ಶಿವಮೊಗ್ಗದಲ್ಲಿ ದಸರಾ ಮೆರವಣಿಗೆಗೆ ಚಾಲನೆ, ನಂದಿ ಕೋಲಿಗೆ ಡಿಸಿ, ಮೇಯರ್ ಪೂಜೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2021 ಶಿವಮೊಗ್ಗದಲ್ಲಿ ನಾಡದೇವಿ ಚಾಮುಂಡೇಶ್ವರಿಯ ವೈಭವದ ರಾಜಬೀದಿ ಮೆರವಣಿಗೆ ಆರಂಭವಾಗಿದೆ. ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಮುಂದೆ ನಂದಿ ಕೋಲಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನಿಡಲಾಯಿತು. ಮೇಯರ್ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆ ಸದಸ್ಯರು, ಅಧಿಕಾರಿಗಳು ನಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಲಾರಿ ಮೇಲೆ ಅಂಬಾರಿ ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಗೆ ಹೂವು ಹಾಕಿ ನಮನ ಸಲ್ಲಿಸಲಾಯಿತು. ಈ ಭಾರಿ ಲಾರಿಯಲ್ಲಿ ನಾಡದೇವಿಯ ಮೆರವಣಿಗೆ ನಡೆಸಲಾಗುತ್ತಿದೆ. … Read more