ಪುರದಾಳು ರಸ್ತೆಯಲ್ಲಿ ಅಪಘಾತ, ಮಹಿಳೆಯ ಎರಡು ಕಾಲಿನ ಮೂಳೆ ಕಟ್‌ – ಇಲ್ಲಿದೆ 3 ಫಟಾಫಟ್‌ ನ್ಯೂಸ್‌

ACCIDENT-NEWS-GENERAL-IMAGE.

SHIVAMOGGA LIVE NEWS | 13 AUGUST 2024 ಇದನ್ನೂ ಓದಿ ⇒ ಅಡಿಕೆ ಧಾರಣೆ | 12 ಆಗಸ್ಟ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌? ಇದನ್ನೂ ಓದಿ ⇒ ಪ್ರತಿ ತಾಲೂಕಿನಲ್ಲಿ ಬಿಜೆಪಿ ಎರಡು ಭಾಗವಾಗಲಿದೆ, ಹೈಕಮಾಂಡ್‌ಗೆ ಈಶ್ವರಪ್ಪ 4 ಪಾಯಿಂಟ್‌ ಎಚ್ಚರಿಕೆ ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಅಗ್ನಿವೀರರ ನೇಮಕಾತಿ ರ‍್ಯಾಲಿ, ಯಾವೆಲ್ಲ ಜಿಲ್ಲೆಯವರಿಗೆ ಇರಲಿದೆ ಅವಕಾಶ?

ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ

090624 bus mishap near anandapura

SHIVAMOGGA LIVE NEWS | 9 JUNE 2024 SAGARA : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ (PRIVATE BUS) ಪಲ್ಟಿಯಾಗಿದೆ‌. ಸಾಗರ ತಾಲೂಕು ಮುಂಬಾಳು ಬಳಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಬೆಳಗ್ಗೆ ಜೋರು ಮಳೆಯಾಗುತ್ತಿತ್ತು. ಈ ಸಂದರ್ಭ ಮುಂಬಾಳು ತಿರುವಿನಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ‌ ಎನ್ನಲಾಗುತ್ತಿದೆ. ಬಸ್ಸಿನಲ್ಲಿದ್ದ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಆನಂದಪುರ, ಸಾಗರ ಮತ್ತು ಶಿವಮೊಗ್ಗದ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದೆ. ಬಸ್ಸು ಸಾಗರದಿಂದ ಬೆಳ್ತಂಗಡಿಗೆ … Read more

ಆಗುಂಬೆ ಬಳಿ ಅಪಘಾತ, ಒಬ್ಬ ಸಾವು, ಕ್ಯಾಂಟರ್‌ ಜಖಂ

truck-Mishap-near-Agumbe-in-thirthahalli.

SHIVAMOGGA LIVE NEWS | 10 MAY 2024 AGUMBE : ನಿಂತಿದ್ದ ಟಿಪ್ಪರ್‌ ಲಾರಿಗೆ ಕ್ಯಾಂಟರ್‌ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕ್ಯಾಂಟರ್‌ನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ತಾಲೂಕು ಆಗಂಬೆ ಸಮೀಪ ಘಟನೆ ಸಂಭವಿಸಿದೆ. ಕ್ಯಾಂಟರ್‌ನಲ್ಲಿದ್ದ ದೊಡ್ಡಮನೆಕೇರಿಯ ಸಲ್ಮಾನ್‌ ಮೃತ ದುರ್ದೈವಿ. ಚಾಲಕನಿಗೆ ಗಂಭೀರ ಗಾಯವಾಗಿದೆ. ಆತನನ್ನು ಕೂಡಲೆ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕ್ಯಾಂಟರ್‌ ಆಗುಂಬೆಯಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್‌ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಆಗುಂಬೆ … Read more

ಹೊಳೆಹೊನ್ನೂರು ಬಳಿ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್‌, ಸವಾರ ಸಾವು

