ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್, NSUI ಮುಖಂಡರ ಮೇಲೆ ಪೊಲೀಸರ ಹದ್ದಿನ ಕಣ್ಣು

police jeep

SHIVAMOGGA LIVE NEWS | SHIMOGA | 19 ಏಪ್ರಿಲ್ 2022 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿವಮೊಗ್ಗ ಪ್ರವಾಸದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ಚಲನವಲನ ಗಮನಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗ್ಗೆಯಿಂದ ಮುಖಂಡರ ಮನೆಗಳ ಮುಂದೆ ಪೊಲೀಸರು ಠಿಕಾಣಿ ಹೂಡಿದ್ದಾರೆ. ಯುವ ಕಾಂಗ್ರೆಸ್, NSUI ಸೇರಿದಂತೆ ಯುವ ಮುಖಂಡರಿಗೆ ಇವತ್ತು ಬೆಳ್ಳಂಬೆಳಗ್ಗೆ ಪೊಲೀಸರು ಶಾಕ್ ನೀಡಿದ್ದಾರೆ. ಬೆಳಿಗ್ಗೆ 6 ಗಂಟೆಗೆಲ್ಲಾ ಮುಖಂಡರುಗಳ ಮನೆ ಮುಂದೆ ಹಾಜರಾದ ಪೊಲೀಸರು, ಮುಖ್ಯಮಂತ್ರಿಗಳ ಕಾರ್ಯಕ್ರಮ ಇರುವುದರಿಂದ ನೀವು ಇಂದು … Read more

9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, 49 ವರ್ಷದ ವ್ಯಕ್ತಿಗೆ ಕಠಿಣ ಶಿಕ್ಷೆ, ಎಷ್ಟು ವರ್ಷ ಜೈಲು? ದಂಡವೆಷ್ಟು?

Shimoga District Court

SHIVAMOGGA LIVE NEWS | SHIMOGA | 19 ಏಪ್ರಿಲ್ 2022 ಒಂಭತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಶಿವಮೊಗ್ಗದ ಮಂಜಪ್ಪ (49) ಶಿಕ್ಷೆಗೆ ಒಳಗಾದವನು. ಈತನ ವಿರುದ್ಧ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಏನಿದು ಪ್ರಕರಣ? 2020ರ ಡಿಸೆಂಬರ್ 5ರಂದು 9 ವರ್ಷದ ಬಾಲಕಿ ಬೆಂಕಿ ಪೊಟ್ಟಣ ಕೇಳಿಕೊಂಡು ಮಂಜಪ್ಪನ ಮನೆಗೆ ಬಂದಿದ್ದಳು. ಆಕೆಯ ಮೇಲೆ … Read more

ಮಾಜಿ ಸಚಿವ ಈಶ್ವರಪ್ಪಗಾಗಿ 101 ಈಡುಗಾಯಿ ಸಮರ್ಪಿಸಿದ ಮಹಿಳೆಯರು

101-edugayi-for-Eshwarappa-in-Shimoga

SHIVAMOGGA LIVE NEWS | ESHWARAPPA | 19 ಏಪ್ರಿಲ್ 2022 ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎದುರಾಗಿರುವ ಸಮಸ್ಯೆ ನಿವಾರಣೆಗೆ ಮಹಿಳೆಯರು 101 ತೆಂಗಿನ ಕಾಯಿ ಹೊಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಳದಲ್ಲಿ ಮಾರಿಕಾಂಬ ಟ್ರಸ್ಟ್ ಮಹಿಳಾ ಸಂಯೋಜಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. 40 ವರ್ಷದ ರಾಜಕೀಯ ಇತಿಹಾಸದಲ್ಲಿ ಕೆ.ಎಸ್. ಈಶ್ವರಪ್ಪ ಅವರು ಯಾವುದೇ ರೀತಿಯ ಕಪ್ಪು ಚುಕ್ಕಿ ಇಲ್ಲದಂತ ರಾಜಕಾರಣಿಯಾಗಿದ್ದರು. ಇತ್ತೀಚೆಗೆ ಕೆ.ಎಸ್. ಈಶ್ವರಪ್ಪ ಅವರಿಗೆ ಬಂದಿರುವ ದೋಷವನ್ನು ವಿಮೋಚನೆ … Read more

ಕರ್ನಾಟಕದಲ್ಲೂ ಉತ್ತರ ಪ್ರದೇಶದಂತೆ ರಸ್ತೆಗಿಳಿಯುತ್ತಾ ಬುಲ್ಡೋಜರ್? ಶಿವಮೊಗ್ಗದಲ್ಲಿ ಸಿಎಂ ಹೇಳಿದ್ದೇನು?

