SHIMOGA | ಶಿವಮೊಗ್ಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಗೆ ಅಪಘಾತ, ಸಾವಿನ ಕುರಿತು ಪೋಷಕರಿಗೆ ಅನುಮಾನ, ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 07 ಡಿಸೆಂಬರ್ 2019 ಕಾಲೇಜಿನಿಂದ ಸರ್ವೇ ಕ್ಯಾಂಪ್’ಗೆ ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಆದರೆ ಕಾಲೇಜು ಆಡಳಿತ ಮಂಡಳಿಯ ಭಿನ್ನ ಹೇಳಿಕೆ, ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಬಂಧಿಗಳಲ್ಲಿ ಗೊಂದಲ ಸೃಷ್ಟಿಸಿತು. ಇದರಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶವಾಗಾರದ ಬಳಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಣಿತಾ (20) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ಪಿಇಎಸ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿದ್ದ ಪರಿಣಿತಾ ಸರ್ವೇ ಕ್ಯಾಂಪ್’ಗೆ ತೆರಳಿದ್ದಳು. ಈ ವೇಳೆ … Read more

HOSANAGARA | ಅಪಘಾತಕ್ಕೆ ಪತ್ನಿಯೇ ಕಾರಣ, ಕಾನೂನು ಕ್ರಮ ಕೈಗೊಳ್ಳಿ ಅಂತಾ ಪತಿಯಿಂದಲೇ ಪೊಲೀಸ್ ಕಂಪ್ಲೇಂಟ್

ಶಿವಮೊಗ್ಗ ಲೈವ್.ಕಾಂ | HOSANAGARA | 27 ನವೆಂಬರ್ 2019 ಪತ್ನಿಯ ನಿರ್ಲಕ್ಷ್ಯ ಮತ್ತು ದುಡುಕುತನದಿಂದಾಗಿ ಅಪಘಾತ ಸಂಭವಿಸಿದೆ. ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೊಸನಗರದ ರಾಮಚಂದ್ರಾಪುರ ಗ್ರಾಮದ ಬಳಿ ಮಂಗಳವಾರ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಾರು ಫುಲ್ ಜಖಂ ಕಾರು ಸೇತುವೆಯಿಂದ ಕೆಳಗೆ ಪಲ್ಟಿಯಾಗಿ ಬಿದ್ದಿದೆ. ಕಾರಿನ ಮುಂಭಾಗ, ಹಿಂಬದಿ … Read more

ಇಂಟರ್’ಸಿಟಿ ರೈಲಿಗೆ ಸಿಲುಕಿ ಸಾಗರದ ಮೀನು ವ್ಯಾಪಾರಿ ಸಾವು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 7 ನವೆಂಬರ್ 2019 ಇಂಟರ್’ಸಿಟಿ ರೈಲಿಗೆ ಸಿಲುಕಿ ಮೀನು ವ್ಯಾಪಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಸಾಗರದ ಚಂದ್ರಮಾವಿನಕೊಪ್ಪಲು ರೈಲು ಹಳಿ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಗುಲಾಮುಹಿದ್ದಿನ್ ರಸ್ತೆಯ ಮೀನು ವ್ಯಾಪಾರಿ ಮುಕ್ತಿಯಾರ್ (38) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬೆಳಗ್ಗೆ ಇಂಟರ್’ಸಿಟಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಮುಕ್ತಿಯಾರ್ ಅವರ ಪತ್ನಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. … Read more

ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಶರಾವತಿ ಹಿನ್ನೀರಿನ ಕಲ್ಲುಹಳ್ಳಕ್ಕೆ ಪಲ್ಟಿ

ಶಿವಮೊಗ್ಗ ಲೈವ್.ಕಾಂ | HOSANAGARA | 25 ಅಕ್ಟೋಬರ್ 2019 ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಶರಾವತಿ ಹಿನ್ನೀರಿನ ಕಲ್ಲುಹಳ್ಳಕೆ ಉರುಳಿ ಬಿದ್ದಿದೆ. ಬೆಳಗಿನ ಜಾವದಲ್ಲಿ ಘಟನೆ ನಡೆದಿದೆ. ಕಲ್ಲಿದ್ದಲು ತುಂಬಿದ್ದ ಲಾರಿ ಮಂಗಳೂರಿನಿಂದ ರಾಣೆಬೆನ್ನೂರಿಗೆ ತೆರಳುತ್ತಿತ್ತು. ಈ ವೇಳೆ ಘಟನೆ ಸಂಭವಿಸಿದೆ. ಚಾಲಕ ಮತ್ತು ಕ್ಲೀನರ್ ಇಬ್ಬರಿಗು ಗಾಯವಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ … Read more

ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತ, ಪ್ರಯಾಣಿಕರು ಸೇಫ್

ಶಿವಮೊಗ್ಗ ಲೈವ್.ಕಾಂ | SAGARA | 16 ಅಕ್ಟೋಬರ್ 2019 ಶಿವಮೊಗ್ಗ ಸಾಗರ ರಸ್ತೆಯಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಆನಂದಪುರ ಬಳಿಯ ಹೊಸೂರು ರೈಲ್ವೆ ಗೇಟ್ ಬಳಿ ರೈಲ್ವೆ ತಡೆಗೋಡೆಗೆ ಬಸ್ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಹೋಗಿದೆ. ಬಸ್ಸಿನಿಂದ ಕೆಳಗಿಳಿಯಲು ಪ್ರಯಾಣಿಕರ ಹರಸಾಹಸ ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿದ್ದರಿಂದ ಬಸ್ಸಿನ … Read more

ಶಿವಮೊಗ್ಗ ಸಾಗರ ರಸ್ತೆಯಲ್ಲಿ ಭೀಕರ ಅಪಘಾತ, ಮಳೆಯಾಗಿದ್ದರಿಂದ ತಪ್ಪಿತು ಭಾರಿ ಅನಾಹುತ, ಬಸ್ ಪಲ್ಟಿಯಾಗಿದ್ದು ಹೇಗೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 15 ಅಕ್ಟೋಬರ್ 2019 ಶಿವಮೊಗ್ಗ ಸಾಗರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಆಗಿಲ್ಲ. ಹೊಸನಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ನಂಜಪ್ಪ ಹೆಲ್ತ್ ಕೇರ್ ಆಸ್ಪತ್ರೆ ಬಳಿ ಅಪಘಾತಕ್ಕೀಡಾಗಿದೆ. ಟೆಂಪೊ ಟ್ರಾವಲರ್ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಲ್ಲಿ ಚಾಲಕ ಸೇರಿದಂತೆ 20ಕ್ಕು ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ … Read more

ಚೋರಡಿ ಬಳಿ ಟೆಂಪೊ ಟ್ರಾವಲರ್ ಪಲ್ಟಿ, ಪ್ರಯಾಣಿಕರ ರಕ್ಷಣೆಗೆ ನೆರವಾದ ಶಾಸಕ ಹಾಲಪ್ಪ

ಶಿವಮೊಗ್ಗ ಲೈವ್.ಕಾಂ | 19 ಜೂನ್ 2019 ಚೋರಡಿ ಬಳಿ ಪ್ರವಾಸಿ ವಾಹನ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವರಲ್ ವಾಹನ ಪಲ್ಟಿಯಾಗಿದೆ. ಇದೇ ವೇಳೆ, ಸಾಗರ ಶಾಸಕ ಹರತಾಳು ಹಾಲಪ್ಪ, ಅದೇ ಮಾರ್ಗದಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು. ಕೂಡಲೇ ಅಪಘಾತದ ಸ್ಥಳಕ್ಕೆ ತೆರಳಿದ ಅವರು, 108 ಆಂಬುಲೆನ್ಸ್’ಗೆ ಕರೆ ಮಾಡಿದರು. ಬಳಿಕ, ಪಲ್ಟಿಯಾದ ವಾಹನದಲ್ಲಿದ್ದವರನ್ನು ಹೊರಗೆ ತರುವಲ್ಲಿ ಶಾಸಕ ಹಾಲಪ್ಪ, ಅವರ ಅಂಗರಕ್ಷಕ ಹೇಮಕೃಷ್ಣ , ಕಾರು ಚಾಲಕ ಸಾರ್ವಜನಿಕರಿಗೆ ನೆರವಾದರು. ಟೆಂಪೊ ಟ್ರಾವಲರ್’ನಲ್ಲಿದ್ದವರಿಗೆ ಸಣ್ಣಪುಟ್ಟ … Read more