Holehonnuru-Police-Station-Bhadravathi-jpg

SHIVAMOGGA LIVE NEWS | 24 APRIL 2024 HOLEHONNURU : ಬೈಕ್ ಸವಾರರೊಬ್ಬರು ಆಯತಪ್ಪಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾನೆ. ದಾಸರಕಲ್ಲಹಳ್ಳಿಯ ನೀಲಪ್ಪ (32) ಮೃತ ಬೈಕ್‌ ಸವಾರ. ಬೆಳಿಗ್ಗೆ 10 ಗಂಟೆಗೆ ದಾಸರಕಲ್ಲಹಳ್ಳಿಯಿಂದ ಹೊಳೆಹೊನ್ನೂರಿಗೆ ಹೋಗುತ್ತಿದ್ದಾಗ ಹೊಳೆಹೊನ್ನೂರು ಪಟ್ಟಣ ಸಮೀಪ ಬೈಕ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದ್ದಾರೆ. ತಕ್ಷಣವೆ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಅಸುನೀಗಿದ್ದಾರೆ.  ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡುರಾತ್ರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು, ಸ್ಟ್ರಾಂಗ್‌ ರೂಂ ಲಾಕ್‌ ತೆಗೆಯಲು … Read more

ಡಿವೈಡರ್‌ ಬಳಿ ನಿಂತಿದ್ದ ಬೈಕ್‌ಗೆ ಕಾರು ಡಿಕ್ಕಿ, ಸವಾರನ ಮೂಳೆಗಳು ಕಟ್

ACCIDENT-NEWS-GENERAL-IMAGE.

SHIVAMOGGA LIVE NEWS | 20 APRIL 2024 SAGARA : ರಸ್ತೆ ದಾಟಲು ಡಿವೈಡರ್‌ ಬಳಿ ಬೈಕ್‌ನಲ್ಲಿ ನಿಂತಿದ್ದಾಗ ಕಾರು ಡಿಕ್ಕಿ ಹೊಡೆದು ಸವಾರನ ಮೂಳೆಗಳು ಮುರಿದಿವೆ. ಸಾಗರ ಪಟ್ಟಣದ ಬಿ.ಹೆಚ್‌.ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೆಳಲಮಕ್ಕಿಯ ಚೌಡಪ್ಪ ಗಾಯಗೊಂಡಿದ್ದಾರೆ. ಭಾರತ್‌ ಪೆಟ್ರೊಲ್‌ ಬಂಕ್‌ನಲ್ಲಿ ಬೈಕ್‌ಗೆ ಪೆಟ್ರೋಲ್‌ ಹಾಕಿಸಿಕೊಂಡು ಚೌಡಪ್ಪ ಬೈಕ್‌ನಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆ ಸಾಗರ ಕಡೆಯಿಂದ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಚೌಡಪ್ಪ ಅವರಿಗೆ ಗಾಯವಾಗಿದ್ದು, ಮೂಳೆಗಳು ಮುರಿದಿವೆ … Read more

BREAKING NEWS – ಭೀಕರ ಅಪಘಾತ, KSRTC ಬಸ್ ಡಿಕ್ಕಿ, ಓಮ್ನಿ ನಜ್ಜುಗುಜ್ಜು

110424 KSRTC BUS OMNI car near chinnikatte joga 2

SHIVAMOGGA LIVE NEW S | 11 APRIL 2024 SHIKARIPURA : ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಸವಳಂಗ ಸಮೀಪದ ಚಿನ್ನಿಕಟ್ಟೆ ಬಳಿ ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸವಳಂಗ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋದಲ್ಲಿ ಗಾಂಜಾ ಮಾರಾಟ, ಪೊಲೀಸ್‌ ದಾಳಿ

ಮದುವೆಗೆ ವಾದ್ಯ ನುಡಿಸಲು ತೆರಳುತ್ತಿದ್ದವರಿಗೆ ಬುಳ್ಳಾಪುರ ಬಳಿ ಎದುರಾದ ಜವರಾಯ, ಇಬ್ಬರು ಸಾವು, ಆಗಿದ್ದೇನು?

ACCIDENT-NEWS-GENERAL-IMAGE.

SHIVAMOGGA LIVE NEWS | 3 APRIL 2024 SHIMOGA : ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ವಾದ್ಯ ನುಡಿಸಲು ತೆರೆಳುತ್ತಿದ್ದವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಬುಳ್ಳಾಪುರದಲ್ಲಿ ಘಟನೆ ಸಂಭವಿಸಿದೆ. ನ್ಯಾಮತಿ ತಾಲೂಕು ಕುರುವ ಗ್ರಾಮದ ರಮೇಶ್‌ (19), ಹೊನ್ನಾಳಿ ತಾಲೂಕು ಸೊರಟೂರು ಗ್ರಾಮದ ಅಜಯ್ (23) ಮೃತರು. ಘಟನೆ ಸಂಭವಿಸಿದ್ದು ಹೇಗೆ? ಶಿವಮೊಗ್ಗದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ವಾದ್ಯ ನುಡಿಸಲು ರಮೇಶ್‌, ಅಜಯ್‌ ಸೇರಿದಂತೆ ಐವರು ಮೂರು ಬೈಕ್‌ಗಳಲ್ಲಿ ತೆರಳುತ್ತಿದ್ದರು. … Read more