Chief-Minister-Basavaraja-Bommai-in-Shimoga-city

SHIVAMOGGA LIVE NEWS | CHIEF MINISTER | 19 ಏಪ್ರಿಲ್ 2022 ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಎಲ್ಲವೂ ಸರಿ ಇದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶಿವಮೊಗ್ಗಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್’ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವೀಡಿಯೋ ಕ್ಲಿಪಿಂಗ್’ಗಳನ್ನು … Read more

ಪೊಲೀಸ್ ಚೌಕಿ ಸುತ್ತಮುತ್ತ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ ಕರೆಂಟ್ ಇರಲ್ಲ?

POWER-CUT-UPDATE-NEWs ELECTRICITY

SHIVAMOGGA LIVE NEWS | MESCOM | 19 ಏಪ್ರಿಲ್ 2022 ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಏಪ್ರಿಲ್ 20ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವೀರಣ್ಣ ಲೇಔಟ್, ಕೆಂಚಪ್ಪ ಲೇಔಟ್, ದಯಾನಂದ ಪ್ರಿಂಟರ್ಸ್, ವಿಜಯ ಅವೆನ್ಯೂ, ಹುಚ್ಚರಾಯ ಕಾಲೋನಿ, ವಿಧಾತ್ರಿ ಭವನ, ಚೇತನಾ ಶಾಲೆ, ಪೊಲೀಸ್ ಚೌಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ | ಇವತ್ತಿನ … Read more

ಎ1 ಆರೋಪಿ ಮಾಜಿ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹ

NSUI-protest-in-Shimoga-against-Eshwarappa

SHIVAMOGGA LIVE NEWS | SHIMOGA | 19 ಏಪ್ರಿಲ್ 2022 ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ NSUI ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗಾಂಧಿ ಪಾರ್ಕ್ ಬಳಿ ಬಸವೇಶ್ವರ ಪ್ರತಿಮೆ ಮುಂಭಾಗ NSUI ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಎ1 ಆರೋಪಿ. ಸರ್ಕಾರವೆ ಅವರ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿದರು. ಎಲ್ಲರಿಗೂ … Read more

ಶಿವಮೊಗ್ಗ ಆಟೋ ಕಾಂಪ್ಲೆಕ್ಸ್’ನಲ್ಲಿ ರಾತ್ರೋರಾತ್ರಿ ಕಾರು ಕಳ್ಳತನ

crime name image

SHIVAMOGGA LIVE NEWS | SHIMOGA AIRPORT | 19 ಏಪ್ರಿಲ್ 2022 ಆಟೋ ಕಾಂಪ್ಲೆಕ್ಸ್’ನ ಶೆಡ್’ನಲ್ಲಿ ನಿಲ್ಲಿಸಿದ್ದ ಕಾರು ರಾತ್ರೋರಾತ್ರಿ ನಾಪತ್ತೆಯಾಗಿದೆ. ಎಲ್ಲೆಡೆ ಹುಡುಕಿದ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವೆಂಕಟೇಶ್ ಎಂಬುವವರಿಗೆ ಸೇರಿದ ಮಾರುತಿ ಓಮ್ನಿ ಕಾರು ಕಳ್ಳತನವಾಗಿದೆ. ಆಟೋ ಕಾಂಪ್ಲೆಕ್ಸ್’ನಲ್ಲಿರುವ ಕಾಂಕ್ರಿಟ್ ಬಾಕ್ಸ್ ತಯಾರಿಸುವ ಶೆಡ್’ನಲ್ಲಿ ಯಾವಾಗಲೂ ಕಾರು ನಿಲ್ಲಿಸುತ್ತಿದ್ದರು. ಸಂಜೆ ವೆಂಕಟೇಶ್ ಅವರು ಕಾರನ್ನು ತಂದು ನಿಲ್ಲಿಸಿದ್ದರು. ಮರುದಿನ ಬೆಳೆಗ್ಗೆ ಹೋಗಿ ನೋಡಿದಾಗ ಕಾರು ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಬಳಿಕ … Read more

ಡಿಸೆಂಬರ್‌ನಿಂದ ವಿಮಾನ ಹಾರಾಟ ಆರಂಭ, ಕಾಮಗಾರಿ ಪರಿಶೀಲನೆಗೆ ಸಿಎಂ ಕರೆತರುವಂತೆ ಯಡಿಯೂರಪ್ಪ ಸೂಚನೆ

