ನಾಳೆ ಮತದಾನ,‌ ನಾಲ್ವರು ಅಭ್ಯರ್ಥಿಗಳಿಗು ಢವಢವ, ಗುಂಡು, ತುಂಡು ಪಾರ್ಟಿ ವಿಡಿಯೋ ವೈರಲ್

South-West-graduates-constituency-election-candidates

SHIVAMOGGA LIVE NEWS | 2 JUNE 2024 ELECTION NEWS : ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ‌(Voting) ಇನ್ನೊಂದೆ ದಿನ ಬಾಕಿ. ಬಹಿರಂಗ ಪ್ರಚಾರ ಮುಗಿದಿದ್ದು ಈಗ ಮನೆ ಮನೆ ಭೇಟಿ ಆರಂಭವಾಗಿದೆ. ಅಭ್ಯರ್ಥಿಗಳು, ಅವರ ಬೆಂಬಲಿಗರು ಮತದಾರರನ್ನು ನೇರವಾಗಿ ಸಂಪರ್ಕಿಸಿ ತಮ್ಮ ಪರ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ. ಎರಡೂ ಪಕ್ಷದಿಂದಲು ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿರುವುದು … Read more

ಆಭರಣ ಅಂಗಡಿಯಿಂದ ಗಡಿಬಿಡಿಯಲ್ಲಿ ಹೊರಹೋದ ನಾಲ್ವರು, ಸಿಸಿಟಿವಿ ಪರಿಶೀಲಿಸಿದಾಗ ಮಾಲೀಕರಿಗೆ ಶಾಕ್

Jewels-Theft-at-Shimoga-Gandhi-Bazaar.

SHIVAMOGGA LIVE NEWS | 2 JUNE 2024 SHIMOGA : ಉಂಗುರ, ಬೆಳ್ಳಿ ದೀಪ ಖರೀದಿಸುವಂತೆ ನಟಿಸಿ ಆಭರಣದ ಮಳಿಗೆಯೊಂದರಿಂದ 3.51 ಲಕ್ಷ ರೂ. ಮೌಲ್ಯದ ಚಿನ್ನಾಭರಣ (JEWELS) ಕಳವು ಮಾಡಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್‌ ಮುಖ್ಯ ರಸ್ತೆಯ ಸಂಪತ್‌ ಜ್ಯೂವೆಲರ್ಸ್‌ನಲ್ಲಿ ಘಟನೆ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಗೊರೆ ನೀಡಲು ಉಂಗುರ ವಿಚಾರಿಸಿದರು ಉಡುಗೊರೆ ನೀಡಲು ಚಿನ್ನದ ಉಂಗುರು ಮತ್ತು ಬೆಳ್ಳಿ ದೀಪ ವಿಚಾರಿಸಿಕೊಂಡು ಓರ್ವ ಪುರುಷ, ಮೂವರು ಮಹಿಳೆಯರು ಬಂದಿದ್ದರು. ಕಡಿಮೆ … Read more

ಮೊದಲ ದಿನ ಪೋಷಕರಿಂದ ಮಕ್ಕಳಿಗೆ ಅಕ್ಷರಭ್ಯಾಸ, ಶಾರದಾಂಬೆ ಸನ್ನಿಧಿಯಲ್ಲಿ ಪ್ರತಿ ವಿದ್ಯಾರ್ಥಿ ಹೆಸರಿನಲ್ಲಿ ಸಂಕಲ್ಪ

Aksharabhyasa-in-Shimoga-Jain-School.

SHIVAMOGGA LIVE NEWS | 2 JUNE 2024 EDUCATION NEWS : ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಿವೆ. ಶಿಕ್ಷಕರು, ಶಾಲೆ ಆಡಳಿತ ಮಂಡಳಿ ವಿಭಿನ್ನವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿರುವುದು ವರದಿಯಾಗುತ್ತಿವೆ. ಶಿವಮೊಗ್ಗದ ಶಾಲೆಯೊಂದರ ಆಡಳಿತ ಮಂಡಳಿ ಮೊದಲ ದಿನ (First Day) ವಿಶೇಷ ಪೂಜೆ ನೆರವೇರಿಸಿ, ಪೋಷಕರಿಂದ ಅಕ್ಷರಭ್ಯಾಸ ಮಾಡಿಸಿದೆ. ನಗರದ ಜೈನ್‌ ಪಬ್ಲಿಕ್‌ ಶಾಲೆಯಲ್ಲಿ ಮೊದಲ ದಿನ ಸರಸ್ವತಿ ಪೂಜೆ ನೆರವೇರಿಸಲಾಯಿತು. ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಿಯಲ್ಲಿ ಪ್ರತಿ ವಿದ್ಯಾರ್ಥಿ … Read more

ಮುಂಗಾರು ಮಳೆ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

Rain-at-Shimoga

SHIVAMOGGA LIVE NEWS | 2 JUNE 2024 RAINFALL NEWS : ವಾಡಿಕೆಗಿಂತಲು ಮೊದಲೆ ಕೇರಳ ಪ್ರವೇಶಿಸಿರುವ ಮಾನ್ಸೂನ್‌ (Monsoon) ಇವತ್ತು ಕರ್ನಾಟಕದ ಕರಾವಳಿಗೆ ಅಪ್ಪಳಿಸಲಿದೆ. ಆರಂಭದಲ್ಲಿ ದುರ್ಬಲವಾಗಿದ್ದ ಮುಂಗಾರು ಇನ್ಮುಂದೆ ವೇಗ ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂ.2ರಂದು ಕರಾವಳಿಗೆ ಮಾನ್ಸೂನ್‌ ಮಾರುತುಗಳ ಪ್ರವೇಶಿಸಲಿದ್ದು, ಮುಂದೆ ರಾಜ್ಯದ ವಿವಿಧೆಡೆ ಆವರಿಸಿಕೊಳ್ಳಲಿದೆ. ರಾಜ್ಯದಲ್ಲಿ ಶನಿವಾರದಿಂದಲೆ ಉತ್ತಮ ಮಳೆಯಾಗಲಿದೆ. ಬೆಂಗಳೂರು, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಜೂ.2ರಂದು ಹಾಸನ, ಮಂಡ್ಯ, ಕೊಡಗು, ಮೈಸೂರಿನಲ್ಲಿ … Read more

ಶಿವಮೊಗ್ಗದಲ್ಲಿ ಇವತ್ತು ಎಷ್ಟಿದೆ ತಾಪಮಾನ? ಮಳೆ ಆಗಲಿದೆಯಾ? ಇಲ್ಲಿದೆ ಡಿಟೇಲ್ಸ್‌

WEATHER-REPORT-SHIMOGA-

SHIVAMOGGA LIVE NEWS | 2 JUNE 2024 WEATHER REPORT : ಜಿಲ್ಲೆಯಲ್ಲಿ ಮಳೆ ಮಾಯವಾಗಿದ್ದು ತಾಪಮಾನ ಏರಿಕೆಯಾಗಿದೆ. ಇವತ್ತು ಶಿವಮೊಗ್ಗದಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗದಲ್ಲಿ ಬೆಳಗ್ಗೆ 7 ಗಂಟೆಗೆ 24.8 ಡಿಗ್ರಿ, ಬೆಳಗ್ಗ 9ಕ್ಕೆ  ಗಂಟೆಗೆ 28 ಡಿಗ್ರಿ, ಬೆಳಗ್ಗೆ 11 ಗಂಟೆಗೆ  30.1 ಡಿಗ್ರಿ, ಮಧ್ಯಾಹ್ನ 1 ಗಂಟೆಗೆ 30.2 … Read more