ಹಣಗೆರೆ ರಸ್ತೆಯಲ್ಲಿ ಚಿರತೆ ಮೃತದೇಹ ಪತ್ತೆ, ಅಪಘಾತಕ್ಕೆ ಬಲಿ ಶಂಕೆ

leopard-found-near-ayanuru-in-hanagere-road-in-Shimoga

SHIVAMOGGA LIVE NEWS | 7 FEBRUARY 2024 SHIMOGA : ಹಣಗೆರೆ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಎರಡು ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಕಲ್ಲುಕುರ್ಚಿ ಗ್ರಾಮದ ಬಳಿ ಮಂಗಳವಾರ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ರಕ್ತದ ಕಲೆಗಳು ಹಾಗೂ ಪಕ್ಕದಲ್ಲಿ ಬಿದ್ದ ಚಿರತೆಯನ್ನು ಕಂಡು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ವನ್ಯಜೀವಿ ವಿಭಾಗದ ಡಿಸಿಎಫ್‌ ಪ್ರಸನ್ನ ಪಟೆಗಾರ್ … Read more

ಮೂರು ಪ್ರತ್ಯೇಕ ಬೈಕ್‌ ಅಪಘಾತ, ಒಬ್ಬ ಸಾವು, ಇಬ್ಬರಿಗೆ ಗಾಯ, ಎಲ್ಲೆಲ್ಲಿ ಹೇಗಾಯ್ತು ಅಪಘಾತ?

ACCIDENT-NEWS-GENERAL-IMAGE.

SHIVAMOGGA LIVE NEWS | 2 JANUARY 2023 ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಮತ್ತೊಂದು ಬೈಕ್‌ ಡಿಕ್ಕಿ SHIMOGA : ಟಿವಿ ರೀಪೇರಿಗೆ ಕುಂಚೇನಹಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ನವೀನ್‌ ಅಲ್ಮೇಡ ಎಂಬುವವರಿಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬೈಕ್‌ ಡಿಕ್ಕಿಯಾಗಿದೆ. ಬೀರನಕೆರೆ ಬಳಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ನವೀನ್‌ ಅಲ್ಮೇಡ ಅವರನ್ನು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಗ ನೋಡಿ ಹಿಂತಿರುಗುತ್ತಿದ್ದಾಗ ಅಪಘಾತ … Read more

ಶಾಲಾ ಬಸ್‌ ಡಿಕ್ಕಿಯಾಗಿ ಸೈಕಲ್‌ ಸಹಿತ ನಾಲೆಗೆ ಬಿದ್ದ ವ್ಯಕ್ತಿ

ACCIDENT-NEWS-GENERAL-IMAGE.

SHIVAMOGGA LIVE NEWS | 11 NOVEMBER 2023 SHIMOGA : ಶಾಲಾ ಬಸ್‌ (School Bus) ಡಿಕ್ಕಿಯಾಗಿ ಸೈಕಲ್‌ ಸವಾರರೊಬ್ಬರು ಕಾಲುವೆಗೆ ಬಿದ್ದು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕಿನ ಮತ್ತೂರಿನಲ್ಲಿ ಘಟನೆ ಸಂಭವಿಸಿದೆ. ಗಾಜನೂರು ಇಂದಿರಾನಗರದ ಪರಶುರಾಮ ಎಂಬುವವರು ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಹಳೇಹೊನ್ನಾಪುರದಿಂದ ಮತ್ತೂರು ಕಡೆಗೆ ಬರುತ್ತಿದ್ದ ಶಾಲಾ ಬಸ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪರಶುರಾಮ ಅವರು ಸೈಕಲ್‌ ಸಹಿತ ಕಾಲುವೆಗೆ ಬಿದ್ದಿದ್ದಾರೆ. ಬಲಗಾಲು ಮತ್ತು ಸೊಂಟಕ್ಕೆ ಪೆಟ್ಟು ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯರು ಪರಶುರಾಮ ಅವರನ್ನು … Read more