ನಿದಿಗೆಯಲ್ಲಿ ಬೈಕ್‌ ಕದ್ದುಕೊಂಡು ಹೋಗುವಾಗಲೇ ಸಿಕ್ಕಿಬಿದ್ದ ಕಳ್ಳ ರಂಗ

NIDIGE-NEWS-1.jpg

ಶಿವಮೊಗ್ಗ: ಮನೆ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳವು ಮಾಡಿ ತಳ್ಳಿಕೊಂಡು ಹೋಗುತ್ತಿದ್ದಾಗ ಜನರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗದ ನಿದಿಗೆ ಗ್ರಾಮದ ಶರತ್‌ ಎಂಬುವವರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನ ಮಾಡಿಕೊಂಡು ಹೋಗುವಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಶರತ್‌ ತಮ್ಮ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕನ್ನ ವ್ಯಕ್ತಿಯೊಬ್ಬ ಹೊರಗೆ ಕೊಂಡೊಯ್ದು ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗುತ್ತಿದ್ದ. ಶರತ್‌ ಅವರ ತಂದೆ ಇದನ್ನು ಗಮನಿಸಿ ಜೋರಾಗಿ ಜನರನ್ನು ಕೂಗಿದ್ದಾರೆ. ಕಳ್ಳನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೈಕ್‌ … Read more

ಶಿವಮೊಗ್ಗ ಸಿಟಿ, ಬೆಳಗಿನ ಜಾವ ನಡುರಸ್ತೆಯಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ, ಏನಿದು ಕೇಸ್?

Sharavathi-Naraga-Main-Road-in-Shimoga

ಶಿವಮೊಗ್ಗ: ತಾಯಿ ಮತ್ತು ಸಹೋದರನನ್ನು ಬಸ್ಸಿಗೆ ಹತ್ತಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಯುವತಿಯನ್ನು (ಗುರುತು ಗೌಪ್ಯ) ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ (Attempt). ಶಿವಮೊಗ್ಗ ಸರ್ಕಿಟ್‌ ಹೌಸ್‌ ಬಳಿ ಶರಾವತಿ ನಗರ ಎ ಬ್ಲಾಕ್‌ನಲ್ಲಿ ಸೆ.8ರ ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಶಿವಮೊಗ್ಗ ನಗರದ ಯುವತಿಯೊಬ್ಬರು, ತನ್ನ ತಾಯಿ ಮತ್ತು ಸಹೋದರನನ್ನು ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಿಟ್ಟು ಮರಳುತ್ತಿದ್ದರು. ಬಸ್‌ ನಿಲ್ದಾಣದ ಬಳಿ ಇಬ್ಬರು ಯುವಕರು ನಿಂತಿದ್ದರು. … Read more

ಶಿವಮೊಗ್ಗದಲ್ಲಿ ದರೋಡೆಗೆ ಪ್ಲಾನ್‌, ಲಾಂಗು, ರಾಡ್‌, ಖಾರದ ಪುಡಿ ಸಹಿತ ಸಿಕ್ಕಿಬಿತ್ತು ಗ್ಯಾಂಗ್‌

Doddapete-Police-raid-on-Lodge-in-Shimoga.

SHIVAMOGGA LIVE NEWS | 12 FEBRUARY 2024 SHIMOGA : ಮಾರಕಾಸ್ತ್ರ, ಖಾರದ ಪುಡಿ ಹಿಡಿದುಕೊಂಡು ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್‌ ಒಂದನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಪಕ್ಕದ ಎಗ್ಸಿಬಿಷನ್‌ ಗ್ರೌಂಡ್‌ನಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬಾತ ತಪ್ಪಿಸಿಕೊಂಡಿದ್ದಾನೆ. ಚಿನ್ನಾಭರಣದ ದರೋಡಗೆ ಹೊಂಚು ಆ ಭಾಗದಲ್ಲಿ ಓಡಾಡುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಖಾರದ ಪುಡಿ ಎರಚಿ ಚಿನ್ನಾಭರಣ, ನಗದು ದರೋಡೆಗೆ ಹೊಂಚು ಹಾಕಿದ್ದರು ಎಂದು ಆರೋಪಿಸಲಾಗಿದೆ. ಗಸ್ತು ತಿರುಗುತ್ತಿದ್ದ … Read more

ಚಂದ್ರಗುತ್ತಿ ದೇವಸ್ಥಾನದಲ್ಲಿ ಕಳ್ಳತನ ಯತ್ನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌, ಮೂವರು ಅರೆಸ್ಟ್‌, ವಿಚಾರಣೆ ವೇಳೆ ಹೇಳಿದ್ದೇನು?