Yedyurappa-BY-Raghavendra-visit-Shimoga-Airport

SHIVAMOGGA LIVE NEWS | SHIMOGA AIRPORT | 19 ಏಪ್ರಿಲ್ 2022 ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಅತ್ಯಂತ ಸುಸಜ್ಜಿತವಾಗಿ ಎರಡನೇ ವಿಮಾನ ನಿಲ್ದಾಣ ಶಿವಮೊಗ್ಗದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಸೋಗಾನೆಯಲ್ಲಿ ನಿರ್ಮಾಣ ಹಂತದ ವಿಮಾನ ನಿಲ್ದಾಣದ ಕಾಮಗಾರಿಯ ರನ್-ವೇ, ಪ್ಯಾಸೆಂಜರ್ ಟರ್ಮಿನಲ್ ಕಾಮಗಾರಿ ಪರಿಶೀಲಿಸಿ ಯಡಿಯೂರಪ್ಪ ಅವರು ಮಾತನಾಡಿದರು. ಏಕಕಾಲಕ್ಕೆ ಎರಡು ವಿಮಾನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು. ಅತ್ಯಂತ ಕಡಿಮೆ ಅವಧಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ. 425 ಕೋಟಿ … Read more

ಆನಂದಪುರದಲ್ಲಿ ಕೇರಳದ ವ್ಯಕ್ತಿಯ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ

Anandapura Sagara Graphics

SHIVAMOGGA LIVE NEWS | ANANDAPURA | 19 ಏಪ್ರಿಲ್ 2022 ಬಾರ್ ಒಂದರಲ್ಲಿ ಕ್ಷುಲಕ ವಿಚಾರಕ್ಕೆ ಗಲಾಟೆಯಾಗಿ ವ್ಯಕ್ತಿಯೊಬ್ಬನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೇರಳದ ಜಿಸ್ ಎಂಬಾತನ ಮೇಲೆ ಹಲ್ಲೆಯಾಗಿದೆ. ಸಾಗರ ತಾಲೂಕು ಆನಂದಪುರದ ಬಾರ್ ಒಂದರಲ್ಲಿ ಘಟನೆ ಸಂಭವಿಸಿದೆ. ರಬ್ಬರ್ ಟಾಪಿಂಗ್ ಕೆಲಸ ಮಾಡುತ್ತಿದ್ದ ಜಿಸ್ ಎಂಬಾತ ಆನಂದಪುರದ ಬಾರ್ ಒಂದಕ್ಕೆ ಹೋಗಿದ್ದಾನೆ. ಜಿಸ್’ಗೆ ಕನ್ನಡ ಭಾಷೆ ಬರುವುದಿಲ್ಲ. ಬಾರ್’ನಲ್ಲಿ ಯಾರೊಂದಿಗೋ … Read more

ಭದ್ರಾವತಿಯಲ್ಲಿ ವಾಹನ ದಟ್ಟಣೆ, ಅಪಘಾತದ ಭೀತಿ, ಹಂಪ್’ಗಾಗಿ ಹೋರಾಟ

hashi-kumar-gowda-JDU-Protest-in-Bhadravathi

SHIVAMOGGA LIVE NEWS | BHADRAVATHI | 19 ಏಪ್ರಿಲ್ 2022 ಭದ್ರಾವತಿ ನಗರದ ಕೆಳಸೇತುವೆಯಿಂದ ಉಂಬ್ಳೆಬೈಲು ರಸ್ತೆ ಕೃಷ್ಣಪ್ಪ ವೃತ್ತದವರೆಗಿನ ರಸ್ತೆಗೆ ಹಂಪ್ ಅಳವಡಿಸುವಂತೆ ಆಗ್ರಹಿಸಿ ಜೆಡಿಯು ರಾಜ್ಯ ಉಪಾಧ್ಯಕ್ಷ ಶಶಿಕುಮಾರ್‌ ಎಸ್.ಗೌಡ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿ ಮುಂಭಾಗ ಶಕಶಿಕುಮಾರ್ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಅಂಡರ್‌ಬ್ರಿಡ್ಜ್ನಿಂದ ಉಂಬ್ಳೆಬೈಲು ರಸ್ತೆ ಕೃಷ್ಣಪ್ಪ ಸರ್ಕಲ್‌ವರೆಗೂ ರಸ್ತೆ ಅಗಲೀಕರಣ ಮಾಡಲಾಗಿದೆ. ಹೊಸದಾಗಿ ರಸ್ತೆಯನ್ನು ನಿರ್ಮಿಸಲಾಗಿದೆ. ಕಡದಕಟ್ಟೆ ಬಳಿ ರೈಲ್ವೆ ಮೇಲ್ವೇತುವೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಬದಲಿ … Read more