಡಿದ್ದ ವಿಜಯೇಂದ್ರ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ ಬಿ.ವೈ.ವಿಜಯೇಂದ್ರ, ಹಿರಿಯರಾದ ಭಾನುಪ್ರಕಾಶ್ ಅವರ ಅಗಲಿಕೆ ಕಾರ್ಯಕರ್ತರಿಗೆ ದಿಗ್ಭ್ರಮೆ ಉಂಟು ಮಾಡಿದೆ. ಭಾನುಪ್ರಕಾಶ್ ಅವರ ಇಡೀ ಕುಟುಂಬವೇ ಸಂಘಕ್ಕಾಗಿ ದುಡಿದಿದೆ. ಯಾರಿಗೂ ನೋಯಿಸದೆ … Read more

ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Rain-in-Shimoga.webp

SHIVAMOGGA LIVE NEWS | 18 JUNE 2024 RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಸಂಪೂರ್ಣ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಸಾಗರ, ಹೊಸನಗರ ತಾಲೂಕು ಹೊರತು ಉಳಿದೆಲ್ಲು ದೊಡ್ಡ ಪ್ರಮಾಣದ ಮಳೆಯಾಗಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಜೂ.17ರ ಬೆಳಗ್ಗೆ 8.30ರಿಂದ ಜೂ.18ರ ಬೆಳಗ್ಗೆ 8.30ರವರೆಗಿನ ಮಳೆ ಪ್ರಮಾಣವನ್ನು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಭದ್ರಾವತಿಯಲ್ಲಿ 0.2 ಮಿ.ಮೀ, ಹೊಸನಗರದಲ್ಲಿ 2.4 ಮಿ.ಮೀ, ಸಾಗರದಲ್ಲಿ 9 ಮಿ.ಮೀ, ಶಿಕಾರಿಪುರದಲ್ಲಿ 0.6 ಮಿ.ಮೀ, … Read more

ಅಡಿಕೆ ಧಾರಣೆ | 18 ಜೂನ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 18 JUNE 2024 ADIKE RATE : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಂದಾಪುರ ಮಾರುಕಟ್ಟೆ ಹಳೆ ಚಾಲಿ 40000 46500 ಹೊಸ ಚಾಲಿ 30000 38000 ಚನ್ನಗಿರಿ ಮಾರುಕಟ್ಟೆ ರಾಶಿ 50649 53770 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 38000 ವೋಲ್ಡ್ ವೆರೈಟಿ 38000 46000 ಭದ್ರಾವತಿ ಮಾರುಕಟ್ಟೆ ರಾಶಿ 42199 53299 ಯಲ್ಲಾಪುರ ಮಾರುಕಟ್ಟೆ ಅಪಿ 60269 … Read more

ಶಿವಮೊಗ್ಗದ ಈವರೆಗಿನ ಟಾಪ್‌ 10 ಸುದ್ದಿಗಳು – ಓದಲು ಇಲ್ಲಿ ಕ್ಲಿಕ್‌ ಮಾಡಿ – 18 ಜೂನ್‌ 2024

Shivamogga Live Today News

SHIVAMOGGA LIVE NEWS | 18 JUNE 2024 TODAY NEWS : ಶಿವಮೊಗ್ಗ ಲೈವ್‌ನಲ್ಲಿ ಈವರೆಗೂ ಪ್ರಕಟವಾದ 10 ಪ್ರಮುಖ ಸುದ್ದಿಗಳು. ಬಲಭಾಗದಲ್ಲಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ. ಸುದ್ದಿ ಓದಿ. ಬ್ಯಾಕ್‌ ಬಂದು ಮತ್ತೊಂದು ಸುದ್ದಿ ಓದಿ.  ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ? ಪಾರ್ಥೀವ ಶರೀರಕ್ಕೆ ಬಿಜೆಪಿ ಧ್ವಜ ಹೊದಿಸಿ ಅಂತಿಮ ನಮನ, ಪಂಚಭೂತಗಳಲ್ಲಿ ಭಾನುಪ್ರಕಾಶ್‌ ಲೀನ ವಿದ್ಯಾನಗರ ಸಮೀಪ ರೈಲ್ವೆ … Read more

ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?

Bhadra-Dam-General-Image.

SHIVAMOGGA LIVE NEWS | 18 JUNE 2024 BHADARAVATHI : ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಹಾಗಾಗಿ ಭದ್ರಾ ಜಲಾಶಯದ (Dam) ಒಳ ಹರಿವು ಕುಸಿತ ಕಂಡಿದೆ. ಇದು ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ ಮೂಡಿಸಿದೆ. ಜೂ.18ರಂದು ಭದ್ರಾ ಜಲಾಶಯದ ಒಳ ಹರಿವು 446 ಕ್ಯೂಸೆಕ್‌ ಇದೆ. 186 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಇವತ್ತಿಗೆ ನೀರಿನ ಮಟ್ಟ 118.11 ಅಡಿಯಷ್ಟು ಇದೆ. ಒಳ ಹರಿವು ಕಡಿಮೆ ಇರುವುದರಿಂದ ನೀರಿನ ಮಟ್ಟ … Read more