Three-Arrest-in-Chandragutti-Temple-Theft-Attempt

SHIVAMOGGA LIVE NEWS | 14 AUGUST 2023 CHANDRAGUTTI : ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ (RENUKAMBA TEMPLE) ನಡೆದ ಕಳ್ಳತನ ಯತ್ನ (Theft Attempt) ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾರೆಲ್ಲ ಅರೆಸ್ಟ್‌ ಆಗಿದ್ದಾರೆ? ಆ.3ರಂದು ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ಕಳ್ಳತನಕ್ಕೆ … Read more

ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ ಯತ್ನ, ಸಾಗರ ಪಟ್ಟಣ ಬಂದ್, ಹೇಗಿತ್ತು? ಏನೇನೆಲ್ಲ ಆಯ್ತು?

Sagara-Bandh-Bajarangadal-Protest-March-in-the-city.

SHIVAMOGGA LIVE NEWS |10 JANUARY 2023 ಸಾಗರ : ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ಸಾಗರ ಬಂದ್ (bandh) ಬಹುತೇಕ ಯಶಸ್ವಿಯಾಗಿದೆ. ನಗರದ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು. ಬಸ್ ನಿಲ್ದಾಣಗಳಲ್ಲಿ ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ವಾಹನ ಸಂಚಾರವು ವಿರಳವಾಗಿತ್ತು. ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲೆ ಸಮೀರ್ ಎಂಬಾತ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದ. ಈ ಘಟನೆ ಬೆನ್ನಿಗೆ ಆರೋಪಿಗಳನ್ನು ಬಂಧಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಜರಂಗದಳ, ವಿಶ್ವ ಹಿಂದೂ … Read more

ಬೀಗ ಹಾಕಿದ್ದ ಮನೆ ಮುಂದೆ ಬೆಳಗ್ಗೆ 4 ಗಂಟೆಗೆ ಅನುಮಾನಾಸ್ಪದ ವರ್ತನೆ, ಇಬ್ಬರು ಅರೆಸ್ಟ್

vinobanagara polic station and police jeep

SHIVAMOGGA LIVE NEWS | SHIMOGA | 20 ಜುಲೈ 2022 ಬೀಗ ಹಾಕಿದ ಮನೆಯೊಂದರ ಮುಂದೆ (HOUSE THEFT ATTEMPT) ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಮರ್ಪಕ ಉತ್ತರ ನೀಡದ ಹಿನ್ನೆಲೆ ಬೆಂಗಳೂರಿನ (BANGALORE) ಓರ್ವ ಸೇರಿ ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೊಮ್ಮನಕಟ್ಟೆ ಜಿ ಬ್ಲಾಕ್’ನಲ್ಲಿ (BOMMANAKATTE) ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ, ಇಬ್ಬರು ವ್ಯಕ್ತಿಗಳು ಬೀಗ ಹಾಕಿದ ಮನೆಯೊಂದರ ಮುಂದೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಪೊಲೀಸರನ್ನು (POLICE) ಕಂಡು … Read more

ಪೊಲೀಸ್ ಚೆಕ್ ಪೋಸ್ಟ್ ಕಂಡು ಎಸ್ಕೇಪ್ ಆಗಲು ಯತ್ನ, ಬೆನ್ನಟ್ಟಿದಾಗ ಹೊರಬಿತ್ತು ಕಳ್ಳತನ ಕೇಸ್

Doddapete-Police-Station-General-Image.

SHIVAMOGGA LIVE NEWS | SHIMOGA| 20 ಜೂನ್ 2022 ಪೊಲೀಸರನ್ನು ಕಂಡು ಪರಾರಿಯಾಗುತ್ತಿದ್ದ ಇಬ್ಬರನ್ನು ಬೆನಟ್ಟಿದಾಗ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಘಟನೆಯಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದು, ಮತ್ತೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಟಿಪ್ಪುನಗರದ ಮೊಹಮದ್ ಸಲ್ಮಾನ್ (20) ಬಂಧಿತ. ಪರಾರಿಯಾದವನನ್ನು ಹೊಸಮನೆಯ ರಾಘವೇಂದ್ರ ಅಲಿಯಾಸ್ ರಘು ಎಂದು ಗುರುತಿಸಲಾಗಿದೆ. ಚೆಕ್ ಪೋಸ್ಟ್ ಬಳಿ ಎಸ್ಕೇಪ್ ಯತ್ನ ಆರೋಪಿಗಳು ಎರಡು ಟಿವಿಎಸ್ ಎಕ್ಸಲ್ ಮೊಪೆಡ್’ಗಳಲ್ಲಿ ಅಣ್ಣಾನಗರದ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದರು. ಮಿಳಘಟ್ಟದ … Read more

