BREAKING | ಶಿವಮೊಗ್ಗದಲ್ಲಿ ವ್ಯಕ್ತಿಗೆ ಚಾಕು ಇರಿತ, ಪರಿಚಿತನಿಂದ ಕೃತ್ಯ

breaking news graphics

SHIVAMOGGA LIVE | 8 ಮಾರ್ಚ್ 2022 ಕ್ಷುಲಕ ವಿಚಾರಕ್ಕೆ ಜಗಳವಾಗಿ ವ್ಯಕ್ತಿಯಿಬ್ಬರಿಗೆ ಚಾಕು ಇರಿಯಲಾಗಿದೆ. ಗಂಭೀರ ಗಾಯಗೊಂಡಿರುವ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಬಾಪೂಜಿನಗರದ ಪಾಚಾ ಖಾನ್ (40) ಚಾಕು ಇರಿತಕ್ಕೆ ಒಳಗಾದವರು. ದೇಹದ ವಿವಿಧೆಡೆ ಚಾಕು ಇರಿತದಿಂದ ಗಾಯವಾಗಿದೆ. ಶಂಕರಮಠ ರಸ್ತೆಯ ಟಾಟಾ ಶೋ ರೂಂ ಬಳಿ ಘಟನೆ ಸಂಭವಿಸಿದೆ. ಚಾಕು ಇರಿತಕ್ಕೆ ಕಾರಣವೇನು? ಪಾಚಾ ಸಾಬ್ ಮತ್ತು ಆರ್‌ಎಂಎಲ್ ನಗರದ ದಸ್ತಗೀರ್ ಮಧ್ಯೆ ಒಂದು ಲಕ್ಷ ರೂ. ಹಣಕಾಸು ವಿಚಾರವಾಗಿ ಜಗಳ … Read more

ಕಮಲಾ ನೆಹರೂ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ, ವಿದ್ಯಾರ್ಥಿನಿಯರ ಭರ್ಜರಿ ಡಾನ್ಸ್ | VIDEO

Womens-Day-in-Kamala-Nehru-College.

SHIVAMOGGA LIVE NEWS | 8 ಮಾರ್ಚ್ 2022 ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶಿವಮೊಗ್ಗದ ಕಮಲಾ ನೆಹರೂ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು. ವಿವಿಧ ಸಿನಿಮಾ ಹಾಡುಗಳಿಗೆ ಎಲ್ಲರೂ ಸಾಮೂಹಿಕವಾಗಿ ಡಾನ್ಸ್ ಮಾಡಿ ಸಂಭ್ರಮಿಸಿದರು. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ. | ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ ಈ ಮೇಲ್ – shivamoggalive@gmail.com WhatsApp Number – 7411700200

ಶಿವಮೊಗ್ಗದಲ್ಲಿ ಮಹಿಳಾ ಕಾಂಗ್ರೆಸ್’ನಿಂದ ವಿಭಿನ್ನವಾಗಿ ಮಹಿಳಾ ದಿನಾಚರಣೆ

Mahila-congress-felication-during-womens-day

SHIVAMOGGA LIVE NEWS | 8 ಮಾರ್ಚ್ 2022 ವಿಶ್ವ ಮಹಿಳಾ ದಿನಾಚರಣೆಯನ್ನು ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಭಿನ್ನವಾಗಿ ಆಚರಿಸಲಾಯಿತು. ಶಿವಮೊಗ್ಗದ ಬೀದಿ ಬದಿ ವ್ಯಾಪಾರಿಗಳು, ಪೌರ ಕಾರ್ಮಿಕ ಮಹಿಳೆಯರನ್ನು ಸನ್ಮಾನಿಸಿ, ಮಹಿಳಾ ದಿನಾಚರಣೆ ಶುಭಾಶಯ ತಿಳಿಸಲಾಯಿತು. ಶಿವಮೊಗ್ಗ ನಗರದ ವಿವಿಧೆಡೆ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ಮಹಿಳೆಯರು, ಪೌರ ಕಾರ್ಮಿಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಶಾಲು ಹೊದಿಸಿ ಸನ್ಮಾನ ಮಾಡಿ, ಸೀರೆಯನ್ನು ಉಡುಗೊರೆಯಾಗಿ ನೀಡಲಾಯಿತು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ ಅವರ ನೇತೃತ್ವದಲ್ಲಿ … Read more

