ಶಿವಮೊಗ್ಗ ಗಾಂಧಿ ಬಜಾರ್‌ ವ್ಯಾಪಾರಿಗಳದ್ದು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು’ ಸ್ಥಿತಿ

021023 Gandhi Bazaar during 144 section in Shimoga

SHIVAMOGGA LIVE NEWS | 2 OCTOBER 2023 SHIMOGA : ರಾಗಿಗುಡ್ಡದಲ್ಲಿ ಗಲಾಟೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್‌ನಲ್ಲಿ (Gandhi Bazaar) ಅಂಗಡಿ ಮುಂಗಟ್ಟು ಮುಚ್ಚಿಸಲಾಗಿದೆ. ಇದರಿಂದ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ‌ಹತ್ತು ಕೋಟಿ ರೂ. ನಷ್ಟ ಗಾಂಧಿ ಬಜಾರ್‌ನಲ್ಲಿ ದಿನಸಿ, ಜವಳಿ, ಚಿನ್ನಾಭರಣ ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ ವಹಿವಾಟು ನಡೆಯಲಿದೆ. ಹೋಲ್‌ಸೇಲ್‌ ಮತ್ತು ರಿಟೇಲ್‌ ವ್ಯಾಪಾರಿಗಳು ಇಲ್ಲಿದ್ದಾರೆ. ಪ್ರತಿ ದಿನ ಸಾವಿರಾರು ರೂ. ನಿಂದ ಲಕ್ಷಾಂತರ … Read more

ನೇಣು ಬಿಗಿದು ಶಿವಮೊಗ್ಗ ಟ್ರಾಫಿಕ್‌ ಹೆಡ್‌ ಕಾನ್ಸ್‌ಟೇಬಲ್‌ ಆತ್ಮಹತ್ಯೆ

021023 Shimoga Traffic Head Constable Jayppa uppar.webp

SHIVAMOGGA LIVE NEWS | 2 OCTOBER 2023 SHIMOGA : ಸಂಚಾರ ಠಾಣೆ ಹೆಡ್‌ ಕಾನ್ಸ್‌ಟೇಬಲ್‌ (Head constable) ಒಬ್ಬರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿನೋಬನಗರದಲ್ಲಿರುವ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ. ಸಂಚಾರ ಠಾಣೆ ಮುಖ್ಯ ಪೇದೆ ಜಯಪ್ಪ ಉಪ್ಪಾರ್‌ ಮೃತರು. ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಜಯಪ್ಪ ಉಪ್ಪಾರ್‌ ಅವರು ವಿಶ್ರಾಂತಿಯ ಅವಧಿ ಇದ್ದಿದ್ದರಿಂದ ಮನೆಗೆ ಮರಳಿದ್ದರು. ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ- ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಕನ್ನಡಪರ ಸಂಘಟನೆ ಮುಖಂಡರು … Read more

ರಾಗಿಗುಡ್ಡ ಈಗ ಖಾಕಿ ಕೋಟೆ, ಏರಿಯಾದ ಒಳ, ಹೊರ ಹೋಗಲು ಬೇಕು ಪರ್ಮಿಷನ್‌, ಹೇಗಿದೆ ಸದ್ಯದ ಪರಿಸ್ಥಿತಿ?

021023 Heavy Police deployed in Shanthi Nagara in Shimoga.webp

SHIVAMOGGA LIVE NEWS | 2 OCTOBER 2023 SHIMOGA : ಕಲ್ಲು ತೂರಾಟ (Stone Pelting) ಪ್ರಕರಣದ ಬಳಿಕ ರಾಗಿಗುಡ್ಡ ಖಾಕಿ ಭದ್ರ ಕೋಟೆಯಾಗಿದೆ. ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಜನ ಗುಂಪುಗೂಡದಂತೆ ಎಚ್ಚರ ವಹಿಸಲಾಗಿದೆ. ಬಡಾವಣೆಯ ಒಳ ಮತ್ತು ಹೊರ ಹೋಗಲು ಸ್ಪಷ್ಟ ಕಾರಣ ತಿಳಿಸಬೇಕಾಗಿದೆ. ಶನಿವಾರ ಸಂಜೆ ಈದ್‌ ಮಿಲಾದ್‌ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ (Stone Pelting) ನಡೆಸಿದ್ದರು. ಈ ಘಟನೆ ಬೆನ್ನಿಗೆ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಜನ ಗುಂಪುಗೂಡದಂತೆ ತಡೆಯಲು … Read more

ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಕಾವು, ವಾಸ್ತವದಲ್ಲಿ ಹೇಗಿದೆ ಗೊತ್ತಾ ನಮ್ಮೂರು?