ಮಹಾವೀರ ಸರ್ಕಲ್’ನಲ್ಲಿ ಮತ್ತೊಂದು ಅಪಘಾತ, KSRTC ಬಸ್ ಮುಂಭಾಗ ನುಜ್ಜುಗುಜ್ಜು, ಬೊಲೆರೋ ಪಿಕಪ್ ಪಲ್ಟಿ

ಶಿವಮೊಗ್ಗ ಲೈವ್.ಕಾಂ | 21 ಮೇ 2019 ಮಹಾವೀರ ಸರ್ಕಲ್’ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. KSRTC ಬಸ್ ಮತ್ತು ಬೊಲೆರೋ ಪಿಕಪ್ ವಾಹನಗಳ ನಡುವೆ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಮಹಾವೀರ ಸರ್ಕಲ್’ನಲ್ಲಿ ಬಸ್, ಪಿಕಪ್ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನುಜ್ಜುಗುಜ್ಜಾಗಿದೆ. ಪಿಕಪ್ ವಾಹನ ಪಲ್ಟಿಯಾಗಿದೆ. ಸರ್ಕಲ್’ನಲ್ಲಿದ್ದ ಸಿಗ್ನಲ್ ಲೈಟಿನ ಕಂಬಕ್ಕೂ ಹಾನಿಯಾಗಿದೆ. KSRTC ಬಸ್, ಬಿಜಾಪುರದಿಂದ ಮೈಸೂರಿಗೆ ತೆರಳುತ್ತಿತ್ತು. ಇನ್ನು, ಪಿಕಪ್ ವಾಹನ ಸೈಯದ್ ದಸ್ತಗೀರ್ ಎಂಬುವವರಿಗೆ … Read more

ಮೆಗ್ಗಾನ್ ಆಸ್ಪತ್ರೆ ಮುಂದೆ ಬಸ್ ಅಪಘಾತ, ಸಾಗರ ರಸ್ತೆಯಲ್ಲಿ ಮರಕ್ಕೆ ಗುದ್ದಿದ ರಾಜಹಂಸ

ಶಿವಮೊಗ್ಗ ಲೈವ್.ಕಾಂ | 20 ಮೇ 2019 ಚಾಲಕನ ನಿಯಂತ್ರಣ ತಪ್ಪಿದ KSRTC ರಾಜಹಂಸ ಬಸ್, ಮೆಗ್ಗಾನ್ ಆಸ್ಪತ್ರೆ ಮುಂಭಾಗ, ಸಾಗರ ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ಸಿನ ಮುಂಭಾಗ ಜಖಂ ಆಗಿದೆ. ಗ್ಲಾಸ್ ಪುಡಿಯಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ರಾಜಹಂಸ ಬಸ್, ಇಲ್ಲಿಂದ ಶಿರಸಿ ಕಡೆಗೆ ಪ್ರಯಾಣ ಬೆಳೆಸಿತ್ತು. ಮೆಗ್ಗಾನ್ ಆಸ್ಪತ್ರೆ ಮುಂಭಾಗ, ಪೊಲೀಸ್ ಕ್ಯಾಂಟೀನ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಿದ್ದು ಮತ್ತು ಸಿಟಿ … Read more

ಶಿವಮೊಗ್ಗದಲ್ಲಿ ಆಟೋ, ಕಾರು ಅಪಘಾತ, ನಡು ರಸ್ತೆಯಲ್ಲೇ ಆಟೋ ಪಲ್ಟಿ

110519 Auto Accident at Mahaveera Circle 1

ಶಿವಮೊಗ್ಗ ಲೈವ್.ಕಾಂ | 11 ಮೇ 2019 ನಗರದ ಮಹಾವೀರ ಸರ್ಕಲ್’ನಲ್ಲಿ ಆಟೋ, ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಮತ್ತು ಆಟೋ ಚಾಲಕರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ಪಲ್ಟಿ ಹೊಡೆದಿದ್ದು, ಮುಂಭಾಗ ನುಜ್ಜುಗುಜ್ಜಾಗಿದೆ. ಇನ್ನು, ಕಾರಿಗೂ ಹಾನಿಯಾಗಿದ್ದು, ಚಾಲಕನ ಕಡೆಯ ಬಾಗಿಲಿಗೂ ಹಾನಿಯಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ … Read more