ಇವತ್ತಿನ ಅಡಕೆ ಧಾರಣೆ | 8 ಮಾರ್ಚ್ 2022

Areca Price in Shimoga APMC

SHIVAMOGGA LIVE NEWS | 8 ಮಾರ್ಚ್ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 18169 33900 ಬೆಟ್ಟೆ 46690 50909 ರಾಶಿ 42869 45909 ಸರಕು 51009 76640 ಸಾಗರ ಮಾರುಕಟ್ಟೆ ಕೆಂಪುಗೋಟು 18219 35389 ಕೋಕ 13272 31209 ಚಾಲಿ 21872 37113 ಬಿಳೆ ಗೋಟು 14342 27229 ರಾಶಿ 39699 46109 ಸಿಪ್ಪೆಗೋಟು 5690 19299 ಶಿರಸಿ ಮಾರುಕಟ್ಟೆ ಚಾಲಿ 34629 41291 ಬೆಟ್ಟೆ … Read more

ಪ್ರಧಾನಿ ಮೋದಿ ಭೇಟಿ ಮೊದಲು ಹೊಳಲೂರಿನಲ್ಲಿ ಕೇಂದ್ರದ ಅಧಿಕಾರಿಗಳ ಪರಿಶೀಲನೆ

Officials-Visit-Before-PM-Modi-Visit

SHIVAMOGGA LIVE NEWS | 8 ಮಾರ್ಚ್ 2022 ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಇವತ್ತು ಶಿವಮೊಗ್ಗದ ಹೊಳಲೂರು ಗ್ರಾಮದಲ್ಲಿ ಪರಿಶೀಲನೆ ನಡೆಸಿದರು. ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಅಪರ ಕಾರ್ಯದರ್ಶಿ ಡಾ. ಚಂದ್ರಶೇಖರ್ ಕುಮಾರ್, ರಾಜ್ಯ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಪಾ ಶರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳು ಹೊಳಲೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಏನೆಲ್ಲ ಪರಿಶೀಲಿಸಿದರು? ಹೊಳಲೂರು ಗ್ರಾಮದ ಸ್ವಚ್ಚ … Read more

ಶಿವಮೊಗ್ಗದ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮಹಿಳೆಯರಿಗೆ ವಿಶೇಷ ಪ್ಯಾಕೇಜ್

Shimoga-Nanjappa-Hospital

SHIVAMOGGA LIVE NEWS | 8 ಮಾರ್ಚ್ 2022 ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶಿವಮೊಗ್ಗದ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಮಹಿಳೆಯರಿಗೆ ವಿಶೇಷ ಆರೋಗ್ಯ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ. ಮಹಿಳಾ ಆರೋಗ್ಯ ತಪಾಸಣೆ ಪ್ಯಾಕೇಜನ್ನು ಇವತ್ತು ಪ್ರಕಟಿಸಲಾಗಿದೆ. ವೈದ್ಯರ ಸಮಾಲೋಚನೆಯೊಂದಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಇದಕ್ಕೆ ಕೇವಲ 1 ಸಾವಿರ ರೂ. ನಿಗದಿ ಮಾಡಲಾಗಿದೆ. ಇದರ ವಿವರ ಕಳೆಗಿರುವ ಫೋಟೋದಲ್ಲಿದೆ. ಆಸಕ್ತರು ಕೆಳಗಿರುವ ದೂರವಾಣಿ ನಂಬರ್’ಗೆ ಕರೆ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಬಹುದು. ಇದನ್ನೂ ಓದಿ | ಇವತ್ತಿನ … Read more

ಶಿವಮೊಗ್ಗದಲ್ಲಿ ಪುನೀತ್ ರಾಜಕುಮಾರ್ ಕಟೌಟ್ ನಿಲ್ಲಿಸಿದ ಅಭಿಮಾನಿಗಳು

Puneeth-Rajkumar-James-Cutout-in-Shimoga.