021023 Nehru Road During 144 Section

SHIVAMOGGA LIVE NEWS | 02 OCTOBER 2023 SHIMOGA : ರಾಗಿಗುಡ್ಡದಲ್ಲಿ (ragi gudda) ಕಲ್ಲು ತೂರಾಟ ಪ್ರಕರಣದ ಹಿನ್ನಲೆ ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿಯಿಂದ ನಗರದಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ವಾಸ್ತವದಲ್ಲಿ ಹೇಗಿದೆ ನಮ್ಮೂರು? ಬಸ್, ಆಟೋ, ಟ್ರ್ಯಾಕ್ಸ್ ಸಂಚಾರ ಶಿವಮೊಗ್ಗ ನಗರದ ರಾಗಿಗುಡ್ಡ (ragi gudda) ಹೊರತು ಉಳಿದೆಲ್ಲೆಡೆ ನಗರ ಶಾಂತವಾಗಿದೆ. ಜನಜೀವನ ಎಂದಿನಂತೆಯೆ ಇದೆ. ಕೆಎಸ್‌ಆರ್‌ಟಿಸಿ, ಖಾಸಗಿ ಮತ್ತು ಸಿಟಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆಯು ಸಾಮಾನ್ಯವಾಗಿದೆ. … Read more

ಶಿವಮೊಗ್ಗದಲ್ಲಿ ನಿಷೇಧಾಜ್ಞೆಗೆ ವರ್ತಕರು ಗರಂ, ಗಾಂಧಿ ಬಜಾರ್‌ ಬಂದ್‌ಗೆ ಆಕ್ರೋಶ

021023 Mathura Gopinath press meet

SHIVAMOGGA LIVE NEWS | 02 OCTOBER 2023 SHIMOGA : ರಾಗಿಗುಡ್ಡದಲ್ಲಿ ಕಲ್ಲು ತೂರಟ ಪ್ರಕರಣ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ‌. ಇದರಿಂದ ನಗರದ ವಾಣಿಜ್ಯ ಉದ್ಯಮಕ್ಕೆ ತೊಂದರೆ ಉಂಟಾಗಿದೆ. ನಿಷೇಧಾಜ್ಞೆಯನ್ನು ರಾಗಿಗುಡ್ಡಕ್ಕೆ (ragi gudda) ಸೀಮಿತಗೊಳಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ (ragi gudda) ಘಟನೆ ಸಂಭವಿಸಿದೆ. ಆದರೆ ಗಾಂಧಿ ಬಜಾರ್ ಸೇರಿದಂತೆ ವಿವಿಧೆಡೆ ಅಂಗಡಿ – ಮುಂಗಟ್ಟು … Read more

ಶಿವಮೊಗ್ಗದ ಗಾಂಧಿ ಬಜಾರ್, ನೆಹರೂ ರಸ್ತೆ ಬಂದ್, ವ್ಯಾಪಾರ, ವಹಿವಾಟು ಸ್ಥಗಿತ

Gandhi Bazaar closed

SHIVAMOGGA LIVE NEWS | 02 OCTOBER 2023 SHIMOGA : ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಘಟನೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ (Prohibitory) ಜಾರಿಗೊಳಿಸಲಾಗಿದೆ. ಈ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿ ಬಜಾರ್‌ನಲ್ಲಿ (Gandhi Bazaar) ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿದೆ. ಗಾಂಧಿ ಬಜಾರ್‌ನಲ್ಲಿ (Gandhi Bazaar) ಎಂದಿನಂತೆ ಬೆಳಗ್ಗೆಯಿಂದ ವ್ಯಾಪಾರ, ವಹಿವಾಟು ಆರಂಭವಾಗಿತ್ತು. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ಪೊಲೀಸ್ ವಾಹನಗಳಲ್ಲಿ ಮೈಕ್ … Read more