BREAKING NEWS | ಗಾಂಧಿ ಬಜಾರ್’ನಲ್ಲಿ ವ್ಯಕ್ತಿಗೆ ಚಾಕು ಇರಿತ

Breaking News Plate

SHIVAMOGGA LIVE NEWS | ATTACK | 7 ಜೂನ್ 2022 ಕ್ಷುಲಕ ವಿಚಾರಕ್ಕೆ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ ಬಟ್ಟೆ ಮಾರ್ಕೆಟ್’ನಲ್ಲಿ ಇವತ್ತು ಘಟನೆ ಸಂಭವಿಸಿದೆ.  ಸೆಂಥಿಲ್ ಕುಮಾರ್ (40) ಎಂಬಾತನಿಗೆ ಚಾಕು ಇರಿಯಲಾಗಿದೆ. ಕೂಡಲೆ ಸೆಂಥಿಲ್ ಕುಮಾರನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈಯಕ್ತಿಕ ಕಾರಣಕ್ಕೆ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಜೋಗಿ ಸಂತೋಷ್ ಎಂಬಾತ ಚಾಕು ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ. … Read more

ತೀರ್ಥಹಳ್ಳಿಯಲ್ಲಿ ಪತಿ ಎದುರಲ್ಲೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ

Thirthahalli-Board-in-Thirthahalli-Taluk

SHIVAMOGGA LIVE NEWS | RAPE | 12 ಮೇ 2022 ಪತಿ ಎದುರಲ್ಲೆ ಪತ್ನಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲಿ ಘಟನೆ ಸಂಭವಿಸಿದೆ. ರಾತ್ರಿ ಬಸ್ ಇಳಿದು ನಡೆದು ಹೋಗುತ್ತಿದ್ದ ದಲಿತ ದಂಪತಿ ಮೇಲೆ ನಾಲ್ವರ ಗುಂಪೊಂದು ದಾಳಿ ಮಾಡಿದೆ. ಪತಿ ಮೇಲೆ ಹಲ್ಲೆ ನಡೆಸಿ, ಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ವಾಸಿ 26 ವರ್ಷದ ಮಹಿಳೆಯ ಮಾನಭಂಗಕ್ಕೆ ಯತ್ನಿಸಲಾಗಿದೆ. … Read more

ಶಿವಮೊಗ್ಗದಲ್ಲಿ ಗಾಂಜಾ ಅಮಲಿನಲ್ಲಿದ್ದರ ವಿಚಾರಣೆ ವೇಳೆ ದೊಡ್ಡ ಸಂಚು ಬಯಲು, ಏನದು ಪ್ಲಾನ್?

Shimoga-Doddapete-Police-Arrest-three-for-planing-to-kill-hindu-leader

SHIVAMOGGA LIVE NEWS | MURDER PLAN | 26 ಏಪ್ರಿಲ್ 2022 ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢವಾಗಿದೆ. ವಿಚಾರಣೆ ನಡೆಸಿದಾಗ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿರುವುದನ್ನು ಬಾಯಿ ಬಿಟ್ಟಿದ್ದಾರೆ. ಪೊಲೀಸರ ಮುನ್ನೆಚ್ಚರಿಕೆ ಶಿವಮೊಗ್ಗದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಅನಾಹುತ ತಪ್ಪಿಸಿದೆ. ಏನಿದು ಪ್ರಕರಣ? ಶಿವಮೊಗ್ಗದ ಮೆಹಬೂಬ್ ನಗರದ ಸಲ್ಮಾನ್, ಅರ್ಬಾಜ್, ಉಸ್ಮಾನ್ ಬಂಧಿತರು. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದರು. ‘ಸಂಜೆಯೊಳಗೆ ಸಾಯಿಸುತ್ತೇವೆ’ … Read more