SHIVAMOGGA LIVE NEWS | 8 ಮಾರ್ಚ್ 2022 ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ನಟ ಪುನೀತ್ ರಾಜಕುಮಾರ್ ಅವರ ಬೃಹತ್ ಕಟೌಟ್ ನಿಲ್ಲಿಸಿದ್ದಾರೆ. ಹಾರ ಹಾಕಿ ಅಪ್ಪು ಪರವಾಗಿ ಘೋಷಣೆಗಳನ್ನು ಕೂಗಿದರು. ಶಿವಮೊಗ್ಗದ ಹೆಚ್.ಪಿ.ಸಿ ಚಿತ್ರಮಂದಿರದ ಮುಂದೆ ನಟ ಪುನೀತ್ ರಾಜಕುಮಾರ್ ಅವರ 30 ಅಡಿ ಉದ್ದದ ಕಟೌಟ್ ನಿಲ್ಲಿಸಲಾಗಿದೆ. ಬೆಳಗ್ಗೆ ಕಟೌಟ್ ನಿಲ್ಲಿಸಿದ ಅಭಿಮಾನಿಗಳು, ಹಾರ ಹಾಕಿ ಸಂಭ್ರಮಿಸಿದರು. ಇದನ್ನೂ ಓದಿ | ನಟ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಸೈಕಲ್ ಜಾಥಾ, ಎಲ್ಲಿವರೆಗೆ ಜಾಥಾ ನಡೆಯುತ್ತೆ? … Read more

ಗಾಜನೂರಿನಲ್ಲಿ ಪೊಲೀಸರ ದಾಳಿ, ಆರು ಮಂದಿ ವಿರುದ್ಧ ಕೇಸ್

Tunga-Nagara-Police-Station-Shimoga

SHIVAMOGGA LIVE NEWS | 8 ಮಾರ್ಚ್ 2022 ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಗಾಜನೂರು ಮೊರಾರ್ಜಿ ವಸತಿ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ಜನರು ಗುಂಪು ಕಟ್ಟಿಕೊಂಡು ಜೂಜಾಟದಲ್ಲಿ ತೊಡಗಿದ್ದರು. ಇದರ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಾಕಿ ಕಂಡು ಕಾಲ್ಕಿತ್ತರು ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜೂಜಾಟದಲ್ಲಿ ತೊಡಗಿದ್ದ ಆರು ಮಂದಿ ಪರಾರಿಯಾಗಿದ್ದಾರೆ. ಬೆನ್ನಟ್ಟಿದ ಪೊಲೀಸರು ಇಬ್ಬರನ್ನು ಹಿಡಿದುಕೊಂಡಿದ್ದಾರೆ. … Read more

ಶಿವಮೊಗ್ಗದಲ್ಲಿ ಮುಂದುವರೆದ ಹಿಜಾಬ್ ಪರ ಹೋರಾಟ

Muslim-Students-Protest-in-favour-of-Burkha.

SHIVAMOGGA LIVE NEWS | 8 ಮಾರ್ಚ್ 2022 ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿ ಶಾಲೆ, ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಬೇಕು. ಅಲ್ಲದೆ ಪರೀಕ್ಷೆ ಬರೆಯಲು ತಮಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ | ಇವತ್ತಿನ ಎಲ್ಲಾ … Read more

ಸಹ್ಯಾದ್ರಿ ಕಾಲೇಜು ವಾಟ್ಸಪ್ ಗ್ರೂಪ್’ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕರ್, ವಿದ್ಯಾರ್ಥಿಗಳ ಆಕ್ರೋಶ

ABVP-Protest-in-Shimoga-Sahyadri-College

SHIVAMOGGA LIVE NEWS | 8 ಮಾರ್ಚ್ 2022 ಕಾಲೇಜು ತರಗತಿಯ ವಾಟ್ಸಪ್ ಗ್ರೂಪ್’ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕರ್ ಕಳುಹಿಸಿದ ವಿದ್ಯಾರ್ಥಿಗಳ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಹ್ಯಾದ್ರಿ ಕಾಲೇಜು ಮುಂದೆ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಯೊಬ್ಬರು ತರಗತಿಯ ವಾಟ್ಸಪ್ ಗ್ರೂಪ್’ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕರ್ ಅಪ್ ಲೋಡ್ ಮಾಡಿದ್ದಾರೆ. ಘಟನೆ ನಡೆದು ಒಂದು ತಿಂಗಳು ಕಳೆದಿದೆ ಎಂದು ಆರೋಪಿಸಿದರು. ಇದನ್ನೂ ಓದಿ | ಶಿವಮೊಗ್ಗದಲ್ಲಿ … Read more